Asianet Suvarna News Asianet Suvarna News

ಶಿವಮೊಗ್ಗ: ಲೋಕಾಯುಕ್ತ ಎಂದ್ಹೇಳಿ ಮಹಿಳಾ ಅಧಿಕಾರಿಗೆ 1 ಲಕ್ಷ ರು. ವಂಚನೆ..!

ಯಾವ ದೂರು ಎಂದು ಕೇಳಿದರೂ ವಿವರಣೆ ನೀಡಿರಲಿಲ್ಲ. ಹೆದರಿದ ಮಹಿಳಾ ಅಧಿಕಾರಿ ಲೋಕಾಯುಕ್ತ ಎಂದು ಕರೆ ಮಾಡಿದ್ದ ವ್ಯಕ್ತಿ ಸೂಚಿಸಿದ್ದ ಅಕೌಂಟ್‌ ನಂಬರ್‌ಗಳಿಗೆ ₹1 ಲಕ್ಷ ಹಣ ವರ್ಗಾಯಿಸಿದ್ದರು. ಬಳಿಕ ಪರಿಶೀಲಿಸಿದಾಗ ವಂಚನೆಗೊಳಗಾಗಿರುವುದು ಗೊತ್ತಾಗಿದೆ. ಈ ಸಂಬಂಧ ಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

1 Lakh Fraud to Lady Officer in Shivamogga in the Name of Lokayukta grg
Author
First Published Feb 17, 2024, 1:31 PM IST

ಶಿವಮೊಗ್ಗ(ಫೆ.17):  ಮಹಿಳಾ ಆಫೀಸರ್‌ಗೆ ಲೋಕಾಯುಕ್ತ ಅಧಿಕಾರಿ ಎಂದು ಹೇಳಿಕೊಂಡು ಕರೆ ಮಾಡಿ, ₹1 ಲಕ್ಷ ಹಣ ವಂಚನೆ ಮಾಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಆಹಾರ ಇಲಾಖೆಯಲ್ಲಿ ಶಿರಸ್ತೇದಾರ್‌ ಆಗಿರುವ ಮಹಿಳಾ ಅಧಿಕಾರಿಯೊಬ್ಬರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆಗೆ ಆಗಮಿಸಿದ್ದರು. ಈ ಸಂದರ್ಭ ವಾಟ್ಸಪ್‌ನಲ್ಲಿ ಕರೆ ಮಾಡಿದ್ದ ವ್ಯಕ್ತಿಯೊಬ್ಬ, ತಾನು ಲೋಕಾಯುಕ್ತ ಕಚೇರಿಯಿಂದ ಕರೆ ಮಾಡುತ್ತಿರುವುದಾಗಿ ಪರಿಚಯಿಸಿಕೊಂಡಿದ್ದ. ‘ತಮ್ಮ ವಿರುದ್ಧ ದೂರು ಬಂದಿದೆ. ಇನ್ನು ಕೆಲವೇ ನಿಮಿಷದಲ್ಲಿ ಎಫ್‌ಐಆರ್‌ ದಾಖಲು ಮಾಡಲಾಗುತ್ತದೆ. ಇದನ್ನು ತಪ್ಪಿಸಬೇಕಿದ್ದರೆ ಒಂದೂವರೆ ಲಕ್ಷ ಹಣ ನೀಡಬೇಕುʼ ಎಂದು ಬೆದರಿಸಿದ್ದ.

ಯಾವ ದೂರು ಎಂದು ಕೇಳಿದರೂ ವಿವರಣೆ ನೀಡಿರಲಿಲ್ಲ. ಹೆದರಿದ ಮಹಿಳಾ ಅಧಿಕಾರಿ ಲೋಕಾಯುಕ್ತ ಎಂದು ಕರೆ ಮಾಡಿದ್ದ ವ್ಯಕ್ತಿ ಸೂಚಿಸಿದ್ದ ಅಕೌಂಟ್‌ ನಂಬರ್‌ಗಳಿಗೆ ₹1 ಲಕ್ಷ ಹಣ ವರ್ಗಾಯಿಸಿದ್ದರು. ಬಳಿಕ ಪರಿಶೀಲಿಸಿದಾಗ ವಂಚನೆಗೊಳಗಾಗಿರುವುದು ಗೊತ್ತಾಗಿದೆ. ಈ ಸಂಬಂಧ ಜಯನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರು: ಪಾರ್ಟ್‌ಟೈಂ ಕೆಲಸದ ಸೋಗಲ್ಲಿ 1.07 ಲಕ್ಷ ವಂಚನೆ, ಕಂಗಾಲಾದ ಯುವತಿ

