ಮೈಸೂರು, [ಡಿ.07]: ಬಸ್ ಇಳಿಯುವಾಗ ಮಹಿಳೆ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಇಂದು [ಶನಿವಾರ] ಮೖಸೂರಿನ ನಂಜನಗೂಡು ತಾಲೂಕಿನ ಕಡುಬಿನ ಕಟ್ಟೆ ಗೇಟ್ ಬಳಿ ನಡೆದಿದೆ.
 
ನಂಜನಗೂಡು ತಾಲೂಕಿನ ಚನ್ನಪಟ್ಟಣ ನಿವಾಸಿ ಭಾಗ್ಯಮ್ಮ(30) ಮೃತ ದುರ್ದೈವಿ. ಕಡುಬಿನ ಕಟ್ಟೆ ಸಮೀಪದ ಮುರಾರ್ಜಿ ವಸತಿ ಶಾಲೆಯಲ್ಲಿ ಭಾಗ್ಯಮ್ಮ ಪುತ್ರಿ ವ್ಯಾಸಾಂಗ ಮಾಡುತ್ತಿದ್ದಾಳೆ. 

ಟ್ಯೂಷನ್ ಗೆ ಹೋಗುವ ಬಾಲಕಿಯೇ ಕಿಡ್ನ್ಯಾಪ್ ಆದಳು : ಪೋಷಕರೇ ಎಚ್ಚರ!

ಇಂದು [ಶನಿವಾರ] ವಾರಾಂತ್ಯವಾಗಿದ್ದರಿಂದ ಕರುಳ ಬಳ್ಳಿಯನ್ನ ಮಾತನಾಡಿಸಲೆಂದು ಕೆಎಸ್​ಆರ್​ಟಿಸಿ ಬಸ್ ಹತ್ತಿದ್ದ ಭಾಗ್ಯಮ್ಮ, ನಂಜನಗೂಡು ತಾಲೂಕಿನ ಕಡುಬಿನ ಕಟ್ಟೆ ಗೇಟ್ ಬಳಿ ಬಸ್ ಇಳಿಯುತ್ತಿದ್ದಾಗ ಬಿದ್ದು ಸಾವನ್ನಪ್ಪಿದ್ದಾಳೆ.

ಬಸ್ ಚಾಲಕ, ನಿರ್ವಾಹಕ ಸ್ಥಳದಿಂದ ನಾಪತ್ತೆಯಾಗಿದ್ದು, ಭಾಗ್ಯಮ್ಮನ ಸಾವಿಗೆ ಕೆಎಸ್​ಆರ್​ಟಿಸಿ ಬಸ್ ಚಾಲಕನ ಬೇಜವಾಬ್ದಾರಿಯೇ ಕಾರಣ ಎಂದು ಆರೋಪಗಳು ಕೇಳಿಬಂದಿದ್ದು, ಸಂಚಾರ ಪೊಲೀಸರು ಕೆಎ 10, ಎಫ್-0023 ಕೆಎಸ್​ಆರ್​ಟಿಸಿ ಬಸ್ ವಶಕ್ಕೆ ಪಡೆದ ತನಿಖೆ ನಡೆಸಿದ್ದಾರೆ.
 
ವಿಧಿಯಾಟ ಹೇಗೆ ನೋಡಿ, ಬಸ್ ಇಳಿದು ಇನ್ನೇನು ಪುತ್ರಿ ಇರೋ ಸ್ಥಳಕ್ಕೆ ಹೋಗಬೇಕೆನ್ನುವಷ್ಟರಲ್ಲಿಯೇ  ಈ ದುರ್ಘಟನೆ ಘಟನೆ ನಡೆದಿರುವುದು ನಿಜಕ್ಕೂ ಬೇಸರ ಸಂಗತಿ.