Asianet Suvarna News Asianet Suvarna News

Love| ಓದೋ ವಯಸ್ಸಲ್ಲಿ ಪ್ರೀತಿ: ಹುಡುಗಿ ಬೇಡ ಎಂದಿದ್ದೇ ತಡ ಆಕೆಯ ಕತ್ತನ್ನೇ ಕುಯ್ದ ಬಾಲಕ!

* ರಾಜಸ್ಥಾನದಲ್ಲೊಂದು ಶಾಕಿಂಗ್ ಘಟನೆ

* ಸಹಪಾಠಿ ಸ್ನೇಹ ಬೆಳೆಸಲು ಒಪ್ಪದ್ದಕ್ಕೆ ಕತ್ತು ಕೊಯ್ದ 

* ಆಸ್ಪತ್ರೆಗೂ ತೆರಳಿ ವೈದ್ಯರಿಗೆ ಸವಾಲು

12 Class Student Deadly Attack on His Classmate Who said No To His Friendship pod
Author
Bangalore, First Published Nov 23, 2021, 9:43 PM IST
  • Facebook
  • Twitter
  • Whatsapp

ಪಾಲಿ(ನ.23): ಪ್ರೀತಿಯು (Love) ಅತ್ಯಂತ ಸುಂದರವಾದ ಭಾವನೆಯಾಗಿದ್ದು ಅದು ವ್ಯಕ್ತಿಯ ಜೀವನವನ್ನು ಸುಂದರಗೊಳಿಸುತ್ತದೆ ಎಂದು ಹೇಳಲಾಗುತ್ತದೆ. ಆದರೆ ಈ ಪ್ರೀತಿ ಏಕಮುಖವಾಗಿದ್ದರೆ, ಅದು ಕ್ರಮೇಣ ಹುಚ್ಚುತನವಾಗುತ್ತದೆ ಮತ್ತು ಅನೇಕ ಅಪರಾಧಗಳಿಗೆ (Crime) ಕಾರಣವಾಗುತ್ತದೆ. ಇದರ ಪರಿಣಾಮ ತುಂಬಾ ನೋವಿನಿಂದ ಕೂಡಿರುತ್ತದೆ. ಇಂತಹದ್ದೇ ಆಘಾತಕಾರಿ ಪ್ರಕರಣವೊಂದು ರಾಜಸ್ಥಾನದ (Rajasthan) ಪಾಲಿ ಜಿಲ್ಲೆಯಿಂದ ಬೆಳಕಿಗೆ ಬಂದಿದೆ. ಇಲ್ಲೊಬ್ಬ ಹುಚ್ಚು ಬಾಲಕನಿಗೆ ಪ್ರೀತಿಯ ಜ್ವರ ಅದೆಷ್ಟು ಏರಿದೆ ಎಂದರೆ ಆತ ತನ್ನ ಪ್ರೀತಿಗಾಗಿ ತನ್ನದೇ ತರಗತಿಯ ವಿದ್ಯಾರ್ಥಿನಿಯನ್ನು ಬಲಿ ಪಡೆದಿದ್ದಾನೆ. ಆರೋಪಿ ಬಾಲಕ ಬಲವಂತವಾಗಿ ಹುಡುಗಿಯೊಂದಿಗೆ ಸ್ನೇಹ ಬೆಳೆಸಲು ಬಯಸಿದ್ದ. ಆದರೆ ಬಾಲಕಿ ಇದಕ್ಕೆ ನಿರಾಕರಿಸಿದ್ದು, ಕೋಪಗೊಂಡ ಬಾಲಕ ಆಕೆಯ ಕತ್ತು ಸೀಳಿದ್ದಾನೆ. 

ಕುತ್ತಿಗೆ ಕುಯ್ಯುತ್ತಿದ್ದಂತೆಯೇ ರಕ್ತದ ಹೊಳೆ

ವಾಸ್ತವವಾಗಿ, ಈ ಘಟನೆ ಮಂಗಳವಾರ ಮಧ್ಯಾಹ್ನ ಪಾಲಿ ಜಿಲ್ಲೆಯ ಬಿಥೋಲಾ ಕಲನ್ ಗ್ರಾಮದ್ದು. ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಮಧ್ಯಾಹ್ನದ ಊಟದ ವೇಳೆ 12ನೇ ತರಗತಿಯ ವಿದ್ಯಾರ್ಥಿಯೊಬ್ಬ ಒಟ್ಟಿಗೆ ಓದುತ್ತಿದ್ದ ವಿದ್ಯಾರ್ಥಿನಿಯ (Student) ಕತ್ತನ್ನು ಬ್ಲೇಡ್‌ನಿಂದ ಕಡಿದು ಸೀಳಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಬಾಲಕಿ ತರಗತಿಯಲ್ಲೇ ಕುಸಿದು ಬಿದ್ದಿದ್ದಾಳೆ. ಅವಸರದಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಅಕೆಯನ್ನು ಆಸ್ಪತ್ರೆಗೆ ಕರೆದೊಯ್ದರು.

