Asianet Suvarna News Asianet Suvarna News

ದಾವಣಗೆರೆ: ಕುತ್ತಿಗೆ ಮೈ-ಕೈ ಕೊಯ್ದುಕೊಂಡು ಮದ್ಯವ್ಯಸನಿ ಸಾವು

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕು ಸೋಮಶೆಟ್ಟಿಹಳ್ಳಿಯಲ್ಲಿ ತಮ್ಮ ಸಂಬಂಧಿ ಮನೆಯಲ್ಲಿ ವಾಸವಾಗಿದ್ದ, ಮೂಲತಃ ನಿಟ್ಟೂರು ಗ್ರಾಮದ ಬಸವರಾಜಪ್ಪ ಸಾವನ್ನಪ್ಪಿದ ವ್ಯಕ್ತಿ. 

32 Year Old Person dies at Chennagiri in Davanagere grg
Author
First Published Sep 9, 2023, 9:11 PM IST

ದಾವಣಗೆರೆ(ಸೆ.09):  ಅತಿಯಾದ ಮದ್ಯಸೇವನೆಯಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ ವ್ಯಕ್ತಿಯೊಬ್ಬ ಮದ್ಯದ ಅಮಲಿನಲ್ಲಿ ತನ್ನ ಮೈ-ಕೈ ಹಾಗೂ ಕತ್ತು ಕೊಯ್ದುಕೊಂಡು ತೀವ್ರ ರಕ್ತಸ್ರಾವದಿಂದ ಮೃತಪಟ್ಟ ಘಟನೆ ಚನ್ನಗಿರಿ ಪಟ್ಟಣದಲ್ಲಿ ವರದಿಯಾಗಿದೆ.

ಚನ್ನಗಿರಿ ತಾಲೂಕು ಸೋಮಶೆಟ್ಟಿಹಳ್ಳಿಯಲ್ಲಿ ತಮ್ಮ ಸಂಬಂಧಿ ಮನೆಯಲ್ಲಿ ವಾಸವಾಗಿದ್ದ, ಮೂಲತಃ ನಿಟ್ಟೂರು ಗ್ರಾಮದ ಬಸವರಾಜಪ್ಪ(32 ವರ್ಷ) ಸಾವನ್ನಪ್ಪಿದ ವ್ಯಕ್ತಿ. ತಂದೆ, ತಾಯಿ ಕಳೆದುಕೊಂಡಿದ್ದ ಬಸವರಾಜ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ. ತನ್ನ ಹುಟ್ಟೂರು ನಿಟ್ಟೂರನ್ನು ಬಿಟ್ಟು, ತನ್ನ ಸಹೋದರಿಯ ಮನೆ ಇದ್ದ ಊರಾದ ಸೋಮಶೆಟ್ಟಿಹಳ್ಳಿಯಲ್ಲಿದ್ದನು.

ದಾವಣಗೆರೆ ವಿಶ್ವವಿದ್ಯಾನಿಲಯದ ಆವರಣದಿಂದಲೇ ವಿದ್ಯಾರ್ಥಿನಿಯ ಕಿಡ್ನಾಪ್‌, ತಾಯಿಯಿಂದಲೇ ಕೃತ್ಯ!

ಹೇರ್ ಸಲೂನ್‌ವೊಂದರಲ್ಲಿ ರೇಜರ್ ತೆಗೆದುಕೊಂಡ ಬಸವರಾಜ ಚನ್ನಗಿರಿ ಪಟ್ಟಣದ ವಡ್ನಾಳ್ ರಾಜಣ್ಣ ಬಡಾವಣೆಯಲ್ಲಿ ತನ್ನ ಮೈ, ಕೈ ಹಾಗೂ ಕತ್ತು ಕೊಯ್ದುಕೊಂಡು, ರಕ್ತ ಸೋರುತ್ತಿದ್ದರೂ ಹಾಗೆಯೇ ಬೀದಿ ಬೀದಿಯಲ್ಲಿ ಸುತ್ತಾಡ ತೊಡಗಿದ್ದಾನೆ. ಬಸವರಾಜ ಮೈಯಿಂದ ರಕ್ತ ಸೋರುತ್ತಿದ್ದುದನ್ನು ಕಂಡ ಸ್ಥಳೀಯರು, ದಾರಿ ಹೋಕರು ತಕ್ಷಣ‍ ಆತನಿಗೆ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ತೀವ್ರ ರಕ್ತಸ್ರಾವವಾಗಿದ್ದ ಬಸವರಾಜ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios