ಮೃತ ರಾಧಾಗೆ ಮಾನಸಿವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡಿ ಸಾಯಲು ಪ್ರಚೋದನೆ ನೀಡಿದ್ದಾರೆ ಎಂದು ಮೃತ ರಾಧಾಳ ತಮ್ಮ ರುದ್ರೇಶ ದೂರು ನೀಡಿದ್ದಾರೆ.

ದಾಬಸ್‌ಪೇಟೆ(ಮಾ.01): ಗಂಡನ ಅನೈತಿಕ ಸಂಬಂಧ ಹಾಗೂ ಕೌಟುಂಬಿಕ ಕಲಹಕ್ಕೆ ಬೇಸತ್ತು ಗೃಹಿಣಿಯೊಬ್ಬಳು ನೇಣುಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ತ್ಯಾಮಗೊಂಡ್ಲು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 

ತ್ಯಾಮಗೊಂಡ್ಲು ಹೋಬಳಿಯ ಸುಬ್ರಮಣ್ಯನಗರ ನಿವಾಸಿ ರಾಧಾ (32) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಮದು ವೆಯಾದ ಹದಿನೈದು ದಿನಕ್ಕೆ ಗಂಡನ ಅಕ್ರಮ ಸಂಬಂಧ ತಿಳಿದುಬಂದಿದೆ. 

26 ಪುರುಷ ಜೊತೆ! ಹೊರಬಿತ್ತು ಪತ್ನಿಯ ಕಹಿ ಸತ್ಯ..ಶಾಕ್‌ನಲ್ಲಿ ಪತಿ

ನಂತರ ಗ್ರಾಮದ ಹಿರಿಯರು ಕುಳಿತು ರಾಜಿ ಮಾಡಿಸಿ ಸಂಸಾರ ಮಾಡುವಂತೆ ಮಾಡಿದ್ದರು. ಮೃತ ರಾಧಾಗೆ ಮಾನಸಿವಾಗಿ ಮತ್ತು ದೈಹಿಕವಾಗಿ ಹಿಂಸೆ ನೀಡಿ ಸಾಯಲು ಪ್ರಚೋದನೆ ನೀಡಿದ್ದಾರೆ ಎಂದು ಮೃತ ರಾಧಾಳ ತಮ್ಮ ರುದ್ರೇಶ ದೂರು ನೀಡಿದ್ದಾರೆ.