ತಮಿಳುನಾಡಿನಲ್ಲಿ 14 ವರ್ಷದ ಬಾಲಕಿಯನ್ನು ಬಲವಂತವಾಗಿ ಮದುವೆಯಾಗಿ ಅಪಹರಿಸಲಾಗಿದೆ. ಬಾಲಕಿ ಕಿರುಚಾಡಿದರೂ ಬಿಡದೆ ಎಳೆದೊಯ್ದ ಘಟನೆ ನಡೆದಿದೆ, ಆರೋಪಿಗಳನ್ನು ಬಂಧಿಸಲಾಗಿದೆ.

ತಮಿಳುನಾಡು / ಆನೇಕಲ್ (ಮಾ.10): ಕರ್ನಾಟಕ ರಾಜ್ಯದ ಗಡಿಭಾಗದ ಪ್ರದೇಶ ತಮಿಳುನಾಡಿಗೆ ಸೇರುವ ಊರಿನಲ್ಲಿ ಅಮಾನವೀಯ ಘಟನೆ ನಡೆದಿದೆ. ಇಡೀ ಸಮಾಜವೇ ತಲೆತಗ್ಗಿಸುವಂತಹ ಪ್ರಕರಣ ಇದಾಗಿದೆ. 14 ವರ್ಷದ ಬಾಲಕಿಯನ್ನ ಮದುವೆಯಾಗಿ ಹೊತ್ತೊಯ್ದ ಘಟನೆ ನಡೆದಿದೆ. ಬಾಲಕಿ ಕಿರುಚಾಟ ನಡೆಸಿದರೂ, ಆಕೆಯನ್ನು ಬಿಡದೆ ಪಾಪಿಗಳು ಎಳೆದೊಯ್ದಿದ್ದಾರೆ. ಬಾಲಕಿ ಅಳುತ್ತಾ, ಕಿರುಚಾಡಿದರೂ ಬಿಡದೆ ಕಾಡು ಮೃಗಗಳ ರೀತಿ ವರ್ತನೆ ಮಾಡಿದ್ದಾರೆ. ಕರ್ನಾಟಕ ಗಡಿಭಾಗಕ್ಕೆ ಹೊಂದಿಕೊಂಡಿರುವ ತಮಿಳುನಾಡಿನ ಅಂಚೆಟ್ಟಿ ಗ್ರಾಮದಲ್ಲಿ ನಡೆದ ಘಟನೆ ನಡೆದಿದೆ. ಏಳನೇ ತರಗತಿ ಓದುತ್ತಿದ್ದ ವಿದ್ಯಾರ್ಥಿನಿಗೆ ಬಲವಂತವಾಗಿ ಬಾಲ್ಯ ವಿವಾಹ ಮಾಡಲಾಗಿದೆ. ಬಾಲಕಿ ತಾಯಿಯ ಸ್ವಂತ ತಮ್ಮನ ಜೊತೆ ಬಾಲಕಿಗೆ ಬಾಲ್ಯವಿವಾಹ ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ.

ಬಾಲಕಿಗೆ ಇಷ್ಟವಿಲ್ಲದೇ ಇದ್ದರೂ ಬಲವಂತವಾಗಿ ಪೋಷಕರು ಮದುವೆ ಮಾಡಿದ್ದಾರೆ. ಕಳೆದ ನಾಲ್ಕೈದು ದಿನಗಳ ಹಿಂದೆ ಬೆಂಗಳೂರಿನಲ್ಲಿ ಈ ಬಾಲ್ಯವಿವಾಹ ನಡೆದಿದೆ. ಬಾಲ್ಯವಿವಾಹ ಮುಗಿಸಿ ಎಲ್ಲರೂ ಅಂಚೆಟ್ಟಿಯ ಬಾಲಕಿ ಮನೆಗೆ ಬಂದಿದ್ದರು. ಅಲ್ಲಿಂದ ಬಾಲಕಿಯನ್ನ ಯುವಕನ ಮನೆಗೆ ಕರೆದುಕೊಂಡು ಹೋಗಲು ಯತ್ನಿಸಲಾಗಿದೆ. ಬಾಲಕಿ ಒಪ್ಪದೆ ಇದ್ದಾಗ ಭುಜದ ಮೇಲೆ ಆಸಾಮಿಗಳು ಹೊತ್ತೊಯ್ದಿದ್ದಾರೆ. ದಾರಿಯುದ್ದಕ್ಕೂ ಬಾಲಕಿ ಕಿರುಚಾಡಿದರೂ ಪಾಪಿಗಳು ಬಿಟ್ಟಿಲ್ಲ.ಬಾಲಕಿ ಕಣ್ಣೀರು ಹಾಕಿ ಗೋಳಾಡಿದರೂ ಪಾಪಿಗಳ ಮನಸ್ಸು ಕರಗಿಲ್ಲ.

17ರ ಬಾಲಕಿಗೆ ಮದುವೆ ಮಾಡಿದ್ದಕ್ಕೆ ಹೈಕೋರ್ಟ್ ಗರಂ!

ಈ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ಡೆಂಕಣಿಕೋಟೆ ಮಹಿಳಾ ಪೊಲೀಸರಿಂದ ಆರೋಪಿಗಳನ್ನು ಬಂಧಿಸಲಾಗಿದೆ. ಬಾಲ್ಯ ವಿವಾಹವಾಗಿದ್ದ ಮಾದೇಶ್, ಆತನ ಅಣ್ಣ ಮಲ್ಲೇಶ್, ಪತ್ನಿ ಮುನಿಯಮ್ನಲ್, ಬಾಲಕಿ ತಾಯಿ ನಾಗಮ್ಮ, ಸಂಬಂಧಿ ಮುನಿಯಪ್ಪನ್‌ರನ್ನು ಬಂಧಿಸಲಾಗಿದ್ದು, ಎಲ್ಲರ ವಿರುದ್ಧವೂ ಪೋಕ್ಸೋ ಕೇಸ್‌ ದಾಖಲು ಮಾಡಲಾಗಿದೆ.

ಎಲ್ಲಾ ರಾಜ್ಯಗಳಲ್ಲೂ ಬಾಲ್ಯವಿವಾಹ ಹೆಚ್ಚಳ! ಸುಪ್ರೀಂ ಗರಂ, ಕಠಿಣ ಆದೇಶ