Fraud case: ಸ್ಟಾಕ್ ಮಾರ್ಕೆಟ್ ಟ್ರೇಡರ್ ಎಂದು ನಂಬಿಸಿ ₹1.24 ಕೋಟಿ ರು. ವಂಚನೆ: ದೂರು ದಾಖಲು
ಸ್ಟಾಕ್ ಮಾರ್ಕೆಟ್ ಟ್ರೇಡರ್ ಎಂದು ನಂಬಿಸಿ, ಕ್ರಿಪ್ಟೋ ಆ್ಯಂಡ್ ಕರೆನ್ಸಿ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡಿ ಲಾಭ ಗಳಿಸಬಹುದು ಎಂದು ವ್ಯಕ್ತಿಯೊಬ್ಬರಿಗೆ ಸುಮಾರು 1.24 ಕೋಟಿ ರು. ಮೋಸ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಮಂಗಳೂರು (ಮಾ.16) : ಸ್ಟಾಕ್ ಮಾರ್ಕೆಟ್ ಟ್ರೇಡರ್ ಎಂದು ನಂಬಿಸಿ, ಕ್ರಿಪ್ಟೋ ಆ್ಯಂಡ್ ಕರೆನ್ಸಿ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡಿ ಲಾಭ ಗಳಿಸಬಹುದು ಎಂದು ವ್ಯಕ್ತಿಯೊಬ್ಬರಿಗೆ ಸುಮಾರು 1.24 ಕೋಟಿ ರು. ಮೋಸ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಮೋಸಕ್ಕೆ ಒಳಗಾದ ವ್ಯಕ್ತಿ ಕ್ರಿಪ್ಟೋ ಕರೆನ್ಸಿ(Crypto currency) ಬಗ್ಗೆ ಆಸಕ್ತಿ ಹೊಂದಿದ್ದರು. ಅವರಿಗೆ ತಮ್ಮ ಸಹೋದ್ಯೋಗಿ ಮೂಲಕ 2021ರ ಮಾಚ್‌ರ್ ತಿಂಗಳಲ್ಲಿ ಕೇರಳದ ಜಿಜೊ ಜಾನ್ ಪುತ್ತೆನವೆಟಿಲ್(Jijo John Pehenawetil) ಎಂಬವರ ಪರಿಚಯವಾಗಿದ್ದು, ಆತ ತನ್ನನ್ನು ಸ್ಟಾಕ್ ಮಾರ್ಕೆಟ್ ಟ್ರೇಡರ್(Stock market trader) ಎಂದು ನಂಬಿಸಿದ್ದಾನೆ. ಆಗ ಕೋವಿಡ್ ಸಮಯವಾದ್ದರಿಂದ ಮುಖತಃ ಭೇಟಿಯಾಗಲು ಸಾಧ್ಯವಾಗುವುದಿಲ್ಲ ಎಂದು ಆತ ತನ್ನ ವಾಟ್ಸಾಪ್ ನಂಬರ್‌ನಿಂದ ಸಂದೇಶ ಕಳುಹಿಸಿದ್ದ.
ಕ್ರಿಪ್ಟೋ ವ್ಯವಹಾರಗಳ ಮೇಲೆ ಇನ್ನು ಕೇಂದ್ರ ಸರ್ಕಾರ ನಿಗಾ: ಅಕ್ರಮ ಹಣ ವರ್ಗಾವಣೆ ಕಾಯ್ದೆ ವ್ಯಾಪ್ತಿಗೆ ಕ್ರಿಪ್ಟೋ..!
