Asianet Suvarna News Asianet Suvarna News

ಬೆಂಗಳೂರು: ಕುಳ್ಳನಾಗಿದ್ದಕ್ಕೆ ಖಿನ್ನತೆ, ಪೆಟ್ರೋಲ್‌ ಸುರಿದುಕೊಂಡು ಯುವಕ ಆತ್ಮಹತ್ಯೆ

ಬೆಂಗಳೂರಿನ ಯಶವಂತಪುರದ ಉದಯ್‌ ರಾಜ್‌ ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡವನು. ಈತ ಹಲವು ವರ್ಷಗಳಿಂದ ಮೊಬೈಲ್‌ ಮಾರಾಟ ಕಂಪನಿಯಲ್ಲಿ ಉದ್ಯೋಗಿಯಾಗಿ ಜೀವನ ಸಾಗಿಸುತ್ತಿದ್ದ ಎನ್ನಲಾಗಿದೆ. ತಾನು ಕುಳ್ಳಗಿರುವುದರಿಂದ ಖಿನ್ನತೆಗೆ ಒಳಗಾಗಿ ಪರಿಹಾರಕ್ಕಾಗಿ ಹಲವು ವೈದ್ಯರನ್ನೂ ಸಂಪರ್ಕಿಸಿದ್ದ ಎನ್ನಲಾಗಿದೆ. 

27 Year Old Young Man Committed Suicide in Bengaluru grg
Author
First Published Sep 10, 2023, 4:30 AM IST

ದಾಬಸ್‌ಪೇಟೆ(ಸೆ.10): ವ್ಯಕ್ತಿಯೊಬ್ಬ ತಾನು ಕುಳ್ಳಗಿದ್ದೇನೆಂದು ಮನನೊಂದು ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾಬಸ್‌ಪೇಟೆ ಠಾಣಾ ವ್ಯಾಪ್ತಿಯ ಕೆಂಗಲ್‌ ಕೆಂಪೋಹಳ್ಳಿ ಬಳಿ ಶನಿ​ವಾರ ನಡೆದಿದೆ.

ಬೆಂಗಳೂರಿನ ಯಶವಂತಪುರದ ಉದಯ್‌ ರಾಜ್‌(27) ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡವನು. ಈತ ಹಲವು ವರ್ಷಗಳಿಂದ ಮೊಬೈಲ್‌ ಮಾರಾಟ ಕಂಪನಿಯಲ್ಲಿ ಉದ್ಯೋಗಿಯಾಗಿ ಜೀವನ ಸಾಗಿಸುತ್ತಿದ್ದ ಎನ್ನಲಾಗಿದೆ. ತಾನು ಕುಳ್ಳಗಿರುವುದರಿಂದ ಖಿನ್ನತೆಗೆ ಒಳಗಾಗಿ ಪರಿಹಾರಕ್ಕಾಗಿ ಹಲವು ವೈದ್ಯರನ್ನೂ ಸಂಪರ್ಕಿಸಿದ್ದ ಎನ್ನಲಾಗಿದೆ. 

ದಾವಣಗೆರೆ: ಕುತ್ತಿಗೆ ಮೈ-ಕೈ ಕೊಯ್ದುಕೊಂಡು ಮದ್ಯವ್ಯಸನಿ ಸಾವು

ಸಾಯುವ ಮುನ್ನ ಸೆಲ್ಫಿ ವಿಡಿಯೋ ಮಾಡಿದ್ದು, ಅದರಲ್ಲಿ ನನ್ನ ಸಾವಿಗೆ ಮಾನಸಿಕ ಒತ್ತಡವೇ ಕಾರಣವೆಂದು ಹೇಳಿ ತನ್ನ ತಂದೆ ಹಾಗೂ ಕಂಪನಿಯ ಮ್ಯಾನೇಜರ್‌ ಮೊಬೈಲ್‌ಗೆ ವಿಡಿಯೋ ಹಾಗೂ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಲೊಕೇಷನ್‌ ಕಳುಹಿದ್ದಾ​ನೆ. ನಂತರ ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಡಿಯೋ ಸಂದೇಶ ನೋಡಿ ಕುಟುಂಬಸ್ಥರು ಬರುವ ವೇಳೆಗಾಗಲೇ ಆತ ಮೃತಪಟ್ಟಿದ್ದ. ದಾಬಸ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖ​ಲಾ​ಗಿ​ದೆ.

Follow Us:
Download App:
  • android
  • ios