Suicide Cases: ತಾಯಿ ಬೈದಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಮಗ

*  ಬೆಂಗಳೂರಿನ ಸುಂಕದಕಟ್ಟೆ ಬಳಿ ನಡೆದ ಘಟನೆ
*  ಮಗನಿಗೆ ಬೈದು ಬುದ್ದಿವಾದ ಹೇಳಿದ ತಂದೆ, ತಾಯಿ
*  ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು 
 

22 Year Old Young Man Committed Suicide in Bengaluru grg

ಬೆಂಗಳೂರು(ಮಾ.13): ತಾಯಿ ಬೈದಿದ್ದಕ್ಕೆ ಮಗ ಆತ್ಮಹತ್ಯೆಗೆ(Suicide) ಶರಣಾದ ಘಟನೆ ಸುಂಕದಕಟ್ಟೆ ಬಳಿಯ ಶ್ರೀನಿವಾಸ್ ನಗರದ ಪೈಪ್ ಲೈನ್ ರಸ್ತೆಯ ಮನೆಯಲ್ಲಿ ಇಂದು(ಭಾನುವಾರ) ನಡೆದಿದೆ. ಸಂಜಯ್(22) ಎಂಬಾತನೇ ಆತ್ಮಹತ್ಯೆಗೆ ಮಾಡಿಕೊಂಡವನಾಗಿದ್ದಾನೆ. 

ಕಳೆದ ಮೂರು ದಿನಗಳಿಂದ ಸಂಜಯ್ ಮನೆಗೆ ಬಂದಿರಲಿಲ್ಲ. ಯಾವುದೇ ಕೆಲಸಕ್ಕೆ ಹೋಗದೇ ಸಂಜಯ್‌ ಅಲೆದಾಡುತ್ತಿದ್ದ, ಹೀಗಾಗಿ ತಂದೆ ತಾಯಿ(Mother) ಮಗನಿಗೆ ಬೈದು ಬುದ್ದಿವಾದ ಹೇಳಿದ್ದರು ಎಂದು ಹೇಳಲಾಗುತ್ತಿದೆ. ಬುದ್ದಿವಾದ ಹೇಳಿದಕ್ಕೆ ಸಂಜಯ್ ತನ್ನ ತಾಯಿಯನ್ನೇ ಬೈದು ಕತ್ತು ಹಿಸುಕೋದಕ್ಕೆ ಹೋಗಿದ್ದನಂತೆ. ಈ ವೇಳೆ ತಂದೆ(Father) ತಡೆದು ಮಗನಿಗೆ ಹೊಡೆದಿದ್ದರು. ಹೀಗಾಗಿ ಎಲ್ಲರೂ ನನಗೆ ಬೈದಿದ್ದಾರೆ ಎಂದು ಬೇಜರಾಗಿದ್ದನಂತೆ.  ಬಳಿಕ ರಾತ್ರಿ ಮನೆಯಲ್ಲಿ ಎಲ್ಲರೂ ಮಲಗಿದ ಮೇಲೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವೇಲ್‌ನಿಂದ ಫ್ಯಾನ್‌ಗೆ ನೇಣು ಬಿಗಿದುಕೊಂಡು ಸೂಸೈಡ್ ಮಾಡಿಕೊಂಡಿದ್ದಾನೆ. 

Student Suicide:ಧಾರವಾಡ ಪಿಜಿಯಲ್ಲಿ ನೇಣಿಗೆ ಶರಣಾದ ಬಾಗಲಕೋಟೆ ಸ್ಟೂಡೆಂಟ್, ಕಾರಣ ನಿಗೂಢ

ಘಟನಾ ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸರು(Police) ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಯುಡಿಆರ್‌ಅಡಿ ಪ್ರಕರಣ ದಾಖಲಾಗಿದೆ. 

ಪರಿಕ್ಷೆಯಲ್ಲಿ ಕಾಪಿ ಮಾಡಿ ಡಿಬಾರ್‌: 5 ಅಂತಸ್ತಿನ ಕಟ್ಟಡದಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ

ಬೆಂಗಳೂರು(ಮಾ.06): ಪರೀಕ್ಷೆಯಲ್ಲಿ(Exam) ನಕಲು ಮಾಡುವಾಗ ಸಿಕ್ಕಿ ಬಿದ್ದು ಕಾಲೇಜಿನಿಂದ ಡಿಬಾರ್‌ ಆಗಿದ್ದಕ್ಕೆ ಮನನೊಂದು ವಿದ್ಯಾರ್ಥಿನಿಯೊಬ್ಬರು(Student) ಐದು ಅಂತಸ್ತಿನ ಪಿ.ಜಿ. ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶುಕ್ರವಾರ ಜೀವನ ಭೀಮಾನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮುರುಗೇಶ್‌ಪಾಳ್ಯದ ಭವ್ಯಾ(19) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಕೋರಮಂಗಲದ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದ ಭವ್ಯಾ ಶುಕ್ರವಾರ ಪ್ರಥಮ ಸೆಮಿಸ್ಟರ್‌ ಪರೀಕ್ಷೆ ಬರೆಯಲು ಕಾಲೇಜಿಗೆ ಹೋಗಿದ್ದರು. ಕಾಲೇಜಿನಿಂದ ವಾಪಸು ಬಂದ ಆಕೆ ಸಂಜೆ 4.30ರ ಸುಮಾರಿಗೆ ಅಮರಜ್ಯೋತಿ ಬಡಾವಣೆಯಲ್ಲಿ ಐದು ಅಂತಸ್ತಿನ ಪಿ.ಜಿ. ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸ್‌(Police) ಅಧಿಕಾರಿಗಳು ತಿಳಿಸಿದ್ದಾರೆ.

