ಬಹುಶಃ ಈಕೆಯನ್ನೂ ಯಾರೂ ಕೂಡ ಕ್ಷಮಿಸಲಾರರು. ಕೇವಲ 16 ತಿಂಗಳ ಮಗುವನ್ನು ಏಕಾಂಗಿಯಾಗಿ ಮನೆಯಲ್ಲೇ ಬಿಟ್ಟು 10 ದಿನಗಳ ಕಾಲ ಈ ತಾಯಿ ಪ್ರವಾಸಕ್ಕೆ ಹೋಗಿದ್ದಾಳೆ. ವಾಪಾಸು ಬಂದಾಗ ಮಗು ಹಸಿವಿನಿಂದ ಸಾವು ಕಂಡಿದೆ.
ನವದೆಹಲಿ (ಜೂ.26): ಆ ಮಗು ಹುಟ್ಟು 16 ತಿಂಗಳಾಗಿತ್ತಷ್ಟೇ. ಆದರೆ, ತಾಯಿಯ ಪ್ರವಾಸದ ಗೀಳು ಭೂಮಿಯ ಮೇಲೆ ಮಗುವಿನ ಆಯಸ್ಸು 16 ತಿಂಗಳಿಗೇ ಮುಕ್ತಾಯ ಮಾಡಿದೆ.. ಕೇಳಲೂ ಕೂಡ ಭೀಕರವಾಗಿರುವ ಘಟನೆ ನಡೆದಿರುವುದು ಅಮೆರಿಕದ ಓಹಿಯೋ ರಾಜ್ಯದಲ್ಲಿ. ತನ್ನ ಮಗು ತನ್ನ ಕಾಲ ಮೇಲೆ ನಡೆಯುವವರೆಗೂ ಒಂದು ಹಂತಕ್ಕೆ ಬೆಳೆಯುವವರೆಗೂ ತಾಯಿ ಅದೆಷ್ಟು ಜೋಪಾನ ಮಾಡುತ್ತಾಳೆಂದರೆ, ಆಕೆಯ ಅದೆಷ್ಟೋ ಕನಸುಗಳು ಮಗುವಿನ ನಗುವಿನ ಅಡಿಗೆ ಹೋಗಿರುತ್ತದೆ. ಆದರೆ, ಓಹಿಯೋದ ಕ್ಲೆವ್‌ಲ್ಯಾಂಡ್‌ನಲ್ಲಿ ಮಹಾತಾಯಿಯೊಬ್ಬಳು ತನ್ನ 16 ತಿಂಗಳ ಮಗುವನ್ನು ಮನೆಯಲ್ಲಿ ಏಕಾಂಗಿಯಾಗೊ ಬಿಟ್ಟು ಪೋರ್ಟೋರಿಕೋಗೆ 10 ದಿನಗಳ ಪ್ರವಾಸಕ್ಕೆ ಹೋಗಿದ್ದಾಳೆ. ಮನೆಗೆ ಬಂದು ನೋಡಿದಾಗ, ಇದ್ದ ಬಟ್ಟೆಯಲ್ಲೇ ಮಲ, ಮೂತ್ರ ಮಾಡಿಕೊಂಡಿದ್ದ ಮಗು, ಒಂದು ತೊಟ್ಟು ನೀರೂ ಇಲ್ಲದೆ ಸಾವು ಕಂಡಿತ್ತು. ಇದರ ಬೆನ್ನಲ್ಲಿಯೇ ಪೊಲೀಸರು 31 ವರ್ಷದ ತಾಯಿ ಕ್ರಿಸ್ಟೆಲ್ ಕ್ಯಾಂಡೆಲಾರಿಯೊ ವಿರುದ್ಧ ಕೊಲೆ ಪ್ರಕರಣದ ದಾಖಲಿಸಿ ಜೈಲಿಗೆ ಅಟ್ಟಿದ್ದಾರೆ. ಜೂನ್ 16 ರಂದು ಈಕೆ ವಾಪಾಸ್ ಮನೆಗೆ ಹೊಕ್ಕಾಗ ಮಗು ಸಾವು ಕಂಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಕ್ಯಾಂಡೆಲಾರಿಯೊ ಪೋರ್ಟೋರಿಕೋ ಹಾಗೂ ಡೆಟ್ರಾಯಿಟ್ ಪ್ರವಾಸದಲ್ಲಿದ್ದರು. ಈ ವೇಳೆ ತಮ್ಮ 16 ತಿಂಗಳ ಮಗುವನ್ನು ಮನೆಯಲ್ಲಿಯೇ ಏಕಾಂಗಿಯಾಗಿ ಕೂಡಿಟ್ಟಿದ್ದರು ಎಂದು ಪೊಲೀಸ್ ಅಫಡವಿಟ್‌ನಲ್ಲಿ ತಿಳಿಸಲಾಗಿದೆ. ಅಫಿಡವಿಟ್ ಪ್ರಕಾರ ಮಗಳು ಜೈಲಿನ್ ಅನ್ನು "ಮನೆಯಲ್ಲಿ ಒಬ್ಬಂಟಿಯಾಗಿ ಮತ್ತು ಆಕೆಯ ಬಗ್ಗೆ ಗಮನವವೇ ನೀಡದೇ ಬಿಟ್ಟು ಹೋಗಿದ್ದಳು ಎಂದು ತಿಳಿಸಿದ್ದಾರೆ.
