ಹುಬ್ಬಳ್ಳಿ: ಆನ್‌ಲೈನ್‌ ಟ್ರೇಡಿಂಗ್‌ ಹೆಸರಲ್ಲಿ 1 ಕೋಟಿ ವಂಚನೆ

ಆರಂಭದಲ್ಲಿ ಟ್ರೇಡಿಂಗ್ ಪ್ಲಾಟ್ಪಾರ್ಮ್‌ನಿಂದ ಹಣ ವಿತ್‌ ಡ್ರಾ ಹೇಗೆ ಮಾಡುವುದು ಅಂತಾ ತಿಳಿಸಿ ಅರುಣ ಅವರ ಬ್ಯಾಂಕ್ ಖಾತೆಗೆ ₹2 ಸಾವಿರ ವರ್ಗಾಯಿಸಿದ್ದಾನೆ. ನಂತರ ಹೆಚ್ಚು ಹಣ ಹೂಡಿಕೆ ಮಾಡುವಂತೆ ಹೇಳಿ ಎಸ್‌ಬಿಐ ಬ್ಯಾಂಕ್ ಖಾತೆಯಿಂದ ₹58,25,046 ಹಾಗೂ ಯೆಸ್ ಬ್ಯಾಂಕ್ ಖಾತೆಯಿಂದ ₹45,06,200 ವರ್ಗಾಯಿಸಿಕೊಂಡಿದ್ದಾರೆ. 

1 Crore Fraud in the name of Online Trading in Hubballi grg

ಹುಬ್ಬಳ್ಳಿ(ಡಿ.24):  ಆನ್‌ಲೈನ್ ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಟ್ರೇಡಿಂಗ್ ಖಾತೆ ತೆರೆದು ಹೆಚ್ಚು ಲಾಭ ಗಳಿಸಬಹುದು ಎಂದು ವ್ಯಕ್ತಿಯೊಬ್ಬರನ್ನು ನಂಬಿಸಿ ಬರೊಬ್ಬರಿ ₹1.03 ಕೋಟಿ ಪಂಗನಾಮ ಹಾಕಿರುವ ಘಟನೆ ನಗರದಲ್ಲಿ ನಡೆದಿದೆ.

ಇಲ್ಲಿಯ ಗೋಕುಲ್ ರಸ್ತೆಯ ಲಕ್ಷ್ಮೀ ನಗರದ ಅರುಣ ಗಲಗಲಿ ಎಂಬುವರೇ ವಂಚನೆಗೊಳಗಾದವರು. 2023ರ ಅಕ್ಟೋಬರ್ 24ರಂದು ಕರೆ ಮಾಡಿದ ಅಪರಿಚಿತ ವ್ಯಕ್ತಿ, ತಾನು ರವಿಸಿಂಗ್ ಟ್ರೇಡನ ಟ್ರಿಂಡಿಂಗ್‌ ಬ್ರೋಕರ್ ಎಂದು ಪರಿಚಯಿಸಿಕೊಂಡಿದ್ದಾನೆ. ಬಳಿಕ ಆನ್‌ಲೈನ್ ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ₹4500, ₹5 ಸಾವಿರ ಸಂದಾಯ ಮಾಡಿದರೆ ಹೆಚ್ಚು ಹಣ ಗಳಿಸಬಹುದು ಎಂದು ಹೇಳಿದ್ದಾನೆ. ನಂತರ ಮಾಹಿತಿ ಬಳಸಿ ಆನ್‌ಲೈನ್ ಅಪ್ಲಿಕೇಶನ್‌ನಲ್ಲಿ ಖಾತೆ ತೆರೆಯಲು ಹೇಳಿದ್ದಾನೆ.

ಮಂಗಳೂರಿನ ಹಂಪನಕಟ್ಟೆ ಬಳಿ ನೈತಿಕ ಪೊಲೀಸ್ ಗಿರಿ ಪ್ರಕರಣ ಮೂವರು ಆರೋಪಿಗಳ ಬಂಧನ!

ಇದಾದ ಬಳಿಕ ವ್ಯಾಟ್ಸ್‌ಆ್ಯಪ್‌ಗೆ ಕರೆ ಮಾಡಿದ ಮತ್ತೊಬ್ಬ ಆನ್‌ಲೈನ್ ಅಪ್ಲಿಕೇಶನ್‌ನಲ್ಲಿ ಹಣ ಜಮಾ ಆದಂತೆ ತೋರಿಸಿದ್ದಾನೆ. ಅಲ್ಲದೇ, ಆರಂಭದಲ್ಲಿ ಟ್ರೇಡಿಂಗ್ ಪ್ಲಾಟ್ಪಾರ್ಮ್‌ನಿಂದ ಹಣ ವಿತ್‌ ಡ್ರಾ ಹೇಗೆ ಮಾಡುವುದು ಅಂತಾ ತಿಳಿಸಿ ಅರುಣ ಅವರ ಬ್ಯಾಂಕ್ ಖಾತೆಗೆ ₹2 ಸಾವಿರ ವರ್ಗಾಯಿಸಿದ್ದಾನೆ. ನಂತರ ಹೆಚ್ಚು ಹಣ ಹೂಡಿಕೆ ಮಾಡುವಂತೆ ಹೇಳಿ ಎಸ್‌ಬಿಐ ಬ್ಯಾಂಕ್ ಖಾತೆಯಿಂದ ₹58,25,046 ಹಾಗೂ ಯೆಸ್ ಬ್ಯಾಂಕ್ ಖಾತೆಯಿಂದ ₹45,06,200 ವರ್ಗಾಯಿಸಿಕೊಂಡಿದ್ದಾರೆ ಎಂದು ದೂರಲಾಗಿದೆ. ಈ ಬಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Latest Videos
Follow Us:
Download App:
  • android
  • ios