ಭವ್ಯಾ ಆತ್ಮಹತ್ಯೆಗೂ ಮುನ್ನ ಸಹೋದರಿ ದಿವ್ಯಾ ಹಾಗೂ ತಂದೆ ಮೊಬೈಲ್‌ಗೆ ಕರೆ ಮಾಡಿ, ಪರೀಕ್ಷೆ ಬರೆಯುವಾಗ ನಕಲು ಮಾಡಿ ಸಿಕ್ಕಿಬಿದ್ದಿದ್ದು ಕಾಲೇಜಿನಿಂದ ಡಿಬಾರ್‌(Dibar) ಆಗಿದ್ದಾನೆ. ಇದರಿಂದ ಮನಸಿಗೆ ನೋವಾಗಿದೆ. ನಾನು ಬದುಕುವುದಿಲ್ಲ ಎಂದು ಹೇಳಿ ಕರೆ ಸ್ಥಗಿತಗೊಳಿಸಿದ್ದಾಳೆ. ಬಳಿಕ ತಂದೆ ಹಾಗೂ ಸಹೋದರಿ ಹತ್ತಾರು ಬಾರಿ ಕರೆ ಮಾಡಿದರೂ ಸ್ವೀಕರಿಸಿಲ್ಲ. ನಂತರ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

Man Commits Suicide ರಾಯಚೂರಿನಲ್ಲಿ ವಿಲಕ್ಷಣ ಘಟನೆ, ಮರ್ಮಾಂಗ ಕತ್ತರಿಸಿಕೊಂಡು ವ್ಯಕ್ತಿ ಆತ್ಮಹತ್ಯೆ

ಭವ್ಯಾ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸದ್ಯಕ್ಕೆ ಆತ್ಮಹತ್ಯೆಗೂ ಮುನ್ನ ಸಹೋದರಿ ಹಾಗೂ ತಂದೆ ಮೊಬೈಲ್‌ಗೆ ಕರೆ ಮಾಡಿ ಪರೀಕ್ಷೆ ನಕಲು ಮಾಡುವಾಗ ಸಿಕ್ಕಿಬಿದ್ದು ಡಿಬಾರ್‌ ಆಗಿರುವ ವಿಷಯ ತಿಳಿಸಿದ್ದಳು ಎಂಬುದು ತಿಳಿದು ಬಂದಿದೆ. ಜೀವನಭೀಮಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಲಬಾಧೆ: ರೈತ ಆತ್ಮಹತ್ಯೆ

ಮೂಡಿಗೆರೆ: ಸಾಲಬಾಧೆ(Loan) ತಾಳಲಾರದೇ ತಾಲೂಕಿನ ಗಬ್ಬಳ್ಳಿ ಗ್ರಾಮದ ರೈತ ಸಂಜಯ್‌ (30) ಕಳೆದ 4 ದಿನದ ಹಿಂದೆ ತನ್ನ ಮನೆಯಲ್ಲಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಶನಿವಾರ ಬೆಂಗಳೂರು(Bengaluru) ಆಸ್ಪತ್ರೆಯಲ್ಲಿ ನಿಧನರಾದರು.

ಸಂಜಯ್‌ ಅವರು ಬ್ಯಾಂಕ್‌ ಹಾಗೂ ಕೈ ಸಾಲ ಮಾಡಿಕೊಂಡಿದ್ದರು. ಸಾಲಭಾದೆ ತಾಳಲಾರದೇ 4 ದಿನಗಳ ಹಿಂದೆ ಗಬ್ಬಳ್ಳಿ ಗ್ರಾಮದ ತನ್ನ ಮನೆಯಲ್ಲಿದ್ದ ಕೊಳೆನಾಶಕ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು. ವಿಷಯ ತಿಳಿದ ಕೂಡಲೇ ಮನೆಯವರು ಹಾಸನ ಆಸ್ಪತ್ರೆಯಲ್ಲಿ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಶನಿವಾರ ಸಂಜಯ್‌ ನಿಧನರಾದರು. ಅವರಿಗೆ ಮುಂಬರುವ 2 ತಿಂಗಳ ನಂತರ ವಿವಾಹ ನಿಶ್ಚಯವಾಗಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ.
 

Latest Videos
Follow Us:
Download App:
  • android
  • ios