ವಿದ್ಯಾರ್ಥಿನಿಗೆ ತರಗತಿಯಲ್ಲೇ ಗರ್ಭಪಾತವಾಗಿದೆ. ತೀವ್ರ ರಕ್ತಸ್ರಾವದಿಂದ ವಿದ್ಯಾರ್ಥಿನಿ ಮೃತಪಟ್ಟ ಭೀಕರ ಘಟನೆ ನಡೆದಿದೆ. ಆದರೆ ವಿದ್ಯಾರ್ಥಿನಿ ಸಾವಿನ ಹಿಂದೆ ಅನುಮಾನವೊಂದು ಮೂಡಿದೆ.
ವಿಶಾಖಪಟ್ಟಣಂ(ಏ.15): ಆಕೆಯ ವಯಸ್ತು ಕೇವಲ 19. ಬಿಟೆಕ್ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿನಿ. ಈ ವಿದ್ಯಾರ್ಥಿನಿಗೆ ತರಗತಿಯಲ್ಲೇ ಗರ್ಭಪಾತವಾಗಿದೆ.ತೀವ್ರ ರಕ್ತಸ್ರಾವದಿಂದ ವಿದ್ಯಾರ್ಥಿನಿ ಮೃತಪಟ್ಟ ಘಟನೆ ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ನಡೆದಿದೆ. ತರಗತಿಯಲ್ಲಿ ಒಬ್ಬಳೇ ಇರುವಾಗ ಈ ಘಟನೆ ನಡೆದಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರಿಗೆ ಇದೀಗ ಅನುಮಾನ ಮಾಡಿದೆ. ಈ ಗರ್ಭಪಾತ ಸ್ವಾಭಾವಿಕವೇ? ಅಥವಾ ವಿದ್ಯಾರ್ಥಿನಿಯೇ ಮಾಡಿಕೊಂಡ ಎಡವಟ್ಟಾ ಅನ್ನೋ ಅನುಮಾನಗಳು ಬಲವಾಗತೊಡಗಿದೆ.
ನೆಲ್ಲೂರಿನ ಮರಿಪಾಡ್ ಮಂಡಲ್ ಗ್ರಾಮದ ನಿವಾಸಿಯಾಗಿರುವ ವಿದ್ಯಾರ್ಥಿನಿ ದ್ವಿತೀಯ ವರ್ಷದ ಬಿಟೆಕ್ ವ್ಯಾಸಾಂಗ ಮಾಡುತ್ತಿದ್ದಳು. ವಿದ್ಯಾರ್ಥಿನಿಯ ಸಹಪಾಠಿಗಳು, ಗೆಳತಿಯರು ಶಾಲಾ ಆವರಣದಲ್ಲಿರುವಾಗ ಒಬ್ಬಳೇ ತರಗತಿಯೊಳಗೆ ಪ್ರವೇಶಿಸಿದ್ದಾಳೆ. ಕೆಲ ಹೊತ್ತಲ್ಲೇ ಚೀರಾಟವೊಂದು ಕೇಳಿಸಿದೆ. ತಕ್ಷಣವೇ ತರಗತಿ ಪ್ರವೇಶಿಸಿದ ಇತರ ವಿದ್ಯಾರ್ಥಿಗಳು ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿದ್ಯಾರ್ಥಿಯನ್ನು ಗಮನಿಸಿ ಗಾಬರಿಗೊಂಡಿದ್ದಾರೆ. ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ತಕ್ಷಣವೇ ವಿದ್ಯಾರ್ಥಿಯನ್ನು ಆಸ್ಪತ್ರೆ ದಾಖಲಿಸಿದ್ದಾರೆ.
ಗರ್ಭಪಾತದ ಬಗ್ಗೆ ಬಹುತೇಕ ಮಹಿಳೆಯರು ತಿಳ್ಕೊಂಡಿರೋ ತಪ್ಪು ವಿಚಾರಗಳಿವು
ಆಸ್ಪತ್ರೆ ದಾಖಲಿಸುವ ಮುನ್ನವೇ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಈ ಮಾಹಿತಿ ಪಡೆದ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ವಿದ್ಯಾರ್ಥಿನಿ ಯೂಟ್ಯೂಬ್ ವಿಡಿಯೋಗಳನ್ನು ಮೋಡಿ ಸ್ವಯಂ ಗರ್ಭಪಾತ ಮಾಡಿಕೊಳ್ಳಲು ಯತ್ನಿಸಿರುವ ಅನುಮಾನ ಪೊಲೀಸರನ್ನು ಕಾಡುತ್ತಿದೆ.ವಯಸ್ಸು 19, ಇನ್ನೂ ಕಾಲೇಜು ವಿದ್ಯಾರ್ಥಿನಿ. ಆಗಲೇ ಗರ್ಭಿಣಿಯಾಗಿರುವ ವಿದ್ಯಾರ್ಥಿನಿ ಸ್ವಯಂ ಗರ್ಭಪಾತ ಮಾಡಿಕೊಳ್ಳಲು ಯತ್ನಿಸಿರುವ ಸಾಧ್ಯತೆ ಕಾಣುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ
ವಿದ್ಯಾರ್ಥಿನಿ ಸಾವಿನ ವಿಚಾರ ತಿಳಿದ ಪೋಷಕರು ದಂಗಾದಿದ್ದಾರೆ. ಗರ್ಭಪಾತದಿಂದ ಸಾವನ್ನಪ್ಪಿದ್ದಾಳೆ ಅನ್ನೋದನನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಶಾಲೆಯಲ್ಲಿ ಏನೋ ಆಗಿದೆ. ಇದರಿಂದ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ. ಇದೀಗ ಗರ್ಭಪಾತದ ಕಾರಣ ಹೇಳುತ್ತಿದ್ದಾರೆ ಎಂದು ಪೋಷಕರು ಹೇಳುತ್ತಿದ್ದಾರೆ.
ಗರ್ಭಪಾತವಾಗಿದ್ದರೂ ಬಿಟ್ಟಿಲ್ಲ ಕೆಲಸಕ್ಕೆ ಕರೆದ್ರು, ಸಾಕ್ಷಿ ತೋರಿಸಬೇಕಾಯಿತು; ನಟಿ, ಸಚಿವೆ ಸ್ಮೃತಿ ಇರಾನಿ
ವಿದ್ಯಾರ್ಥಿನಿಯ ಗೆಳೆಯ ಹಾಗೂ ಗೆಳೆತಿಯರ ಮಾಹಿತಿ ಪಡೆಯಲಾಗಿದೆ. ವಿದ್ಯಾರ್ಥಿನಿ ಮೊಬೈಲ್ ಫೋನ್ ವಶಪಡಿಸಿಕೊಂಡಿರುವ ಪೊಲೀಸರಿಗೆ ಅನುಮಾನ ಮತ್ತಷ್ಟು ಬಲವಾಗತೊಡಗಿದೆ. ಆನಂದ ಸಾಗರ ಏರಿಯಾದ ಆಟೋ ಚಾಲಕ ಜೊತೆಗೆ ಆತ್ಮೀಯವಾಗಿರುವುದು ಮೊಬೈಲ್‌ನಿಂದ ಪತ್ತೆಯಾಗಿದೆ. ಪ್ರತಿ ದಿನ ಕರೆಗಳನ್ನು ಮಾಡಿರುವುದು, ಫೋಟೋಗಳು ಇರುವುದು ಪತ್ತೆಯಾಗಿದೆ. ಇದೀಗ ಆಟೋ ಚಾಲಕನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