ನಾನು ಪ್ರವಾಸ ಮುಗಿಸಿ ಮನಗೆ ಬಂದಾಗ, ಮಗು ಸಂಪೂರ್ಣವಾಗಿ ಡಿಹೈಡ್ರೇಟ್ ಆಗಿತ್ತು. ಆಕೆಯನ್ನು ಮಲಗಿಸಿದ್ದ ಬ್ಲಾಂಕೆಟ್‌ಗಳು, ಹೊದಿಕೆಗಳು ಸಂಪೂರ್ಣವಾಗಿ ಮಲ-ಮೂತ್ರದಿಂದ ಒದ್ದೆಯಾಗಿದ್ದವು ಎಂದು ತಾಯಿ ಕ್ಯಾಂಡೆಲಾರಿಯೊ ಹೇಳಿದ್ದಾಳೆ ಎಂದು ಅಫಡವಿಟ್‌ನಲ್ಲಿ ತಿಳಿಸಲಾಗಿದೆ.
ಇನ್ನು ಆಕೆಯ ಪಕ್ಕದ ಮನೆಯವರ ಹೇಳಿಕೆಗಳನ್ನೂ ಪೊಲೀಸರು ಪಡೆದುಕೊಂಡಿದ್ದು, ಮಗುವನ್ನು ಮನೆಯಲ್ಲಿಯೇ ಏಕಾಂಗಿಯಾಗಿ ಬಿಟ್ಟು ಹೋಗಿದ್ದು ಇದು ಮೊದಲ ಸಲವೇನಲ್ಲ ಎಂದು ತಿಳಿಸಿದ್ದಾರೆ. ನಾವು ಸಾಕಷ್ಟು ಬಾರಿ ಆಕೆಗೆ ತಿಳಿಸಿ ಹೇಳಿದ್ದೆವು. ಪುಟ್ಟ ಮಕ್ಕಳನ್ನು ಏಕಾಂಗಿಯಾಗಿ ಬಿಟ್ಟು ಹೋಗುತ್ತಿದ್ದಳು. ನನ್ನ ಸ್ನೇಹಿತೆಯೂ ಕೂಡ ಆಕೆಗೆ ಇದನ್ನು ಹೇಳಿದ್ದಳು. ಆದರೆ, ಆಕೆ ಯಾರ ಮಾತನ್ನೂ ಕೇಳುತ್ತಿರಲಿಲ್ಲ' ಎಂದು ತಿಳಿಸಿದ್ದಾರೆ.
ಕ್ಲೆವ್‌ಲ್ಯಾಂಡ್‌ನಲ್ಲಿರುವ ಮನೆಯಲ್ಲಿ ಕ್ಯಾಂಡೆಲಾರಿಯೊ ತನ್ನ ಇಬ್ಬರು ಹೆಣ್ಣುಮಕ್ಕಳು ಹಾಗೂ ಪೋಷಕರೊಂದಿಗೆ ವಾಸವಿದ್ದರು.ಆದರೆ, ಇತ್ತೀಚೆಗೆ ಆಕೆಯ ತಾಯಿ, ಆಕೆಯ ಹಿರಿಯ ಪುತ್ರಿಯೊಂದಿಗೆ ಪ್ರವಾಸಕ್ಕೆ ಹೋಗಿದ್ದರು ಎಂದು ಅಕ್ಕಪಕ್ಕದ ಮನೆಯವರು ತಿಳಿಸಿದ್ದಾರೆ. ಇಲ್ಲಿ ಸಾಕಷ್ಟು ಜನರಿದ್ದಾರೆ. ಇಲ್ಲಿ ಯಾರ ಬಳಿಯಲ್ಲಾದರೂ ಜೈಲಿನ್‌ನಲ್ಲಿ ಕೊಟ್ಟು ಬರುವವರೆಗೂ ನೋಡಿಕೊಂಡಿರಿ ಎಂದಿದ್ದರೆ, ಖಂಡಿತವಾಗಿ ಸಹಾಯ ಮಾಡುತ್ತಿದ್ದರು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಫಲಿಸದ ವೇದಿಕಾ ಠಾಕೂರ್ ಹೋರಾಟ, ಬಿಜೆಪಿ ನಾಯಕ ಪ್ರಿಯಾಂಶ್ ವಿರುದ್ಧ ಕೊಲೆ ಕೇಸ್!
ತನಿಖೆ ನಡೆಯುತ್ತಿರುವುದರಿಂದ ಮಗುವಿನ ದೇಹವನ್ನು ಹೆಚ್ಚಿನ ಪರೀಕ್ಷೆಗಾಗಿ ಕ್ಯುಯಾಹೋಗಾ ಕೌಂಟಿ ವೈದ್ಯಕೀಯ ಪರೀಕ್ಷಕರ ಕಚೇರಿಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಒಂದೇ ತಿಂಗಳಲ್ಲಿ ದೇಶದಲ್ಲಿ ಟೊಮ್ಯಾಟೋ ಬೆಲೆಯಲ್ಲಿ ಶೇ. 1900ರಷ್ಟು ಏರಿಕೆ, ಏನು ಕಾರಣ?
