ಅಭಿಷೇಕ್ ಮೃತ ದುರ್ದೈವಿ, ಬಾವ ರವಿಕುಮಾರ್‌ ಆರೋಪಿಯಾಗಿದ್ದಾನೆ. ತಂಗಿಯನ್ನು ತವರು ಮನೆಗೆ ಕರೆದುಕೊಂಡು ಬರಲು ಹೋದಾಗ ಕೃತ್ಯ ನಡೆದಿದೆ. 

ಬೆಂಗಳೂರು(ಜೂ.08): ವರದಕ್ಷಿಣೆ ಕಿರುಕುಳ ವಿಚಾರದಲ್ಲಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಹೌದು, ಬಾವನಿಂದ ಬಾಮೈದನನ್ನ ಕೊಲೆ ಮಾಡಿದ ಘಟನೆ ಕುವೆಂಪು ನಗರದ ಐ ಬ್ಲಾಕ್‌ನಲ್ಲಿ ಇಂದು(ಶನಿವಾರ) ನಡೆದಿದೆ.

ಅಭಿಷೇಕ್(27) ಮೃತ ದುರ್ದೈವಿ, ಬಾವ ರವಿಕುಮಾರ್‌ ಆರೋಪಿಯಾಗಿದ್ದಾನೆ. ತಂಗಿಯನ್ನು ತವರು ಮನೆಗೆ ಕರೆದುಕೊಂಡು ಬರಲು ಹೋದಾಗ ಕೃತ್ಯ ನಡೆದಿದೆ. 

ಬೆಂಗಳೂರು: ಚೀಟಿ ಹಣಕ್ಕಾಗಿ ಸ್ನೇಹಿತನನ್ನು ತುಂಡು ತುಂಡಾಗಿ ಕತ್ತರಿಸಿ ರಾಜಕಾಲುವೆಗೆ ಎಸೆದ ನರಹಂತಕ

ಬಾಮೈದ ಅಭಿಷೇಕ್‌ ಮೇಲೆ ಬಾವ ರವಿಕುಮಾರ್‌ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಅಭಿಷೇಕ್‌ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಕುವೆಂಪು ನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಪೋಲಿಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಕುವೆಂಪು ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಹಾಸನದಲ್ಲಿ ರೌಡಿ ಹತ್ಯೆ