Asianet Suvarna News Asianet Suvarna News

ಬೇಕಿತ್ತಾ ಇದೆಲ್ಲ? ಹುಲಿಯ ಜನನಾಂಗಕ್ಕೆ ಕೈ ಹಾಕಿದ ಯುವತಿ!

ಹುಲಿಯ ಖಾಸಗಿ ಅಂಗಕ್ಕೆ ಕೈ ಹಾಕಿದ ಯುವತಿ/ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟೀಕೆ/ ಥೈಲಾಂಡ್ ಜೂನಲ್ಲಿಯ ಘಟನೆ/ ಯುವತಿ ವಿರುದ್ಧ ಕ್ರಮ ತೆಗೆದುಕೊಳ್ಳಿ

Woman Suffers Criticism After Grabbing Tiger Testicles for a Selfie Social Media
Author
Bengaluru, First Published Sep 2, 2020, 4:45 PM IST

ಬ್ಯಾಂಕಾಕ್​ (ಸೆ.02) ಇವಳಿಗೆ ಅದೆ ಏನು ಬಂದಿತ್ತೋ ಕೇಡುಕಾಲ. ಹುಲಿಯ ಖಾಸಗಿ ಅಂಗಕ್ಕೆ ಕೈ ಹಾಕಿ ಸೋಶಿಯಲ್ ಮೀಡಿಯಾದಲ್ಲಿ ಸಖತ್ತಾಗಿಯೇ ಬೈಸಿಕೊಳ್ಳುತ್ತಿದ್ದಾಳೆ.  ಥಾಯ್ಲೆಂಡ್​ನ ಪ್ರವಾಸಿಗಳೊಬ್ಬಳು ಹುಲಿಯ ಜನನೇಂದ್ರಿಯ ಸ್ಪರ್ಶ ಮಾಡಿದ್ದಾಳೆ. ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಭಿನ್ನ ಭಿನ್ನ ಪ್ರತಿಕ್ರಿಯೆ ಬರುತ್ತಲೇ ಇದೆ.

ಉತ್ತರ ಥಾಯ್ಲೆಂಡ್​ನ ಚೈಯಾಂಗ್​​​ ಮೈ ನಗರದಲ್ಲಿರುವ ಟೈಗರ್​ ಕಿಂಗ್​ಡಮ್​ ಜೂಗೆ ಪ್ರವಾಸಿಗಳು ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಪ್ರಸಂಗ ಜರುಗಿದೆ. ಹುಲಿಯ ವೃಷಣಗಳಿಗೆ ಕೈಹಾಕಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದು ಟೀಕೆಗೆ ಗುರಿಯಾಗಿದೆ.

ಕೆಎಸ್‌ಆರ್‌ಟಿಸಿ ಬಸ್ ನಲ್ಲಿ ಯುವತಿಯ ಮೈ-ಕೈ ಮುಟ್ಟಿದ ಮುದುಕ

ಆಗಸ್ಟ್​ 26ರಂದು ಈ ಘಟನೆ ನಡೆದಿದೆ ಎನ್ನಲಾಗಿದ್ದು ಯುವತಿಯನ್ನು ವಾರಸ್ಚಯ ಅಕ್ಕರಾಚೈಯಪಸ್ ಎಂದು ಗುರುತಿಸಲಾಗಿದ್ದು ನೆಟ್ಟಿಗರು ಈಕೆ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯ ಮಾಡಿದ್ದಾರೆ.

ಥೈಲಾಂಡಿನ ಟೈಗರ್ ಕಿಂಗ್ ಡಮ್ ಜೂದಲ್ಲಿ ಹುಲಿಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಅವಕಾಶ ಇದೆ. ಆದರೆ ಈ ಯುವತಿ ಒಂದು ಹೆಜ್ಜೆ ಮುಂದೆ ಹೋಗಿದ್ದಾಳೆ. ಟೈಗರ್ ಕಿಂಗ್ ಡಮ್  ಮುಖ್ಯಸ್ಥ ಜೂಕ್ ಪೀಯರ್ ಸಹ ಘಟನೆ ಬಗ್ಗೆ ಕಮೆಂಟ್ ಮಾಡಿದ್ದು,  ಈ ರೀತಿ ವೃಷಣಗಳನ್ನು ಸ್ಪರ್ಶ ಮಾಡಲು ನಮ್ಮಲ್ಲಿ ಅವಕಾಶ ಇಲ್ಲ, ಇನ್ನು ಮುಂದೆ ಇಂಥ ಘಟನೆ ಆಗದಂತೆ  ನೋಡಿಕೊಳ್ಳುತ್ತೇವೆ ಎಂದಿದ್ದಾರೆ.

ಯುವತಿ ಸಹ ಪ್ರತಿಕ್ರಿಯೆ ನೀಡಿದ್ದು ನಾನೊಬ್ಬಳು ಪ್ರಾಣಿ ಪ್ರಿಯೆ, ಹುಲಿಗೆ ಹಿಂಸೆ ನೀಡಲು ಹೀಗೆಲ್ಲ ಮಾಡಿಲ್ಲ ಎಂದಿದ್ದಾರೆ. 

 

 

เจหวงพุง 🤓🥴🐯💓

Posted by Waraschaya Akkarachaiyapas on Wednesday, 26 August 2020
Follow Us:
Download App:
  • android
  • ios