Asianet Suvarna News Asianet Suvarna News

ಮೇಲ್ಸೇತುವೆ ಮೇಲೆ ಮತ್ತೊಂದು ಅಪಘಾತ, ದಾವಣಗೆರೆ ಮೂಲದ ಇಬ್ಬರ ದುರ್ಮರಣ

* ಎಲೆಕ್ಟ್ರಾನಿಕ್ಸ್ ಸಿಟಿ : ಪೇಸ್ 2ನ ಟೋಲ್ ಬಳಿ ಅಪಘಾತ.

* BMTC ಓವರ್ ಟೇಕ್ ಮಾಡುವಾಗ ಅಪಘಾತ

* BMTC ಬಸ್ಸ್ ಬೈಕ್ ಗೆ  ಡಿಕ್ಕಿ ಸ್ಥಳದಲ್ಲೇ ಇಬ್ಬರ ಸಾವು

* ಪ್ರಭಾಕರ್ (25) ಮತ್ತು ಸಹನಾ (24) ಸ್ನೇಹಿತರು

2 Killed in Bike and BMTC Accident Bengaluru  mah
Author
Bengaluru, First Published Sep 26, 2021, 11:43 PM IST
  • Facebook
  • Twitter
  • Whatsapp

ಬೆಂಗಳೂರು(ಸೆ. 26) ಬೆಂಗಳೂರಿನಲ್ಲಿ ಅಪಘಾತ ಮತ್ತು ಅವಘಡಗಳ ಸರಣಿಗೆ ಕೊನೆ ಇಲ್ಲ ಎಂಬಂತೆ ಆಗಿದೆ.  ಎಲೆಕ್ಟ್ರಾನಿಕ್ಸ್ ಸಿಟಿ  ಪೇಸ್ 2ನ ಟೋಲ್ ಬಳಿ ಅಪಘಾತ ಸಂಭವಿಸಿದೆ.

BMTC ಓವರ್ ಟೇಕ್ ಮಾಡುವಾಗ ಅಪಘಾತ ಸಂಭವಿಸಿದ್ದು BMTC ಬಸ್ ಬೈಕ್ ಗೆ  ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ್ದಾರೆ. ಪ್ರಭಾಕರ್ (25) ಮತ್ತು ಸಹನಾ (24) ಸ್ನೇಹಿತರು ದರ್ಮರಣಕ್ಕೆ ಗುರಿಯಾಗಿದ್ದಾರೆ.

ಸಾಯಿ ತೇಜ್ ಆರೋಗ್ಯದ ಬಗ್ಗೆ ಆಘಾತಕಾರಿ ಮಾಹಿತಿ ಕೊಟ್ಟ ಪವನ್ ಕಲ್ಯಾಣ್

ಭಾನುವಾರ ಮಧ್ಯಾಹ್ನ ದುರ್ಘಟನೆ ನಡೆದಿದೆ.  ಸ್ನೇಹಿತರು  ಊಟಕ್ಕೆ ಹೋಗುವಾಗ ಡಿಕ್ಕಿಯಾಗಿದೆ. ಇಬ್ಬರು ದಾವಣಗೆರೆ ಮೂಲದವರು ಎಂಬುದು ತಿಳಿದು ಬಂದಿದೆ. ಟೆಕ್ಕಿಯಾಗಿದ್ದ ಪ್ರಭಾಕರ್, ಸಹನಾ ಬೇರೊಂದು ಕಂಪನಿಗೆ ಹೋಗುತ್ತಿದ್ದರು ಎಂಬ ಮಾಹಿತಿ ಇದೆ.

ಬೆಂಗಳೂರಿನಲ್ಲಿ(Bengaluru) ಅಪಘಾತ(Accident) ಸರಣಿಗೆ ಕೊನೆ ಇಲ್ಲದಂತೆ ಆಗಿದೆ.  ಹೊಸೂರಿನಲ್ಲಿ(Hosur) ಕಾರು ಮುಖಾ ಮುಖಿ ಡಿಕ್ಕಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಇಂಡಿಕಾ ಕಾರ್ ಗೆ ರಾಂಗ್  ರೂಟ್ ನಲ್ಲಿ  ಬಂದ ಮತ್ತೊಂದು ಕಾರು ಡಿಕ್ಕಿಯಾಗಿದೆ. ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.

ಬೆಂಗಳೂರಿಗೆ ಇದು ಸಾವಿನ ಸೆಪ್ಟೆಂಬರ್ ಎಂಬಂತೆ ಆಗಿದೆ. ಕೋರಮಂಗಲದ ಕಾರು ಅಪಘಾತ, ಅಗ್ನಿ ಅವಘಡ, ಎಲೆಕ್ಟ್ರಾನಿಕ್ ಸಿಟಿ ಮೇಲ್ಸೇತುವೆ ಮೇಲಿನ ಅಪಘಾತ ಹೀಗೆ ಸರಣಿ ಸರಣಿ ಸರಣಿ ಅಪಘಾತಗಳು ಬೆಂಗಳೂರನ್ನು ಕಾಡುತ್ತಿದೆ. 

Follow Us:
Download App:
  • android
  • ios