ಪಬ್‌ಜಿ ದಾಸ ಊಟ-ತಿಂಡಿ ಬಿಟ್ಟ.. ಕೊನೆಗೆ ಪ್ರಾಣವನ್ನೂ ಬಿಟ್ಟ!
ಪಬ್ ಜಿ ದಾಸನಾಗಿದ್ದ ಬಾಲಕ ಊಟ-ತಿಂಡಿ ಬಿಟ್ಟ/ ಆರೋಗ್ಯ ಕೆಟ್ಟು ಆಸ್ಪತ್ರೆ ಸೇರಿದ/ ಚಿಕಿತ್ಸೆ ಫಲಿಸದೆ ಕೊನೆ ಉಸಿರು ಎಳೆದ/ ಪಬ್ ಜಿ ಹುಚ್ಚಾಟಕ್ಕೆ ಬಲಿ
ಕೋಲ್ಕತ್ತಾ(ಆ. 15) ಪಬ್ ಜಿ ಹುಚ್ಚಾಟ ಯುವಕನ ಪ್ರಾಣವನ್ನೇ ಬಲಿ ಪಡೆದಿದೆ. ಪಬ್ ಜಿಗೆ ದಾಸನಾಗಿದ್ದ 16 ವರ್ಷದ ಯುವಕ ಊಟ-ತಿಂಡಿ ಬಿಟ್ಟು ಜೀವ ಕಳೆದುಕೊಂಡಿದ್ದಾನೆ.
ನಿರಂತರವಾಗಿ ಪಬ್ ಜಿ ಆಡುತ್ತ ಊಟ ತಿಂಡಿಯನ್ನೇ ಬಿಟ್ಟಿದ್ದಾನೆ. ಊಟ-ತಿಂಡಿ-ನೀರು ಎಲ್ಲವನ್ನು ಬಿಟ್ಟ ಬಾಲಕನ ಆರೋಗ್ಯ ಹದಗೆಟ್ಟಿದೆ. ಡಿಹೈಡ್ರೇಶನ್ ಆಗಿ ಆಸ್ಪತ್ರೆ ಸೇರುವ ಸ್ಥಿತಿ ನಿರ್ಮಾಣವಾಗಿದೆ.
ಇಲ್ಲೂರಿನ ಆಸ್ಪತ್ರೆಯೊಂದಕ್ಕೆ ಕುಟುಂಬ ಬಾಲಕನ ಕರೆದುಕೊಂಡು ಬಂದಿದೆ. ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದ ಮನಗಂಡ ವೈದ್ಯರು ಚಿಕಿತ್ಸೆಗೆ ಮುಂದಾಗಿದ್ದಾರೆ. ಆದರೆ ಬಾಲಕನನ್ನು ಬದುಕಿಸಲು ಸಾಧ್ಯವಾಗಿಲ್ಲ.
ಬಾಲಕರ ಮನಸ್ಸಿನ ಮೇಲೆ ಸೈಬರ್ ಲೋಕದ ದಂಧೆಕೋರರು ಪರಿಣಾಮ ಬೀರಿರುವ ಸಾಧ್ಯತೆ ಇರುತ್ತದೆ ಎಂದು ಸಿಐಡಿ ಅಧಿಕಾರಿ ಜಿಆರ್ ರಾಧಿಕಾ ಹೇಳುತ್ತಾರೆ. ಜನವರಿಯಲ್ಲಿ ಒಬ್ಬಾತ ಪಬ್ ಜಿ ಗೆ ದಾಸನಾಗಿ ತನ್ನ ನಿಯಂತ್ರಣ ಕಳೆದುಕೊಂಡಿದ್ದ ಘಟನೆಯನ್ನು ಹೈದರಾಬಾದ್ ಪೊಲೀಸರು ಉಲ್ಲೇಖ ಮಾಡುತ್ತಾರೆ.