Kolar: ಐಟಿ ಅಧಿಕಾರಿಗಳ ಸೋಗಿನಲ್ಲಿ 25 ಲಕ್ಷ, 1 ಕೆಜಿ ಬಂಗಾರ ದರೋಡೆ
* 25 ಲಕ್ಷ ಮೌಲ್ಯದ ನಗದು, ಬಂಗಾರ ದೋಚಿ ಪರಾರಿಯಾದ ಖದೀಮರು
* ಪೊಲೀಸರಿಗೆ ಮಾಹಿತಿ ನೀಡಿದ ಅಕ್ಕಪಕ್ಕದ ಮನೆಯವರು
* ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಎಸ್ಪಿ ದೇವರಾಜ್
ಕೋಲಾರ(ಮಾ.01): ಆದಾಯ ತೆರಿಗೆ(Income Tax) ಅಧಿಕಾರಿಗಳೆಂದು ಹೇಳಿಕೊಂಡು ಎಪಿಎಂಸಿ ಮಾಜಿ ಅಧ್ಯಕ್ಷರೊಬ್ಬರ ಮನೆಗೆ ಪ್ರವೇಶಿಸಿ ನಂತರ, ಬಂದೂಕು ತೋರಿಸಿ 25 ಲಕ್ಷ ಮೌಲ್ಯದ ನಗದು(Money), ಬಂಗಾರ(Gold) ದೋಚಿ ಖದೀಮರು ಪರಾರಿಯಾದ ಘಟನೆ ಸೋಮವಾರ ರಾತ್ರಿ ನಗರದಲ್ಲಿ ನಡೆದಿದೆ.
ಬೈರೇಗೌಡ ನಗರದ ಎಪಿಎಂಸಿ ಮಾಜಿ ಅಧ್ಯಕ್ಷ ರಮೇಶ್ ಎಂಬುವವರ ಮನೆಗೆ ರಾತ್ರಿ ಸುಮಾರು 9 ಗಂಟೆ ಸುಮಾರಿಗೆ ಹಿಂದಿ(Hindi) ಭಾಷೆ ಮಾತನಾಡುತ್ತಿದ್ದ ಐವರು ಏಕಾಏಕಿ ಪ್ರವೇಶಿಸಿದ್ದಾರೆ. ತಾವು ಆದಾಯ ತೆರಿಗೆ(IT) ಅಧಿಕಾರಿಗಳೆಂದು ನಕಲಿ ಕಾರ್ಡ್‌ಗಳನ್ನು ಈ ವೇಳೆ ಅವರು ತೋರಿಸಿದ್ದಾರೆ. ನಂತರ ಐದೂ ಮಂದಿ ಮಷಿನ್ಗನ್ ತೋರಿಸಿ ಮನೆಯಲ್ಲಿದ್ದ ರಮೇಶ್ ದಂಪತಿ ಮತ್ತು ಮಕ್ಕಳನ್ನು ಒಂದು ಕಡೆ ಕೂಡಿ ಹಾಕಿ ಹಣ ಮತ್ತು ಬಂಗಾರದೊಂದಿಗೆ ಪರಾರಿಯಾಗಿದ್ದಾರೆ.
Bengaluru: ವೃದ್ಧೆಯ ಕೈ-ಕಾಲು ಕಟ್ಟಿ ಒಡವೆ ದೋಚಿದ್ದವ ಅರೆಸ್ಟ್
ಆರೋಪಿಗಳು(Accused) ಪರಾರಿಯಾದ ತಕ್ಷಣ ಮನೆಯಲ್ಲಿದ್ದವರು ಕಿರುಚಿಕೊಂಡ ಹಿನ್ನೆಲೆಯಲ್ಲಿ ಸುತ್ತಮುತ್ತಲ ಮನೆಯವರು ನೆರವಿಗೆ ಬಂದು, ತಕ್ಷಣ ಪೊಲೀಸರಿಗೆ(Police) ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಎಸ್ಪಿ ದೇವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗೋಡೆ ಕೊರೆದು 1 ಕೇಜಿ ಚಿನ್ನ ದೋಚಿ ಪರಾರಿ
ಬೆಂಗಳೂರು: ಗೋಡೆ ಕೊರೆದು ಚಿನ್ನಾಭರಣ ಮಳಿಗೆಗೆ ಕನ್ನ ಹಾಕಿ 1 ಕೇಜಿ ಬಂಗಾರ ದೋಚಿ ದುಷ್ಕರ್ಮಿಗಳು(Miscreants) ಪರಾರಿಯಾಗಿರುವ ಘಟನೆ ಸಾರಾಯಿಪಾಳ್ಯದ ಥಣಿಸಂದ್ರ ಮುಖ್ಯರಸ್ತೆಯಲ್ಲಿ ಫೆ.23 ರಂದು ನಡೆದಿತ್ತು. ಥಣಿಸಂದ್ರ ಮುಖ್ಯರಸ್ತೆಯ ರಾಘವೇಂದ್ರ ಜ್ಯುವೆಲರ್ಸ್ ಮತ್ತು ಬಾಲಾಜಿ ಬ್ಯಾಂಕರ್ಸ್ ಮಳಿಗೆಯಲ್ಲೇ ಮಂಗಳವಾರ ರಾತ್ರಿ 2ರ ಸುಮಾರಿಗೆ ದರೋಡೆ(Robbery) ನಡೆದಿದ್ದು, ಅಂಗಡಿ ಬಾಗಿಲು ತೆರೆಯಲು ಬುಧವಾರ ಬೆಳಗ್ಗೆ ಸಿಬ್ಬಂದಿ ಬಂದಾಗ ಕೃತ್ಯ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.
