Asianet Suvarna News Asianet Suvarna News

ಬಾಗಲಕೋಟೆ: ಡಿಸಿಸಿ ಬ್ಯಾಂಕ್ ಜವಾನನಿಂದ ₹12 ಕೋಟಿ ವಂಚನೆ..!

ಡಿಸಿಸಿ ಬ್ಯಾಂಕಿನಲ್ಲಿ ಜವಾನನಾಗಿದ್ದ ಪ್ರವೀಣ ಪತ್ರಿ ಬ್ಯಾಂಕ್‌ ಅಮೀನಗಡ, ಕಮತಗಿ, ಗುಡೂರ ಶಾಖೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಬ್ಯಾಂಕಿನ ಮ್ಯಾನೇಜರ್‌ ಐಡಿ, ಪಾಸ್‌ವರ್ಡ್ ಹ್ಯಾಕ್ ಮಾಡಿ ₹12 ಕೋಟಿ ವಂಚಿಸಿದ್ದ. 

12 Crore Fraud by DCC Bank Peon in Bagalkot grg
Author
First Published May 26, 2024, 11:20 AM IST

ಬಾಗಲಕೋಟೆ(ಮೇ.26):  ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನಲ್ಲಿ ಮೂರು ವರ್ಷಗಳ ಹಿಂದೆ ಬ್ಯಾಂಕ್ ಜವಾನ ನಡೆಸಿದ ₹12 ಕೋಟಿ ವಂಚನೆ ಹಗರಣ ಇದೀಗ ಮತ್ತೆ ಸದ್ದು ಮಾಡುತ್ತಿದೆ. ವಂಚನೆಯ ತನಿಖೆ ತೀವ್ರಗೊಳಿಸಿರುವ ಸಿಐಡಿ ಅಧಿಕಾರಿಗಳ ತಂಡ ಬಾಗಲಕೋಟೆಗೆ ಶನಿವಾರ ಭೇಟಿ ನೀಡಿ ಹಲವರನ್ನು ವಿಚಾರಣೆ ನಡೆಸಿದೆ. 

ಡಿಸಿಸಿ ಬ್ಯಾಂಕಿನಲ್ಲಿ ಜವಾನನಾಗಿದ್ದ ಪ್ರವೀಣ ಪತ್ರಿ ಬ್ಯಾಂಕ್‌ ಅಮೀನಗಡ, ಕಮತಗಿ, ಗುಡೂರ ಶಾಖೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಬ್ಯಾಂಕಿನ ಮ್ಯಾನೇಜರ್‌ ಐಡಿ, ಪಾಸ್‌ವರ್ಡ್ ಹ್ಯಾಕ್ ಮಾಡಿ ₹12 ಕೋಟಿ ವಂಚಿಸಿದ್ದ. ಪ್ರಕರಣದ ತನಿಖೆ ಕೈಗೊಂಡಿರುವ ಸಿಐಡಿ ತಂಡ ಇದೀಗ ಬ್ಯಾಂಕಿನ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ಮತ್ತು ಖಾತೆದಾರರ ವಿಚಾರಣೆಯನ್ನು ಬಾಗಲಕೋಟೆಯ ಪ್ರವಾಸಿ ಮಂದಿರದಲ್ಲಿ ನಡೆಸಿತು. 

ಕಾರವಾರ ಅರ್ಬನ್ ಬ್ಯಾಂಕ್‌ನಲ್ಲಿ 54 ಕೋಟಿ ಅವ್ಯವಹಾರ..!

ನಿಶ್ಚಿತ ಠೇವಣಿ ಮೇಲಿನ ಬಡ್ಡಿ ಹಣವಂಚಿಸಿದ ಆರೋಪ ಎದುರಿಸಿ ಅಮಾನತುಗೊಂಡಿದ್ದ ಪ್ರವೀಣ ಪತ್ರಿ ಸಿನಿಮಾ ಆಲ್ಬಂ ಸಾಂಗ್, ಮೋಜು ಮಸ್ತಿಗೆ ವ್ಯಯ ಮಾಡಿದ್ದ.

Latest Videos
Follow Us:
Download App:
  • android
  • ios