ಗನ್ ಹಿಡಿದುಕೊಂಡು ಸೆಲ್ಫಿ ತೆಗೆದುಕೊಳ್ಳಲು ಹೋಗಿ ಸತ್ತ!

ಸೆಲ್ಫಿ ಹುಚ್ಚಿಗೆ ಪ್ರಾಣ ಕಳೆದುಕೊಂಡ ಯುವಕ/ ಪಿಸ್ತೂಲ್ ಹಿಡಿದುಕೊಂಡು ಹುಚ್ಚಾಟ/ ಟ್ರಿಗರ್ ಎಳೆದು ಎದೆಗೆ ತಾಗಿದ ಗುಂಡು/ ಆಸ್ಪತ್ರೆಗೆ ಸೇರಿಸುವ ಯತ್ನ ಮಾಡಿದರೂ ಪ್ರಯೋಜನವಾಗಲಿಲ್ಲ

22-year-old youth accidentally shoots self dead while posing for selfie mah

ನೋಯ್ಡಾ (ನ.  08)  ಸೆಲ್ಫಿ ಹುಚ್ಚು ಕೊರೋನಾ ಬಂದ ಮೇಲೆ ಸ್ವಲ್ಪ ಕಡಿಮೆಯಾಗಿತ್ತು ಎಂದು ಕೆಲ ಸಮೀಕ್ಷೆಗಳು ಹೇಳಿದ್ದವು. ಆದರೆ ಇಲ್ಲೊಬ್ಬ ಸೆಲ್ಫಿ ಹುಚ್ಚಿಗೆ ಪ್ರಾಣವನ್ನೇ ಕೊಟ್ಟಿದ್ದಾನೆ.

 22 ವರ್ಷದ ಯುವಕನೊಬ್ಬ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಆಕಸ್ಮಿಕವಾಗಿ  ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾನೆ. ಪಿಸ್ತೂಲ್ ಹಿಡಿದುಕೊಂಡು ಸೆಲ್ಫಿ ತೆಗೆದುಕೊಳ್ಳಲು ಹೋಗಿ ಪ್ರಾಣ ಕಳೆದುಕೊಂಡಿದ್ದಾನೆ.

ಸೆಲ್ಫಿಗಾಗಿ ಹುಲಿಯ ಜನನಾಂಗಕ್ಕೆ ಕೈ ಹಾಕಿದ ಯುವತಿ

ಈಗ ಮೃತಪಟ್ಟ ಯುವಕನನ್ನು ಧರ್ಮಪುರ ಗ್ರಾಮದ ನಿವಾಸಿ ಸೌರಭ್ ಮಾವಿ ಎಂದು ಗುರುತಿಸಲಾಗಿದೆ. ಸ್ನೇಹಿತ ನಕುಲ್ ಶರ್ಮಾ  ಎಂಬಾತನ ಮದುವೆಗೆ ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದ ವೇಳೆ ಅವಘಡ ಮಾಡಿಕೊಂಡಿದ್ದಾನೆ.

 ದಾರಿ ಮಧ್ಯೆ ಪಿಸ್ತೂಲ್ ಹಿಡಿದುಕೊಂಡು ಸೆಲ್ಫಿಗೆ ಪೋಸ್ ನೀಡಲು ಆರಂಭಿಸಿದ್ದಾನೆ. ಈ ವೇಳೆ ಗೊತ್ತಾಗದೆ ಟ್ರಿಗರ್ ಎಳೆದಿದ್ದಾನೆ.  ಗಾಯಗೊಂಡ ಯುವಕನನ್ನು ಆಸ್ಪತ್ರೆಗೆ ಸೇರಿಸುವ ಯತ್ನ ಮಾಡಲಾಯಿತಾದರೂ ಫಲಫ್ರದವಾಗಲಿಲ್ಲ. ಜತೆಯಲ್ಲಿದ್ದ ಇನ್ನೊಬ್ಬನನ್ನು ಪೊಲೀಶರು ತಮ್ಮ ವಶಕ್ಕೆ ಪಡೆದುಕೊಂಡಿದ್ದು ವಿಚಾರಣೆ ನಡೆಸುತ್ತಿದ್ದಾರೆ. 



 

Latest Videos
Follow Us:
Download App:
  • android
  • ios