Asianet Suvarna News Asianet Suvarna News

ಹೂಡಿಕೆ, ಸಾಲ, ಉದ್ಯೋಗ ಆಫರ್, ಬೆಂಗೂರಿನಲ್ಲಿ 357 ಕೋಟಿ ರೂ ವಂಚನೆ ಬಯಲಿಗೆ!

ವಿದೇಶಿಗರ ಜೊತೆ ಸೇರಿ ಭಾರತೀಯರಿಗೆ ಕೋಟಿ ಕೋಟಿ ರೂಪಾಯಿ ವಂಚಿಸಿದ ಪ್ರಕರಣವನ್ನು ಸಿಬಿಐ ಬಯಲಿಗೆಳಿದಿದೆ. ಉದ್ಯೋಗ, ಸಾಲ, ಹೂಡಿಕೆಗಳ ಮೂಲಕ 300ಕ್ಕೂ ಹೆಚ್ಚು ಕೋಟಿ ರೂಪಾಯಿ ವಂಚಿಸಿರುವ ಹೈಟೆಕ್ ಪ್ರಕರಣ ದೇಶವನ್ನೇ ಬೆಚ್ಚಿ ಬೀಳಿಸಿದೆ.

137 Shell companies duped Indians of RS 356 crore by luring them with ponzi scheme job loan offer ckm
Author
First Published Oct 21, 2023, 12:42 PM IST

ಬೆಂಗಳೂರು(ಅ.21) ಇದು ಬರೋಬ್ಬರಿ 300 ಕೋಟಿ ರೂಪಾಯಿಗೂ ಹೆಚ್ಚಿನ ವಂಚನೆ ಪ್ರಕರಣ. ವಿದೇಶಿಗರ ಜೊತೆ ಸೇರಿ ಭಾರತೀಯರಿಗೆ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ.ಕಾಂಪ್ಲೆಕ್ಸ್ ನೆಟ್‌ವರ್ಕಿಂಗ್ ಮೂಲಕ 137 ಶೆಲ್ ಕಂಪನಿಗಳು ಸಾಮಾನ್ಯ ಭಾರತೀಯನಿಗೆ ವಂಚಿಸಿದೆ.  ಸಾಲದ ಆಫರ್, ಉದ್ಯೋಗ ಆಫರ್, ಹೂಡಿಕೆ ಮಾಡಿದರೆ ಹೆಚ್ಚಿನ ಬಡ್ದಿದರದಲ್ಲಿ ಹಣ ಸೇರಿದಂತೆ ಹಲವು ಆಫರ್ ನೀಡುವ ಮೂಲಕ ಭಾರತೀಯರನ್ನು ತೊಡಗಿಸಿಕೊಂಡು ಬರೋಬ್ಬರಿ 300 ಕೋಟಿ ರೂಪಾಯಿಗೂ ಅಧಿಕ ಹಣ ವಂಚನೆ ನಡೆದಿದೆ. ಸಿಬಿಐ ಅಧಿಕಾರಿಗಳು ಬೆಂಗಳೂರು, ಕೊಚ್ಚಿ, ಗುರುಗಾಂವ್ ಸೇರಿದಂತೆ ವಿವಿಧ ಹೈಟೆಕ್ ವಂಚನೆ ಪ್ರಕರಣ ಕಚೇರಿಗಳಿಗೆ ದಾಳಿ ಮಾಡಿ ಪ್ರಕರಣ ಬಯಲಿಗೆಳದಿದೆ.

ಬೆಂಗಳೂರು, ಗುರುಗಾಂವ್ ಹಾಗೂ ಕೊಚ್ಚಿ ಮೂಲಕ ಆರೋಪಿಗಳು ವಿದೇಶಿಗರ ಜೊತೆ ಸೇರಿ ನಡೆಸಿದ ವಂಚನೆ ಪ್ರಕರಣ ಇದಾಗಿದೆ. ಕಾಂಪ್ಲೆಕ್ಸ್ ವೆಬ್ ಯುಪಿಐ ಖಾತೆ, ಕ್ರಿಪ್ಟೋ ಕರೆನ್ಸಿ ಹಾಗೂ ಅಂತಾರಾಷ್ಟ್ರೀಯ ಹಣ ವರ್ಗಾವವಣೆ ಮೂಲಕ ಭಾರತೀಯರಿಗೆ ಪಡೆದ ಹಣವನ್ನು ವಿದೇಶಕ್ಕೆ ಸಾಗಿಸಲಾಗಿರುವುದು ತನಿಖೆಯಿಂದ ಬಯಲಾಗಿದೆ. 

