ಪಿಎಫ್‌ಐನ ಭಯೋತ್ಪಾದನಾ ಚಟುವಟಿಕೆಗೆ ವಿದೇಶದಿಂದ ಅದರಲ್ಲೂ ಗಲ್ಫ್‌ ರಾಷ್ಟ್ರದಿಂದ ಹವಾಲಾ ಮೂಲಕ ಹಣ ರವಾನೆಯಾಗುತ್ತಿತ್ತು. ಈ ಹಣವನ್ನು ಆರೋಪಿ ಇಕ್ಬಾಲ್‌ ಸಂಗ್ರಹಿಸುತ್ತಿದ್ದ. ನಂತರ ಇತರ ಆರೋಪಿಗಳಿಗೆ ಇದನ್ನು ಹಂಚುತ್ತಿದ್ದ. ಇವರಲ್ಲಿ ಸಫ್‌ರ್‍ರಾಜ್‌ ನವಾಜ್‌ ಮತ್ತು ಮೊಹಮ್ಮದ್‌ ಸಿನಾನ್‌ ಮೂಲಕ ಹೆಚ್ಚು ಹಣ ರವಾನೆಯಾಗಿರುವುದು ಕಂಡುಬಂದಿದೆ. 

ಮಂಗಳೂರು(ಮಾ.10):  ಇತ್ತೀಚೆಗೆ ಬಂಟ್ವಾಳ, ಪುತ್ತೂರು ಮತ್ತು ಮಂಜೇಶ್ವರದಿಂದ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬಂಧಿಸಿರುವ ನಿಷೇಧಿತ ಪಿಎಫ್‌ಐ ಸಂಘಟನೆಗೆ ಸೇರಿದ ಐವರು ಆರೋಪಿಗಳು ಭಯೋತ್ಪಾದಕರಿಗೆ 25 ಕೋಟಿ ರು. ವರ್ಗಾವಣೆ ಮಾಡಿದ್ದಾರೆ ಎನ್ನುವ ಅಂಶ ತಿಳಿದುಬಂದಿದೆ.

ಪಿಎಫ್‌ಐ ನಿಷೇಧದ ಬಳಿಕ ಬಿಹಾರದ ಪುಲ್ವಾರಿ ಶರೀಫ್‌ ಮತ್ತು ಮೋತಿಹಾರಿಯಲ್ಲಿನ ಪಿಎಫ್‌ಐ ಕಾರ್ಯಕರ್ತರು ಬಿಹಾರದಲ್ಲಿ ಗುಪ್ತ ರೀತಿಯಲ್ಲಿ ಪಿಎಫ್‌ಐ ಚಟುವಟಿಕೆ ನಡೆಸುವುದಾಗಿ ಪ್ರತಿಜ್ಞೆ ಮಾಡಿದ್ದರು. ಈ ಭಯೋತ್ಪಾದನಾ ಚಟುವಟಿಕೆ ತನಿಖೆ ವೇಳೆ ಹವಾಲಾ ಮೂಲಕ ಹಣ ಸಂದಾಯ ಆಗಿದ್ದು ಎನ್‌ಐಎಗೆ ಗೊತ್ತಾಗಿತ್ತು. ಇದರ ಜಾಡಿನಲ್ಲಿ ದ.ಕ. ಮತ್ತು ಮಂಜೇಶ್ವರದಲ್ಲಿ ದಾಳಿ ನಡೆಸಿದ್ದ ಎನ್‌ಐಎ ಐವರನ್ನು ಬಂಧಿಸಿತ್ತು. ಈ ವೇಳೆ ಕೋಟ್ಯಂತರ ರು. ವ್ಯವಹಾರ ನಡೆದಿರುವ ದಾಖಲೆಗಳನ್ನೂ ವಶಪಡಿಸಿತ್ತು.

ಮೋದಿ ರ‍್ಯಾಲಿ ಟಾರ್ಗೆಟ್ ಮಾಡಿ ಭೋಪಾಲ್ ರೈಲು ಸ್ಫೋಟಿಸಿದ 7 ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ಪ್ರಕಟ!

ಪಿಎಫ್‌ಐನ ಭಯೋತ್ಪಾದನಾ ಚಟುವಟಿಕೆಗೆ ವಿದೇಶದಿಂದ ಅದರಲ್ಲೂ ಗಲ್ಫ್‌ ರಾಷ್ಟ್ರದಿಂದ ಹವಾಲಾ ಮೂಲಕ ಹಣ ರವಾನೆಯಾಗುತ್ತಿತ್ತು. ಈ ಹಣವನ್ನು ಆರೋಪಿ ಇಕ್ಬಾಲ್‌ ಸಂಗ್ರಹಿಸುತ್ತಿದ್ದ. ನಂತರ ಇತರ ಆರೋಪಿಗಳಿಗೆ ಇದನ್ನು ಹಂಚುತ್ತಿದ್ದ. ಇವರಲ್ಲಿ ಸಫ್‌ರ್‍ರಾಜ್‌ ನವಾಜ್‌ ಮತ್ತು ಮೊಹಮ್ಮದ್‌ ಸಿನಾನ್‌ ಮೂಲಕ ಹೆಚ್ಚು ಹಣ ರವಾನೆಯಾಗಿರುವುದು ಕಂಡುಬಂದಿದೆ. ಸುಮಾರು 25 ಕೋಟಿ ರು.ಗಳಷ್ಟುಬೃಹತ್‌ ಮೊತ್ತ ರವಾನಿಸಿದ್ದಾರೆ ಎನ್ನುವುದನ್ನು ಅಧಿಕಾರಿಗಳು ಕಂಡುಕೊಂಡಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ.

ದೇಶದಲ್ಲಿ ನಡೆದ, ನಡೆಯುತ್ತಿರುವ ಹಲವು ಭಯೋತ್ಪಾದನಾ ಚಟುವಟಿಕೆಗಳ ಲಿಂಕ್‌ ದಕ್ಷಿಣ ಕನ್ನಡಕ್ಕೆ ಇರುವುದು ಕಂಡುಬಂದಿರುವುದರಿಂದ ಪಿಎಫ್‌ಐ ಕಾರ್ಯಕರ್ತರಾಗಿದ್ದವರಿಗೆ ನಡುಕ ಶುರುವಾಗಿದೆ. ಪ್ರವೀಣ್‌ ನೆಟ್ಟಾರು ಪ್ರಕರಣ, ಕುಕ್ಕರ್‌ ಬಾಂಬ್‌ ಪ್ರಕರಣದ ಬಳಿಕವಂತೂ ಎನ್‌ಐಎ ದ.ಕ.ದ ಪಿಎಫ್‌ಐ ಮೇಲೆ ಹದ್ದುಗಣ್ಣು ಇರಿಸಿದೆ.