ಪೆರೋಲ್ ಮೇಲೆ ಹೋದವರು ನಾಪತ್ತೆ: ಕಾರಗೃಹ ಇಲಾಖೆಗೆ ತಲೆನೋವಾಗಿರುವ ಎಸ್ಕೇಪ್ ಕಹಾನಿ
* ಪರಪ್ಪನ ಅಗ್ರಹಾರ ಕಾರಗೃಹದಲ್ಲಿದ್ದ 11 ಕೈದಿಗಳು ಎಸ್ಕೇಪ್
* ಪೆರೋಲ್ ಮೇಲೆ ಹೋದವರು ಪರಾರಿ
* ಪರಪ್ಪನ ಅಗ್ರಹಾರದಲ್ಲಿ ಎಸ್ಕೇಪ್ ಆದವರಿಗೆ ಹುಡುಕಾಟ
* ಸಜಾ ಬಂಧಿಗಳ ಎಸ್ಕೇಪ್ ನಿಂದ ಕಂಗಾಲಾಗಿರುವ ಕಾರಾಗೃಹ ಸಿಬ್ಬಂದಿ
ಬೆಂಗಳೂರು, (ಜು.17): ಬೆಂಗಳೂರಿನ ಕೇಂದ್ರ ಪರಪ್ಪನ ಅಗ್ರಹಾರ ಕಾರಗೃಹದಲ್ಲಿದ್ದ ಸುಮಾರು 11 ಮಂದಿ ಕೈದಿಗಳು ಪೆರೋಲ್ ನೆಪದಲ್ಲಿ ಹೊರಹೋದವರು ಇದುವರೆಗೂ ಪತ್ತೆಯಾಗಿಲ್ಲ ಎಂಬ ಮಾಹಿತಿ ಬಹಿರಂಗವಾಗಿದೆ. ಈ ಸಂಬಂಧ ಪ್ರಕರಣ ಪ್ರಕರಣ ದಾಖಲಾಗಿದ್ದು, ಅವರಿಗಾಗಿ ಹುಡುಕಾಟ ನಡೆಯುತ್ತಿದೆ.
ಕೊಲೆ, ಸುಲಿಗೆ, ಕೊಲೆ ಯತ್ನ, ದರೋಡೆ ಸೇರಿ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಶಿಕ್ಷೆ ಅನುಭವಿಸುತ್ತಿದ್ದ 11 ಮಂದಿ ಕೈದಿಗಳು ಪೆರೋಲ್ ಮೇಲೆ ಹೊರ ಹೋಗಿ ಜೈಲಿಗೆ ವಾಪಸ್ ಬಾರದೆ, ಪೊಲೀಸರಿಗೂ ಸಿಗದೆ ತಲೆಮರೆಸಿಕೊಂಡಿದ್ದಾರೆ.
ಪರಾರಿಯಾಗಿರುವ ಕೈದಿಗಳ ಶಿಕ್ಷೆ ಅವಧಿ ಮುಗಿದರೂ ಪೆರೋಲ್ ನಿಯಮ ಉಲ್ಲಂಘನೆ ಆರೋಪದ ಮೇಲೆ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಹೀಗಾಗಿ ಒಂದು ವೇಳೆ ಅವರು ಸಿಕ್ಕಿಬಿದ್ದರೆ ಕಾರಾಗೃಹ ಇಲಾಖೆಯಿಂದ ಸಿಗಬಹುದಾದ ಎಲ್ಲ ಸೌಲಭ್ಯಗಳು ಸಿಗುವುದಿಲ್ಲ.
ಒಟ್ಟಿನಲ್ಲಿ ಎಸ್ಕೇಪ್ ಆದ 11 ಜನರ ಬಗ್ಗೆ ಸ್ಥಳೀಯ ಪೊಲೀಸರಿಗೂ ಮಾಹಿತಿ ಇಲ್ಲ. ಹೀಗಾಗಿ ಈ ಎಸ್ಕೇಪ್ ಕಹಾನಿ ಕಾರಗೃಹ ಇಲಾಖೆಗೆ ತಲೆನೋವಾಗಿದೆ.