Asianet Suvarna News Asianet Suvarna News

ಶಿವಮೊಗ್ಗ: ಚಡ್ಡಿ ಜೇಬಿನೊಳಗೆ ಕೈ ಹಾಕಿ 37 ಸಾವಿರ ಎಗರಿಸಿದ ಚಾಲಾಕಿ ಕಳ್ಳ..!

ಹೊಸಪೇಟೆ ಮಾರ್ಗದ ಬಸ್ ಹತ್ತುವ ಸಂದರ್ಭ ರಶ್ ಹೆಚ್ಚಾಗಿತ್ತು. ಈ ವೇಳೆ ಚೌಡಪ್ಪ ಅವರ ಚೆಡ್ಡಿ ಜೇಬಿಗೆ ಯಾರೋ ಕೈ ಹಾಕಿದಂತಾಗಿದೆ. ಬಳಿಕ ಪರಿಶೀಲಿಸಿದಾಗ ₹37 ಸಾವಿರ ಹಣ ಜೇಬಲ್ಲಿ ಇರಲಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

37000 Rs Theft in Shivamogga grg
Author
First Published Dec 19, 2023, 10:15 PM IST

ಶಿವಮೊಗ್ಗ(ಡಿ.19): ಬಸ್ ಹತ್ತುವ ಸಂದರ್ಭ ಕೂಲಿ ಕಾರ್ಮಿಕನೊಬ್ಬನ ಚಡ್ಡಿ ಜೇಬಿನಲ್ಲಿದ್ದ ₹37 ಸಾವಿರ ಹಣ ಕಳವು ಮಾಡಿರುವ ಘಟನೆ ಶಿವಮೊಗ್ಗದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.

ವಿಜಯನಗರ ಜಿಲ್ಲೆ ಹರಪನಹಳ್ಳಿಯ ಆಲೂರು ಚೌಡಪ್ಪ ಎಂಬವರು ಹಣ ಕಳೆದುಕೊಂಡ ವ್ಯಕ್ತಿ. ಬಾಳೆಹೊನ್ನೂರಿನ ಕಾಫಿ ಎಸ್ಟೇಟ್‌ನಲ್ಲಿ ಆಲೂರು ಚೌಡಪ್ಪ ಅವರ ಮಕ್ಕಳು ಕೆಲಸ ಮಾಡುತ್ತಿದ್ದಾರೆ. ಅವರನ್ನು ಭೇಟಿಯಾಗಿ ತಮ್ಮೂರಿಗೆ ಮರಳಲು ಪತ್ನಿ ಮತ್ತು ಸಂಬಂಧಿಯೊಂದಿಗೆ ಕೆಎಸ್‌ಆರ್‌ಟಿಸಿ ನಿಲ್ದಾಣಕ್ಕೆ ಬಂದಿದ್ದರು.

ಪ್ರೀತಿಯ ಹೆಸರಿನಲ್ಲಿ ಸೆಕ್ಸ್-ದೋಖಾ! ತಾನು ಅನುಭವಿಸಿ ಸ್ನೇಹಿತರ ಜೊತೆಗೂ ಮಲಗಿಸಿದ ಕಿರಾತಕ!

ಹೊಸಪೇಟೆ ಮಾರ್ಗದ ಬಸ್ ಹತ್ತುವ ಸಂದರ್ಭ ರಶ್ ಹೆಚ್ಚಾಗಿತ್ತು. ಈ ವೇಳೆ ಚೌಡಪ್ಪ ಅವರ ಚೆಡ್ಡಿ ಜೇಬಿಗೆ ಯಾರೋ ಕೈ ಹಾಕಿದಂತಾಗಿದೆ. ಬಳಿಕ ಪರಿಶೀಲಿಸಿದಾಗ ₹37 ಸಾವಿರ ಹಣ ಜೇಬಲ್ಲಿ ಇರಲಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸಂಘದ ಸಾಲದ ಕಂತು ಮರುಪಾವತಿಗೆ ಚೌಡಪ್ಪ ಅವರ ಮಕ್ಕಳು ಹಣ ಕೊಟ್ಟಿದ್ದರು. ಆ ಹಣ ಕಳುವಾಗಿದೆ ಎಂದು ಆರೋಪಿಸಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Follow Us:
Download App:
  • android
  • ios