, ವಾಟ್ಸಾಪ್ ಕಾಲ್ ಮೂಲಕ ಕ್ರಿಪ್ಟೋ ಆ್ಯಂಡ್ ಕರೆನ್ಸಿಯ ಬಗ್ಗೆ ಮಾಹಿತಿ ನೀಡಿ ಹಣ ಹೂಡಿಕೆ ಮಾಡಲು ತಿಳಿಸಿದ್ದಾನೆ. ಹೂಡಿಕೆ ಮಾಡಿದ ಹಣದ ಶೇ.10ರಷ್ಟುಹಣವನ್ನು ಪ್ರತಿ ತಿಂಗಳು ಪಾವತಿಸುವುದಾಗಿ ಆತ ಭರವಸೆ ನೀಡಿದ್ದಾನೆ. ಆತನ ಮಾತನ್ನು ನಂಬಿ ಮೊದಲಿಗೆ 2021ರ ಮಾ.23ರಿಂದ ಜೂ.1ರ ವರೆಗೆ ಹಂತ ಹಂತವಾಗಿ 41 ಲಕ್ಷ ರು. ಐಎಂಪಿಎಸ್ ಮತ್ತು ನೆಟ್ ಮೂಲಕ ಪಾವತಿಸಿದ್ದಾರೆ.
ಅಕ್ಟೋಬರ್‌ನಲ್ಲಿ ವಿವಿಧ ಬ್ಯಾಂಕ್‌ಗಳಿಂದ ಸುಮಾರು 67 ಲಕ್ಷ ರು. ಸಾಲ ಪಡೆದು, ಅ.22ರಿಂದ 26ರ ನಡುವೆ 60 ಲಕ್ಷ ರು., ಪಾವತಿಸಿದ್ದಾರೆ. ಈ ರೀತಿಯಾಗಿ ಆರೋಪಿ, 1.24 ಕೋಟಿ ರು. ಹೂಡಿಕೆ ಮಾಡಿಸಿಕೊಂಡು, ಸೆಪ್ಟಂಬರ್ ತಿಂಗಳಲ್ಲಿ 9 ಲಕ್ಷ ರು. ಮಾತ್ರ ಮರು ಪಾವತಿಸಿದ್ದಾನೆ. ಹೂಡಿಕೆ ಮಾಡಿದ ಹಣ ಸಿಗಬಹುದೆಂದು ಕಾದಿದ್ದು, ಆರೋಪಿ ಯಾವುದೇ ದೂರವಾಣಿ ಕರೆ ಸ್ವೀಕರಿಸಿದ ಕಾರಣ ತಾನು ಮೋಸ ಹೋಗಿರುವುದು ಖಚಿವಾಗಿದೆ. ಬಳಿಕ ಸೆನ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಇನ್ಮುಂದೆ ಜಾಗತಿಕ ಷೇರು ಖರೀದಿ, ವಿದೇಶದಲ್ಲಿ ವಿಹಾರ, ಕ್ರಿಪ್ಟೋ ಕರೆನ್ಸಿ ಹೂಡಿಕೆ ಹೆಚ್ಚು ದುಬಾರಿ..!
ಜುಗಾರಿ ಆಡಿಸುತ್ತಿದ್ದ ಮೂವರ ಬಂಧನ
ಮಂಗಳೂರು: ನಗರದ ಅಂಬೇಡ್ಕರ್ ವೃತ್ತದ ಬಳಿ ಸ್ಮಾರ್ಚ್ ಟವರ್‌ನ ನೆಲ ಮಹಡಿಯಲ್ಲಿರುವ ಮೋನು ಎಂಟರ್‌ಪ್ರೈಸಸ್ ಎದುರು ಜುಗಾರಿ ಆಡಿಸುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಕೋಟೆಕಾರು ಮಾಡೂರು ಗ್ರಾಮದ ಪ್ರವೀಣ್ (33), ಕುಡುಪು ನಡುಮನೆ ರಸ್ತೆ ನಿವಾಸಿ ಮನೋಜ್ ಜಾಜ್‌ರ್ ನೊರೊನ್ಹಾ (43), ಗೋರಿಗುಡ್ಡೆ ನೆಹರೂ ರಸ್ತೆ ನಿವಾಸಿ ರಾಕೇಶ್ (47) ಬಂಧಿತ ಆರೋಪಿಗಳು.
3 ಸಾವಿರ ರು. ನಗದು, 2 ಮೊಬೈಲ…, 2 ಕಂಪ್ಯೂಟರ್, ಆಟಕ್ಕೆ ಬಳಸಿದ್ದ ಪರಿಕರಗಳು ಸೇರಿದಂತೆ ಒಟ್ಟು 75 ಸಾವಿರ ರು. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.