ಜೇಮ್ಸ್ ಆ್ಯಂಡರ್‌ಸನ್‌ಗಿಂದ ಜಹೀರ್ ಖಾನ್‌ ಅತ್ಯುತ್ತಮ ಬೌಲರ್ ಎಂದ ಟೀಂ ಇಂಡಿಯಾ ತಾರಾ ವೇಗಿ..!

* ಜಹೀರ್ ಖಾನ್ & ಜೇಮ್ಸ್ ಆ್ಯಂಡರ್‌ಸನ್‌ ನಡುವೆ ಹೋಲಿಕೆ ಮಾಡಿದ ಟೀಂ ಇಂಡಿಯಾ ವೇಗಿ
* ಜೇಮ್ಸ್ ಆ್ಯಂಡರ್‌ಸನ್‌ ಭಾರತದಲ್ಲಿ ಹೆಚ್ಚು ಪಂದ್ಯವನ್ನಾಡಿದ್ದರೇ ಯಶಸ್ವಿಯಾಗುತ್ತಿರಲಿಲ್ಲ
* ಜೇಮ್ಸ್ ಆ್ಯಂಡರ್‌ಸನ್‌ ಸದ್ಯ ಟೆಸ್ಟ್‌ನಲ್ಲಿ ಮೂರನೇ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್ ಎನಿಸಿದ್ದಾರೆ

Zaheer Khan Better Than Jimmy Anderson Says Ishant Sharma kvn

ನವದೆಹಲಿ(ಜೂ.26): ಟೆಸ್ಟ್‌ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಬೌಲರ್‌ಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಇಂಗ್ಲೆಂಡ್‌ ಅನುಭವಿ ವೇಗಿ ಜೇಮ್ಸ್‌ ಆ್ಯಂಡರ್‌ಸನ್ ಅವರಿಗಿಂತ ಎಡಗೈ ವೇಗಿ ಜಹೀರ್ ಖಾನ್ ಅತ್ಯುತ್ತಮ ಬೌಲರ್ ಎಂದು ಟೀಂ ಇಂಡಿಯಾ ವೇಗಿ ಇಶಾಂತ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ. 

ಜೇಮ್ಸ್  ಆ್ಯಂಡರ್‌ಸನ್(Jimmy Anderson), ಇಂಗ್ಲೆಂಡ್ ಪರ 194 ಏಕದಿನ ಪಂದ್ಯಗಳನ್ನಾಡಿ 269 ವಿಕೆಟ್ ಕಬಳಿಸಿದ್ದಾರೆ. ಇನ್ನು ಟೆಸ್ಟ್‌ ಕ್ರಿಕೆಟ್‌ನಲ್ಲಿ 180 ಪಂದ್ಯಗಳನ್ನಾಡಿರುವ ಆ್ಯಂಡರ್‌ಸನ್ 686 ಬಲಿ ಪಡೆದು ಮುನ್ನುಗ್ಗುತ್ತಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಆ್ಯಂಡರ್‌ಸನ್ ಬರೋಬ್ಬರಿ 32 ಬಾರಿ 5+ ವಿಕೆಟ್ ಕಬಳಿಸಿದ ಸಾಧನೆ ಮಾಡಿದ್ದಾರೆ. ಒಂದು ವೇಳೆ ಜೇಮ್ಸ್‌ ಆ್ಯಂಡರ್‌ಸನ್ ಭಾರತದಂತಹ ವಾತಾವರಣದಲ್ಲಿ ಹೆಚ್ಚಿನ ಪಂದ್ಯಗಳನ್ನಾಡಿದ್ದರೇ ಅವರು ಇಷ್ಟೊಂದು ಯಶಸ್ವಿಯಾಗುತ್ತಿರಲಿಲ್ಲ ಎಂದು ಇಶಾಂತ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.

ರಣ್‌ವೀರ್ ಅಲ್ಲ್‌ಬದಿಯಾ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಇಶಾಂತ್ ಶರ್ಮಾ(Ishant Sharma), "ಜೇಮ್ಸ್‌ ಆ್ಯಂಡರ್‌ಸನ್ ಅವರ ಬೌಲಿಂಗ್ ಶೈಲಿ ಕೊಂಚ ವಿಭಿನ್ನವಾಗಿದೆ. ಅವರು ವಿವಿಧ ವಾತಾವರಣದಲ್ಲಿ ಆಡಿದ್ದಾರೆ.  ಅವರು ಇಂಗ್ಲೆಂಡ್‌ನಲ್ಲಿ ಆಡಿದ್ದಾರೆ.ಒಂದು ವೇಳೆ ಅವರು ಭಾರತದಲ್ಲಿ ಹೆಚ್ಚು ಪಂದ್ಯವನ್ನಾಡಿದ್ದರೆ.." ಎಂದು ಹೇಳುತ್ತಿರುವಾಗ ರಣ್‌ವೀರ್ ನಗುತ್ತಾ ಮಧ್ಯ ಪ್ರವೇಶಿಸಿ "ಇಷ್ಟೊಂದು ಯಶಸ್ವಿಯಾಗುತ್ತಿರಲಿಲ್ಲ" ಎಂದು ಪ್ರಶ್ನಿಸಿದ್ದಾರೆ.

