Asianet Suvarna News Asianet Suvarna News

ನ್ಯಾಯಾಲಯಕ್ಕೆ ಹಾಜರಾಗದೆ 26 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ!

ಸರಗಳ್ಳತನ ಪ್ರಕರಣದಲ್ಲಿ ಬರೋಬ್ಬರಿ 26 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಜಯನಗರ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಗುಲಾಬ್ ಖಾನ್ ಬಂಧಿತ ಆರೋಪಿ. ವಸಂತ ಎಂಬ ಮಹಿಳೆಯ ಸರವನ್ನು ಎಗರಿಸಿದ್ದ ಗುಲಾಬ್ ಖಾನ್.

1998 chain robbery case Accused Gulab Khan arrested by Jayanagar police at bengaluru rav
Author
First Published Feb 11, 2024, 4:42 PM IST

ಬೆಂಗಳೂರು (ಫೆ.11): ಸರಗಳ್ಳತನ ಪ್ರಕರಣದಲ್ಲಿ ಬರೋಬ್ಬರಿ 26 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಜಯನಗರ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ.

ಗುಲಾಬ್ ಖಾನ್ ಬಂಧಿತ ಆರೋಪಿ. ವಸಂತ ಎಂಬ ಮಹಿಳೆಯ ಸರವನ್ನು ಎಗರಿಸಿದ್ದ ಗುಲಾಬ್ ಖಾನ್. ಈ ಪ್ರಕರಣದಲ್ಲಿ ದಾಖಲಿಸಿಕೊಂಡಿದ್ದ ಪೊಲೀಸರು. 1998 ರಲ್ಲಿ ಆರೋಪಿಯನ್ನು ಬಂಧಿಸಿದ್ದರು. ಆಗ 24 ವರ್ಷದವನಾಗಿದ್ದ ಆರೋಪಿ. ಜೈಲಿಗೆ ಸೇರಿ ಬಳಿಕ ಜಮೀನು ಪಡೆದು ಬಿಡುಗಡೆಯಾಗಿದ್ದ ಆರೋಪಿ ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಹೀಗಾಗಿ ವಾರೆಂಟ್ ಜಾರಿ ಮಾಡಿದ್ದ ನ್ಯಾಯಾಲಯ. ಆರೋಪಿ ರಾಮನಗರದಲ್ಲಿ ಇರುವುದು ಪತ್ತೆ ಹಚ್ಚಿದ ಪೊಲೀಸರು. ರಾಮನಗರಕ್ಕೆ ತೆರಳಿ ಬಂಧಿಸಿದ್ದಾರೆ. 

Hubli: 11 ಜನರ ಮೇಲೆ ಪೊಲೀಸರಿಂದ ದೌರ್ಜನ್ಯ ಆರೋಪ: ಹಣಕ್ಕಾಗಿ ಕಾಯುವ ರಕ್ಷಕರೇ ರೌಡಿಗಳಂತೆ ವರ್ತಿಸಿದ್ರಾ ?

ಇನ್ನೊಂದು ವಿಚಾರವೆಂದರೆ ಜಯನಗರದಲ್ಲಿ ಕಳ್ಳತನ ಮಾಡಿದ‌ ನಂತರ ಆರೋಪಿ ಯಾವುದೇ ಪ್ರಕರಣದಲ್ಲಿ ಭಾಗಿಯಾಗಿರಲಿಲ್ಲ. ವೆಲ್ಡಿಂಗ್‌ ಕೆಲಸ ಮಾಡಿಕೊಂಡು ರಾಮನಗರದಲ್ಲಿ ನೆಲೆಸಿದ್ದ ಗುಲಾಬ್ ಖಾನ್. ಸದ್ಯ ಆರೋಪಿಯನ್ನು ಬಂಧಿಸಿರುವ ಜಯನಗರ ಪೊಲೀಸರು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದಾರೆ.

Follow Us:
Download App:
  • android
  • ios