ಒಂದು ಒಳ್ಳೆಯ ಉದ್ದೇಶ ಇಟ್ಟುಕೊಂಡು ಲೋಕಾಯುಕ್ತವನ್ನ ಅಸ್ಥಿತ್ವಕ್ಕೆ ತರಲಾಗಿದೆ. ಆದರೆ ಅದರ ಹೆಸರಲ್ಲೇ ವಂಚನೆ ನಡೆಸಲಾಗಿದೆ. ಒಂದು ಅಂತು ಸತ್ಯ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹೆದರುವುದು ಮಾತ್ರ ಲೋಕಾಯುಕ್ತಕ್ಕೆ ಎಂಬುದು ಮಾತ್ರ ಈ ಎಫ್ಐಆರ್ ನಿಂದ ಗೊತ್ತಾಗಿದೆ. ಲೋಕಾಯುಕ್ತರು ಎಂದು ಹೇಳಿ ಸಾಗರದ ಆಹಾರ ಶಿರಸ್ತೇದಾರರಿಂದ‌ 1 ಲಕ್ಷ ರೂ ವಂಚಿಸಿರುವ‌ ಘಟನೆ ಶಿವಮೊಗ್ಗದ ಜಯನಗರ ಪೊಲೀಸ್‌ಠಾಣೆಯಲ್ಲಿ ದೂರು ದಾಖಲಾಗಿದೆ.

ಫೆ.08 ರಂದು ಬೆಳಿಗ್ಗೆ 9-30ಗಂಟೆಗೆ ಸರ್ಕಾರದ ಗ್ಯಾರೆಂಟಿ ಯೋಜನೆಯ ಫಲಾನುಭವಿಗಳ ಸಮಾವೇಶದ ಆಹ್ವಾನ ಪತ್ರಿಕೆಯನ್ನು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ನೀಡಲು ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಛೇರಿಗೆ ಬಂದಿದ್ದ ಆಹಾರ ಶಿರಸ್ತೇದಾರರು, ಜಿಲ್ಲಾಧಿಕಾರಿಗಳ ಕಛೇರಿಯ ಮುಂದಿನ ಹಾಲ್ ನ ಛೇರ್ ನ ಮೇಲೆ ಕುಳಿತಿರುವಾಗ ಮೊಬೈಲ್ ಗೆ ವಾಟ್ಸಪ್ ಕರೆ ಬಂದಿತ್ತು.

ಅನಾಮಧೇಯ ವಾಟ್ಸ ಆಫ್ ಕಾಲ್ ರಿಸೀವ್ ಮಾಡಿದ ಶಿರಸ್ತೇದಾರಿಗೆ ಕರೆ ಮಾಡಿದ ವ್ಯಕ್ತಿ ನಾನು ಲೋಕಾಯುಕ್ತ ಕಛೇರಿಯಿಂದ ಮಾತನಾಡುತ್ತಿರುವುದು ನಿಮ್ಮ ಮೇಲೆ ಒಂದು ಕಂಪ್ಲೆಂಟ್ ಬಂದಿದ್ದು, ತಕ್ಷಣ ನಿಮ್ಮ ಮೇಲೆ ಎಫ್ ಐ ಆರ್ ದಾಖಲಾಗುತ್ತದೆ, ಈ ಬಗ್ಗೆ ನಮ್ಮ ಸಾಹೇಬರು ಮಾತನಾಡುತ್ತಾರೆ. ಎಂದು ಹೇಳಿ ಬೇರೆ ಯಾರೋ ವ್ಯಕ್ತಿಗೆ ಮೊಬೈಲ್ ಕೊಟ್ಟಿರುತ್ತಾನೆ.

ಮೊಬೈಲ್ ನಲ್ಲಿ ಮಾತನಾಡಿದ ಆ ವ್ಯಕ್ತಿಯೂ ಸಹ ಲೋಕಾಯುಕ್ತ ಕಚೇರಿ, ನಾನು ಅಧಿಕಾರಿ ಎಂದು ಮಾತನಾಡಿ, ಮಧ್ಯಾಹ್ನ 12-40 ಗಂಟೆಗೆ ಅಧಿಕಾರಿಗಳ ಸಭೆ ಇದೆ ಆ ಸಭೆಗೆ ನಿಮ್ಮ ಫೈಲ್ ತೆಗೆದುಕೊಂಡು ಹೋಗುತ್ತೇವೆ. ನಿಮ್ಮ ಮೇಲೆ ಎಫ್ ಐ ಆರ್ ದಾಖಲಾಗುತ್ತೆದೆ ಎಂದು ಹೇಳಿ ಹೆದರಿಸಿದ್ದಾನೆ.‌

ಈ ವಿಚಾರವಾಗಿ ಒಂದುವರೆ ನಮಗೆ ಕೊಟ್ಟಲ್ಲಿ ನಿಮ್ಮ ದೂರಿನ ಫೈಲ್ ಗೆ ಬಿ ರಿಪೋರ್ಟ ಮಾಡುತ್ತೇವೆ. ಅಂತ ಹೇಳಿದ್ದಾರೆ. ಮಹಿಳಾ‌ ಶಿರಸ್ತೇದಾರರು ಯಾವ ಕಂಪ್ಲೇಂಟ್ ಬಂದಿದೆ ಮತ್ತು ಒಂದುವರೆ ಅಂದರೆ ಏನು ಸರ್ ಅಂತ ಕೇಳಿದ್ದಕ್ಕೆ, ಒಂದೂವರೆ ಲಕ್ಷ ಅಮೌಂಟ್ ಕೊಟ್ಟರೆ ಬಿ ರಿಪೋರ್ಟ್ ಅಂತ ಹೇಳಲಾಗಿದೆ.

