ರಾವಲ್ಪಿಂಡಿ(ನ.04): ಪಾಕಿಸ್ತಾನ ವಿರುದ್ಧ ಇಲ್ಲಿ ನಡೆದ 3ನೇ ಹಾಗೂ ಸರಣಿಯ ಕೊನೆಯ ಏಕದಿನ ಪಂದ್ಯದಲ್ಲಿ ಜಿಂಬಾಬ್ವೆ ಸೂಪರ್‌ ಓವರ್‌ ಗೆಲುವು ಪಡೆದಿದೆ. 

ಸೂಪರ್‌ ಓವರಲ್ಲಿ ಮೊದಲು ಬ್ಯಾಟ್‌ ಮಾಡಿದ ಪಾಕಿಸ್ತಾನ ತಂಡ ಜಿಂಬಾಬ್ವೆ ಬೌಲರ್ ಮುಜರಾಬಾನಿ 2 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡಿತು. ಈ ಗುರಿ ಬೆನ್ನತ್ತಿದ ಜಿಂಬಾಬ್ವೆ ವಿಕೆಟ್‌ ನಷ್ಟವಿಲ್ಲದೇ 5 ರನ್‌ಗಳಿಸಿ ಜಯದ ನಗೆ ಬೀರಿತು. ಆದರೂ ಪಾಕಿಸ್ತಾನ 2-1ರಲ್ಲಿ ಸರಣಿ ಜಯಿಸಿದೆ. 

ಅಚ್ಚರಿಯಾದ್ರೂ ಸತ್ಯ; ಬುಮ್ರಾಗಿಂತ ಡೇಂಜರ್ ಬೌಲರ್ ಸಂದೀಪ್ ಶರ್ಮಾ..!

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಜಿಂಬಾಬ್ವೆ ಶಾನ್‌ ವಿಲಿಯಮ್ಸ್‌ (118*) ಶತಕದಿಂದ 6 ವಿಕೆಟ್‌ಗೆ 278 ರನ್‌ಗಳಿಸಿತು. ಪಾಕ್‌ ಬಾಬರ್‌ ಅಜಾಂ (125) ಶತಕದ ಹೊರತಾಗಿಯೂ 9 ವಿಕೆಟ್‌ಗೆ 278 ರನ್‌ಗಳಿಸಿದ್ದರಿಂದ ಪಂದ್ಯ ಟೈ ಆಯಿತು.

ಸ್ಕೋರ್‌:

ಜಿಂಬಾಬ್ವೆ 278/6

ಪಾಕಿಸ್ತಾನ 278/9