ಕೌಟುಂಬಿಕ ಕಲಹ: ಆತ್ಮಹತ್ಯೆಗೆ ಯತ್ನಿಸಿದ ತಾಯಿ-ಮಕ್ಕಳ ರಕ್ಷಣೆ ಮಾಡಿದ 112 ಸಿಬ್ಬಂದಿ
ಕೌಟುಂಬಿಕ ಕಲಹಕ್ಕೆ ಬೇಸತ್ತು ಮಹಿಳೆಯೋರ್ವಳು ತನ್ನಿಬ್ಬರು ಮಕ್ಕಳೊಂದಿಗೆ ಹೊಳೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸಾಗರ ತಾಲೂಕಿನ ಕುಗ್ವೆ ಗ್ರಾಮದ ಹೊಳೆಯಲ್ಲಿ ನಡೆದಿದ್ದು, 112 ಪೊಲೀಸ್ ಸಿಬ್ಬಂದಿ ಸಮಯಪ್ರಜ್ಞೆಯಿಂದ ಸ್ಥಳಕ್ಕಾಗಮಿಸಿ ಮೂವರ ಜೀವ ರಕ್ಷಣೆ ಮಾಡಿದ್ದಾರೆ.
ಶಿವಮೊಗ್ಗ (ಜು.23): ಕೌಟುಂಬಿಕ ಕಲಹಕ್ಕೆ ಬೇಸತ್ತು ಮಹಿಳೆಯೋರ್ವಳು ತನ್ನಿಬ್ಬರು ಮಕ್ಕಳೊಂದಿಗೆ ಹೊಳೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸಾಗರ ತಾಲೂಕಿನ ಕುಗ್ವೆ ಗ್ರಾಮದ ಹೊಳೆಯಲ್ಲಿ ನಡೆದಿದ್ದು, 112 ಪೊಲೀಸ್ ಸಿಬ್ಬಂದಿ ಸಮಯಪ್ರಜ್ಞೆಯಿಂದ ಸ್ಥಳಕ್ಕಾಗಮಿಸಿ ಮೂವರ ಜೀವ ರಕ್ಷಣೆ ಮಾಡಿದ್ದಾರೆ.
ಅಣಲೇಕೊಪ್ಪದ 26 ವರ್ಷದ ಮಹಿಳೆ ಕೌಟುಂಬಿಕ ಕಾರಣದಿಂದ ತನ್ನ 13 ವರ್ಷದ ಮಗಳು ಹಾಗೂ 4 ವರ್ಷದ ಮಗನೊಂದಿಗೆ ಕುಗ್ವೆ ಸಮೀಪದ ಹೊಳೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಮಗಳು, ನಾಲ್ಕು ವರ್ಷದ ಮಗನನ್ನು ಸ್ಕೂಟಿಯಲ್ಲಿ ಕರೆದುಕೊಂಡು ಬಂದಿರುವ ಮಹಿಳೆ. ಹೊಳೆ ದಂಡೆ ಸ್ಕೂಟಿ ನಿಲ್ಲಿಸಿ ಮೊಬೈಲ್, ಚಪ್ಪಲಿ ಸ್ಕೂಟಿ ಬಳಿ ಬಿಟ್ಟು ಹೊಳೆ ಇಳಿಯಲು ಯತ್ನಿಸಿದ್ದಾಳೆ .ಈ ವೇಳೆ ಮಹಿಳೆ ಮಕ್ಕಳೊಂದಿಗೆ ಹೊಳೆಗೆ ಇಳಿಯುತ್ತಿರುವುದನ್ನ ಗಮನಿಸಿದ ವಾಹನ ಸವಾರ ಮಹಿಳೆಗೆ ಬುದ್ಧಿವಾದ ಹೇಳಿದ್ದಾನೆ. ಆದರೆ ಮಹಿಳೆ ತನ್ನ ನಿರ್ಧಾರದಿಂದ ಹಿಂದೆ ಸರಿದಿಲ್ಲ. ಹೀಗಾಗಿ ವಾಹನ ಸವಾರ ಅನಿವಾರ್ಯವಾಗಿ 112 ಸಹಾಯವಾಣಿಗೆ ಕರೆ ಮಾಡಿ ಪೊಲೀಸರಿಗೆ ವಿಷಯ ತಿಳಿಸಿದ್ದಾನೆ.
ಕಾವೇರಿ ನದಿಯಲ್ಲಿ ನೀರಿನ ಸೆಳೆತಕ್ಕೆ ಕೊಚ್ಚಿ ಹೋದ ವ್ಯಕ್ತಿ!
ತಕ್ಷಣ ದೂರು ದಾಖಲಿಸಿಕೊಂಡ 112 ಪೊಲೀಸ್ ಸಹಾಯವಾಣಿ ವಾಹನದ ಹೆಡ್‌ಕಾನ್ಸ್‌ಟೇಬಲ್ ಶಿವರುದ್ರಯ್ಯ ಹಾಗೂ ಚಾಲಕ ಶಿವಾನಂದ್ ಸ್ಥಳಕ್ಕಾಗಮಿಸಿದ್ದಾರೆ. ಅಷ್ಟರಲ್ಲಿ ಮಕ್ಕಳೊಂದಿಗೆ ನೀರಿಗಿಳಿದಿದ್ದ ಮಹಿಳೆ. ತಕ್ಷಣ ಮಹಿಳೆ, ಮಕ್ಕಳನ್ನು ನೀರಿನಿಂದ ಹೊರಗೆ ಕರೆತಂದಿದ್ದಾರೆ. ಒಟ್ಟಿನಲ್ಲಿ ವಾಹನ ಸವಾರ ಮತ್ತು ಪೊಲೀಸರ ಸಮಯ ಪ್ರಜ್ಞೆಯಿಂದ ತಾಯಿ ಮಕ್ಕಳು ಬದುಕುಳಿಯುವಂತಾಗಿದೆ.