ನಟಿ ಜಯಪ್ರದಾಗೆ ಮದ್ರಾಸ್​ ಹೈಕೋರ್ಟ್​ನಿಂದ ಬಿಗ್​ ಶಾಕ್​: ಜೈಲು ಶಿಕ್ಷೆ ರದ್ದತಿಗೆ ನಕಾರ

ಕಳೆದ ಒಂದು ವರ್ಷದಿಂದ ಈ ಪ್ರಕರಣ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಇದೀಗ ದಾಳಿ ನಡೆಸಿ ಪ್ರಕರಣ ಬಯಲಿಗೆಳೆದಿದೆ. ಚಕ್ರ 2 ಎಜೆನ್ಸಿ ಈ ವಂಚನೆ ಹಿಂದಿರುವ ಪ್ರಮುಖ ಕಂಪನಿಯಾಗಿದೆ. ಈ ಎಜೆನ್ಸಿ 137 ಶೆಲ್ ಕಂಪನಿಗಳನ್ನು ಜೊತೆಗೂಡಿಸಿಗೊಂಡು ಈ ವಂಚನೆ ನಡೆಸಿದೆ. 137 ಕಂಪನಿಗಳ ಪೈಕಿ ಬಹುತೇಕ ಕಂಪನಿಗಳು ಬೆಂಗಳೂರಿನಲ್ಲೇ ನೋಂದಣಿಗೊಂಡಿದೆ. ಈ ಕಂಪನಿಗಳ ಕೆಲ ನಿರ್ದೇಶಕರು ಬೆಂಗಳೂರು ಮೂಲದ ಪಾವತಿ ವ್ಯಾಪರ ಕಂಪನಿಗಳ ಪಾಲುದಾರರಾಗಿದ್ದರೆ. 

ಮೋಸ ಹೋದ ವ್ಯಕ್ತಿಯೊಬ್ಬರು 2022ರಲ್ಲಿ ಸೈಬರ್ ಕ್ರೈಂ ವಿಭಾಗದಲ್ಲಿ ದೂರು ದಾಖಲಿಸಿದ್ದರು. ಈ ಪ್ರಕರಣದ ಗಂಭೀರತ ಅರಿತ ಸಿಬಿಐ ತನಿಖೆ ಆರಂಭಿಸಿತ್ತು. ಸ್ಥಳೀಯ ಆರೋಪಿಗಳು, ವಿದೇಶಿಗರ ಜೊತೆ ಸೇರಿ ಭಾರತೀಯರಿಗೆ ವಂಚಿಸುತ್ತಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ. ಹೂಡಿಕೆ ಮಾಡುವ ಮೊತ್ತಕ್ಕೆ ಅತೀ ಹೆಚ್ಚಿನ ಬಡ್ಡಿದರ( ಪೋಂಝಿ ಸ್ಕೀಂ) ಸಾಲ, ಪಾರ್ಟ್ ಟೈಂ ಉದ್ಯೋಗ, ಮಾರ್ಕೆಟಿಂಗ್ ಸೇರಿದಂತೆ ಹಲವು ಸೇವೆಗಳನ್ನು ನೀಡುವುದಾಗಿ ಸಾರ್ವಜನಿಕರಿಗೆ ಹಣ ಹೂಡಿಕೆ ಮಾಡಿಸಿದ್ದಾರೆ. 

ಡಿಜಿಟಲ್ ಬ್ಯಾಂಕಿಂಗ್ ವಂಚನೆಗಳ ಬಗ್ಗೆ ಎಚ್ಚರಿಕೆ ಇರಲಿ: ನಿಮ್ಮ ಹಣ ರಕ್ಷಿಸಿಕೊಳ್ಳಲು ಹೀಗೆ ಮೋಸ ಹೋಗ್ಬೇಡಿ..!

16 ಬ್ಯಾಂಕ್ ಖಾತೆಗಳ ಮೂಲಕ ಹಣ ಸಂಗ್ರಹ ಮಾಡಲಾಗಿದೆ. ಬರೋಬ್ಬರಿ 357 ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿದೆ. ಈ ಹಣವನ್ನು ವಿದೇಶಕ್ಕೆ ಕಳುಹಿಸಲಾಗಿದೆ.  ತೀವ್ರ ವಿಚಾರಣೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಶೀಘ್ರದಲ್ಲೇ ಸ್ಫೋಟಕ ಮಾಹಿತಿ ಬಹಿರಂಗಪಡಿಸುವ ಸೂಚನೆ ನೀಡಿದ್ದಾರೆ.

Follow Us:
Download App:
  • android
  • ios