ಆಸ್ಪತ್ರೆಗೆ ಹೋಗಿ ಆಕೆ ಬದುಕಿದ್ದಾಳಾ? ಸತ್ತಿದ್ದಾಳಾ ಎಂದು ಕೇಳಿದ

ಘಟನೆ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಸ್ವಲ್ಪ ಸಮಯದ ಆತ ಆಸ್ಪತ್ರೆಗೆ ತೆರಳಿ ಅವಳು ಬದುಕಿದ್ದಾಳಾ ಅಥವಾ ಸತ್ತಿದ್ದಾಳೆಯೇ ಎಂದು ವೈದ್ಯರನ್ನು ಕೇಳಲು ಪ್ರಾರಂಭಿಸಿದ್ದಾನೆ. ವಿಷಯ ಬೆಳಕಿಗೆ ಬಂದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ವಿದ್ಯಾರ್ಥಿನಿ ಇನ್ನೂ ಹೆಚ್ಚಿನ ಮಾಹಿತಿ ನೀಡುವ ಸ್ಥಿತಿಯಲ್ಲಿಲ್ಲ, ಆಕೆ ಚೇತರಿಸಿಕೊಂಡು ಆರೋಪಿ ವಿದ್ಯಾರ್ಥಿಯನ್ನು ಹಿಡಿದ ನಂತರವಷ್ಟೇ ಸತ್ಯ ಹೊರಬರಲಿದೆ ಎಂದು ಮಾರ್ವಾರ್ ಜಂಕ್ಷನ್ ಪೊಲೀಸ್ ಠಾಣೆ ಪ್ರಭಾರಿ ಮೋಹನ್ ಸಿಂಗ್ ಹೇಳಿದ್ದಾರೆ. ಪ್ರಸ್ತುತ ತನಿಖೆ ನಡೆಸಲಾಗುತ್ತಿದೆ.

ಐ ಲವ್‌ ಯು ಮೈ ವೈಫ್ (I Love You My Wife) ಎಂದು ಬರೆದ 

ಈ ಬಗ್ಗೆ ಮಾಹಿತಿ ನೀಡಿದ ವಿದ್ಯಾರ್ಥಿನಿ ಹಾಗೂ ಆಕೆಯ ಮನೆಯವರು ಆರೋಪಿ ಕಳೆದ ಹಲವು ದಿನಗಳಿಂದ ಕಿರುಕುಳ ನೀಡುತ್ತಿದ್ದ ಎಂದು ತಿಳಿಸಿದ್ದಾರೆ. ಬಲವಂತವಾಗಿ ಹುಡುಗಿಯೊಂದಿಗೆ ಸ್ನೇಹ ಬಯಸಿದ್ದ. ಆಕೆ ನಿರಾಕರಿಸಿದ್ದಲ್ಲದೆ, ಬಾಲಕಿ ತನ್ನ ಸಹೋದರನಿಗೆ ಕರೆ ಮಾಡಿ ವಿವರಿಸಿದ್ದಳು. ಈ ನಡುವೆ ಬಾಲಕ ಒಮ್ಮೆ ತರಗತಿಯ ಬೋರ್ಡ್ ಮೇಲೆ 'ಐ ಲವ್ ಯೂ ಮೈ ವೈಫ್' ಎಂದು ಬರೆಯಲಾಗಿತ್ತು. ಅಲ್ಲದೇ ನನ್ನೊಂದಿಗೆ ಸ್ನೇಹ ಮಾಡು ಇಲ್ಲದಿದ್ದರೆ ನಿನ್ನನ್ನು ಸಾಯಿಸುತ್ತೇನೆ ಎಂದೂ ಹೇಳಿದ್ದ ಎನ್ನಲಾಗಿದೆ.

Follow Us:
Download App:
  • android
  • ios