ಭಾರತ ಟೆಸ್ಟ್ ತಂಡದಿಂದ ಹೊರಬಿದ್ದ ಬೆನ್ನಲ್ಲೇ ವಿಡಿಯೋ ಸಂದೇಶ ರವಾನಿಸಿದ ಚೇತೇಶ್ವರ್ ಪೂಜಾರ..!

ಇದಕ್ಕೆ ಪ್ರತಿಕ್ರಿಯಿಸಿರುವ ಇಶಾಂತ್‌ ಶರ್ಮಾ, ಜೇಮ್ಸ್‌ ಆ್ಯಂಡರ್‌ಸನ್ ಅವರಿಗಿಂತ ಜಹೀರ್ ಖಾನ್ (Zaheer Khan) ಅತ್ಯುತ್ತಮ ಬೌಲರ್ ಎಂದು ಅಭಿಪ್ರಾಯಪಟ್ಟಿದ್ದಾರೆ.

ಜಹೀರ್ ಖಾನ್ ಭಾರತ ಪರ 200 ಏಕದಿನ ಪಂದ್ಯಗಳನ್ನಾಡಿ 282 ವಿಕೆಟ್ ಕಬಳಿಸಿದ್ದಾರೆ. ಇನ್ನ ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತ ಪರ 92 ಪಂದ್ಯಗಳನ್ನಾಡಿ 311 ವಿಕೆಟ್‌ ಕಬಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಜಹೀರ್ ಖಾನ್ 11 ಬಾರಿ 5+ ವಿಕೆಟ್ ಕಬಳಿಸಿದ್ದಾರೆ.

2011ರ ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯ ಜಹೀರ್ ಖಾನ್ ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಆದರೆ ಇಂಗ್ಲೆಂಡ್ ವೇಗಿ ಜೇಮ್ಸ್‌ ಆ್ಯಂಡರ್‌ಸನ್ ಇನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮುಂದುವರೆಯುತ್ತಿದ್ದು, ಕೇವಲ ಟೆಸ್ಟ್ ಪಂದ್ಯಗಳನ್ನಷ್ಟೇ ಆಡುತ್ತಿದ್ದಾರೆ. ಸದ್ಯ ಆಸ್ಟ್ರೇಲಿಯಾ ಎದುರಿನ ಆ್ಯಷಸ್ ಟೆಸ್ಟ್ ಸರಣಿಯಲ್ಲಿ ಜೇಮ್ಸ್‌ ಆ್ಯಂಡರ್‌ಸನ್ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್‌ನಲ್ಲಿ ನಡೆದ ಆ್ಯಷಸ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಜೇಮ್ಸ್ ಆ್ಯಂಡರ್‌ಸನ್‌ ಕೇವಲ ಒಂದು ವಿಕೆಟ್‌ ಪಡೆಯಲಷ್ಟೇ ಶಕ್ತರಾಗಿದ್ದರು. ಆಸ್ಟ್ರೇಲಿಯಾ ಎದುರು ಜೇಮ್ಸ್ ಆ್ಯಂಡರ್‌ಸನ್ ಎರಡು ಇನಿಂಗ್ಸ್‌ಗಳಿಂದ 109 ರನ್ ನೀಡಿ ಕೇವಲ ಒಂದು ವಿಕೆಟ್ ಮಾತ್ರ ತಮ್ಮ ಖಾತೆಗೆ ಸೇರಿಸಿಕೊಂಡಿದ್ದರು. ಆ್ಯಷಸ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌ ತಂಡವು 2 ವಿಕೆಟ್‌ಗಳ ರೋಚಕ ಸೋಲು ಅನುಭವಿಸಿತ್ತು. ಎರಡನೇ ಟೆಸ್ಟ್ ಪಂದ್ಯವು ಲಾರ್ಡ್ಸ್‌ ಮೈದಾನದಲ್ಲಿ ಜೂನ್ 28ರಿಂದ ಆರಂಭವಾಗಲಿದ್ದು, ಇಂಗ್ಲೆಂಡ್‌ ಆಡುವ ಹನ್ನೊಂದರ ಬಳಗದಲ್ಲಿ ಆ್ಯಂಡರ್‌ಸನ್ ಸ್ಥಾನ ಪಡೆಯುತ್ತಾರೆಯೇ ಅಥವಾ ಇಲ್ಲವೇ ಎನ್ನುವುದನ್ನು ಕಾದು ನೋಡಬೇಕಿದೆ.

Latest Videos
Follow Us:
Download App:
  • android
  • ios