ಮೆಟ್ಟಿಲ ಮರೆಯಲ್ಲಿ ಕುಳಿತು ಕೃತ್ಯ:
ಚಿನ್ನಾಭರಣ ವ್ಯಾಪಾರಿ ಏಳಗೋವನ್ ಅವರು, ಐದಾರು ವರ್ಷಗಳಿಂದ ಥಣಿಸಂದ್ರ ರಸ್ತೆಯಲ್ಲಿ ‘ರಾಘವೇಂದ್ರ ಜ್ಯುವೆಲರ್ಸ್ ಮತ್ತು ಬಾಲಾಜಿ ಬ್ಯಾಂಕರ್ಸ್’ ಹೆಸರಿನ ಆಭರಣ ಮಾರಾಟ ಮಳಿಗೆ ನಡೆಸುತ್ತಿದ್ದಾರೆ. ಪ್ರತಿ ದಿನ ಬೆಳಗ್ಗೆ 9ರಿಂದ ರಾತ್ರಿ 8.30ರ ವರೆಗೆ ಅವರು ವ್ಯವಹರಿಸಿ ನಂತರ ಬಂದ್ ಮಾಡುತ್ತಿದ್ದರು. ಮಂಗಳವಾರ ರಾತ್ರಿ ಸಹ ರಾತ್ರಿ 8.30ರ ಸುಮಾರಿಗೆ ವ್ಯಾಪಾರ ಮುಗಿಸಿ ಏಳಗೋವನ್ ತೆರಳಿದ್ದರು.
ಆ ಮಳಿಗೆಗೆ ಹೊಂದಿಕೊಂಡಂತೆ ಮೊದಲ ಮಹಡಿಗೆ ತೆರಳುವ ಮೆಟ್ಟಿಲುಗಳಿವೆ (ಸ್ಟೇರ್ ಕೇಸ್). ಅದರ ಪಕ್ಕದಲ್ಲಿ ಮೆಡಿಕಲ್ ಸ್ಟೋರ್ ಸಹ ಇದೆ. ಮಂಗಳವಾರ ರಾತ್ರಿ 12ರವರೆಗೆ ಮೆಡಿಕಲ್ ಸ್ಟೋರ್‌ನಲ್ಲಿ ವಹಿವಾಟು ನಡೆದಿದೆ. ನಂತರ ಚಿನ್ನಾಭರಣ ಮಾರಾಟ ಮಳಿಗೆಗೆ ಆರೋಪಿಗಳು(Accused) ಕನ್ನ ಹಾಕಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದರು.
Kodagu Crime: ಒಂಟಿ ಮನೆಗಳನ್ನೇ ಟಾರ್ಗೆಟ್ ಮಾಡ್ತಿರುವ ದರೋಡೆಕೋರರು..!
ಚಿನ್ನಾಭರಣ ಮಳಿಗೆಗೆ ಹೊಂದಿಕೊಂಡ ಶಟರ್ ಕೇಸ್ ಬಳಿ ಬಂದು ರಾತ್ರಿ 2ರ ಸುಮಾರಿಗೆ ಅಡಗಿ ಕುಳಿತ ಆರೋಪಿಗಳು, ಸ್ಟೇರ್ ಕೇಸ್ ಹೊರಗೆ ಗೊತ್ತಾಗದಂತೆ ತಗಡಿನಿಂದ ಮುಚ್ಚಿದ್ದಾರೆ. ಆನಂತರ ಡ್ರಿಲ್ಲಿಂಗ್ ಮೆಷಿನ್ ಬಳಸಿ ಸುಮಾರು ಎರಡೂವರೆ ಅಡಿಯಷ್ಟು ಆಭರಣ ಮಳಿಗೆಯ ಗೋಡೆ ಕೊರೆದು ದುಷ್ಕರ್ಮಿಗಳು ಒಳ ಪ್ರವೇಶಿಸಿದ್ದಾರೆ. ಬಳಿಕ ಅಂಗಡಿಯ ಲಾಕರ್‌ನಲ್ಲಿಟ್ಟಿದ್ದ ಸುಮಾರ 1 ಕೇಜಿ ಒಡವೆ ದೋಚಿ ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದರು.
ಈ ಅಂಗಡಿಗೆ ಸಿಸಿಟಿವಿ(CCTV) ಕ್ಯಾಮೆರಾ ಕೂಡಾ ಅಳವಡಿಸಿರಲಿಲ್ಲ. ಹೀಗಾಗಿ ಕನ್ನ ಹಾಕುವ ಮುನ್ನ ಅಂಗಡಿಯ ಸುತ್ತಮುತ್ತಲ ಭದ್ರತಾ ವ್ಯವಸ್ಥೆಗೆ ಬಗ್ಗೆ ಮಾಹಿತಿ ಕಲೆ ಹಾಕಿ ಸೂಕ್ತ ಪೂರ್ವ ಸಿದ್ಧತೆ ಮಾಡಿಕೊಂಡೇ ಆರೋಪಿಗಳು ಕೃತ್ಯ ಎಸಗಿದ್ದಾರೆ. ರಾಘವೇಂದ್ರ ಜ್ಯುವೆಲರ್ಸ್ ಸಮೀಪದ ಅಂಗಡಿಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಇಬ್ಬರ ಚಲನವಲನ ಸೆರೆಯಾಗಿದ್ದು, ಈ ಕೃತ್ಯದಲ್ಲಿ ಇಬ್ಬರಿಗಿಂತ ಹೆಚ್ಚಿನ ಜನರು ಪಾಲ್ಗೊಂಡಿರುವ ಶಂಕೆ ಇದೆ ಎಂದು ಪೊಲೀಸರು(Police) ತಿಳಿಸಿದ್ದರು. ಈ ಸಂಬಂಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.