ಯಾವಾಗ ಯಾವ ಕಂಪ್ಲೆಂಟ್ ವಿಚಾರ ಬಂದಿದೆ ಎಂದು ಕೇಳಿದಾಗ ಅದನ್ನ ಹೇಳಲಿಕ್ಕೆ ಆಗಲ್ಯ, ಟೈಮ್ ಆಗಿದೆ, ಅಂತ ಹೇಳಿದ ನಕಲಿ ಲೋಕಾಯುಕ್ತ ಅಧಿಕಾರಿ ಮಿಕ್ಕ ವಿಷಯ ಏನಿದೆ ಅದನ್ನು ಮೊದಲು ನಿಮ್ಮೊಂದಿಗೆ ಮಾತನಾಡಿದವರಿಗೆ ಫೋನ್ ಕೋಡುವುದಾಗಿ ಹೇಳಿ ಕೊಟ್ಟಿದ್ದಾನೆ. ಮೊದಲು ಮಾತನಾಡಿದ ವ್ಯಕ್ತಿ ನೋಡಿ ಮೇಡಂ ಅದನೆಲ್ಲಾ ಮಾತನಾಡಲು ಸಮಯವಿಲ್ಲ, ಬಿಜಿ ಇರುವುದಾಗಿ ಹೇಳಿದನು. ಇನ್ನು 05 ನಿಮಿಷಕ್ಕೆ ಹಣ ಬಂದರೆ ನಿಮ್ಮ ಫೈಲ್ ಬಿ ರಿಪೋರ್ಟ್ ಮಾಡುವುದಾಗಿ ಹೇಳಿರುತ್ತಾರೆ.‌

ಶಿವಮೊಗ್ಗ ಸುಂದರಿ ಸನ್ನಿಧಿಯ ರೀಲ್ಸ್ ನೋಡಿ, ಹಿಂದೆ ಬೀಳುವ ಮಲೆನಾಡು ಯುವಕರೇ ಎಚ್ಚರ!

ಶಿರಸ್ತೇದಾರರು ನನ್ನ ಬಳಿ ಹಣವಿಲ್ಲ ಎಂದು ಹೇಳಿದ್ದಕ್ಕೆ ಬೇರೆಯವರೊಂದಿಗೆ ಪಡೆದು ಹಣ ಹಾಕುವಂತೆ ಹೇಳಿರುತ್ತಾರೆ. ನಂತರ ಅವನು ಒಂದು ಆಕೌಂಟ್ ನಂಬರ್ ವಾಟ್ಸ ಆಫ್ ನಲ್ಲಿ ಕಳುಹಿಸಿದ್ದಕ್ಕೆ, ನನಗೆ ಇದರಿಂದ ಹಣ ಹಾಕಲು ಬರಲ್ಲ ಅಂತ ಹೇಳಿರುತ್ತಾರೆ. ತಕ್ಷಣ ಆ ಅಕೌಂಟ್ ನಂಬರ್ ಡಿಲೀಟ್ ಮಾಡಲಾಗಿರುತ್ತದೆ. ನಂತರ ಮತ್ತೆ ಮಹಿಳೆ‌ ಅಧಿಕಾರಿಗೆ ವಾಟ್ಸ್ ಆಫ್ ಗೆ ಪೋನ್ ಪೇ ನಂಬರ್ ಕಳುಹಿಸಿ ಧನಂಜಯ್ ಎಂಬ ಹೆಸರು ಮೆಸೇಜ್ ಮಾಡಲಾಗಿದೆ.

ಅನಂತರ ಮಹಿಳಾ ಅಧಿಕಾರಿ ಅನಾಮಧೇಯ ವ್ಯಕ್ತಿಯ ಫೋನ್ ಪೇ ನಂಬರ್ ಗೆ ಒಟ್ಟು ₹1 ಲಕ್ಷವನ್ನು ವರ್ಗಾವಣೆ ಮಾಡಿದ್ದಾರೆ. ಹಣ ಕಳೆದುಕೊಂಡ ನಂತರ ಮಹಿಳೆಯ ಗಮನಕ್ಕೆ ನಕಲಿ ಲೋಕಾಯುಕ್ತರು ಎಂದು ತಿಳಿದು ಬಂದಿದ್ದು, ನಕಲಿ ಲೋಕಾಯುಕ್ತರ ವಿರುದ್ಧ ಸಂತ್ರಸ್ತ ಅಧಿಕಾರಿ ದೂರು ದಾಖಲಿಸಿದ್ದಾರೆ.

Follow Us:
Download App:
  • android
  • ios