ಮೋದಿ ವಿರುದ್ಧ ಅಫ್ರಿದಿ ಹೇಳಿಕೆಗೆ ಯುವರಾಜ್ ಗರಂ; ಇನ್ನೆಂದು ಸಹಾಯ ಮಾಡುವುದಿಲ್ಲ!
ಪಾಕಿಸ್ತಾನ ಮಾಜಿ ಕ್ರಿಕೆಟಿಗ ಕಾಶ್ಮೀರ ಕುರಿತು ಹಲವು ವಿವಾದಾತ್ಮಕ ಹೇಳಿಕೆ ನೀಡಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದೀಗ ಕಾಶ್ಮೀರದ ಜೊತೆಗೆ ಪ್ರಧಾನಿ ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಕುರಿತು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಗರಂ ಆಗಿದ್ದಾರೆ.
ಮುಂಬೈ(ಮೇ.17): ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಭಾರತದ ವಿರುದ್ಧ ಹೇಳಿಕೆ ನೀಡುವುದು ಹೊಸದೇನಲ್ಲ. ಅದರಲ್ಲೂ ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಕಾಶ್ಮೀರ ಕುರಿತು ಸದಾ ವಿವಾದಿತ ಹೇಳಿಕೆ ನೀಡುತ್ತಲೇ ಇರುತ್ತಾರೆ. ಪ್ರತಿ ಭಾರಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅಷ್ಟೇ ಖಾರವಾಗಿ ತಿರುಗೇಟು ನೀಡುತ್ತಾರೆ. ಆದರೆ ಈ ಬಾರಿ ಶಾಹಿದ್ ಆಫ್ರಿದಿ, ಕಾಶ್ಮೀರದ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಿವಾದಿತ ಹೇಳಿಕೆ ನೀಡಿದ್ದಾರೆ. ಇದು ಭಾರತೀಯರನ್ನು ಕೆರಳಿಸಿದೆ. ಇದಕ್ಕೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ತಿರುಗೇಟು ನೀಡಿದ್ದಾರೆ.
ಇಂಡೋ-ಪಾಕ್ ಸರಣಿಗೆ ಅಡ್ಡಿಯಾದ ಮೋದಿ, ಮತ್ತೆ ನಾಲಗೆ ಹರಿಬಿಟ್ಟ ಶಾಹಿದ್ ಆಫ್ರಿದಿ!.
ಮೋದಿ ವಿರುದ್ಧ ಕಾಶ್ಮೀರ ಹೇಳಿಕೆಗೆ ಗಂಭೀರ್ ತಿರುಗೇಟು ನೀಡಿದ ಬೆನ್ನಲ್ಲೇ ಇದೀಗ ಯುವರಾಜ್ ಸಿಂಗ್ ತಿರುಗೇಟು ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಶಾಹಿದ್ ಅಫ್ರಿದಿ ಹೇಳಿಕೆಯನ್ನು ಖಂಡಿಸತ್ತೇನೆ. ಭಾರತ ತಂಡವನ್ನು ಪ್ರತಿನಿಧಿಸಿದ ಜವಬ್ದಾರಿಯುತ ಆಟಗಾರನಾಗಿ ಯಾವುದೇ ಕಾರಣಕ್ಕೂ ಶಾಹಿದ್ ಅಫ್ರಿದಿ ಮಾತುಗಳನ್ನು ಸ್ವೀಕರಿಸಲು ಸಾಧ್ಯವಿಲ್ಲ. ಈ ಹಿಂದೆ ನಿಮ್ಮ ಮಾತಿನಿಂದ ಮಾನವೀಯತೆಗಾಗಿ ನಾನು ಮನವಿ ಮಾಡಿ ನೆರವು ನೀಡಿದ್ದೆ. ಇನ್ನೆಂದಿಗೂ ಮಾಡುವುದಿಲ್ಲ ಎಂದು ಯುವರಾಜ್ ಸಿಂಗ್ ಟ್ವೀಟ್ ಮಾಡಿದ್ದಾರೆ.
ಕಾಶ್ಮೀರದೊಳಗೆ ಕಡ್ಡಿ ಆಡಿಸಿದ ಆಫ್ರಿದಿಗೆ ಗಂಭೀರ್ ತಿರುಗೇಟು!
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಹಳ್ಳಿಗೆ ಬೇಟಿ ನೀಡಿದ್ದ ಶಾಹಿದ್ ಆಫ್ರಿದಿ, ಅಲ್ಲಿ ಮಾಡಿದ ಭಾಷಣ ವಿಡಿಯೋ ಭಾರಿ ವಿವಾದಕ್ಕೆ ಕಾರಣವಾಗಿತ್ತು. ಇಂದು ಸುಂದರ ಹಳ್ಳಿ, ಕೊರೋನಾ ವೈರಸ್ ಕಾರಣ ಈ ಗ್ರಾಮಕ್ಕೆ ಬೇಟಿ ನೀಡಲು ಸಾಧ್ಯವಾಗಿರಲಿಲ್ಲ. ಆದರೆ ಕೊರೋನಾ ವೈರಸ್‌ಗಿಂತ ದೊಡ್ಡ ವೈರಸ್ ಮೋದಿಯ ಆಲೋಚನೆ. ಮೋದಿ ಧರ್ಮದ ಹೆಸರನಲ್ಲಿ ರಾಜಕೀಯ ಮಾಡುವ ವೈರಸ್ ಎಂದು ಹೇಳಿದ್ದಾರೆ.
ಕಾಶ್ಮೀರದ ಜನತೆಗೆ ಮೋದಿ ಅನ್ಯಾಯ ಮಾಡುತ್ತಿದ್ದಾರೆ. ಮೋದಿ ಎಲ್ಲದಕ್ಕೂ ಉತ್ತರ ನೀಡಲೇಬೇಕು. ಮೋದಿ 7 ಲಕ್ಷ ಸೈನಿಕರನ್ನು ಕಾಶ್ಮೀರ ಕಾಯಲು ಮೀಸಲಿಟ್ಟಿದ್ದಾರೆ. ಪಾಕಿಸ್ತಾನದ ಒಟ್ಟು ಸೇನೆ ಸಂಖ್ಯೆ 7 ಲಕ್ಷ. ಆದರೆ ಪಾಕಿಸ್ತಾನ ಸೇನೆಗೆ 22 ಕೋಟಿ ಜನರ ಬೆಂಬಲವಿದೆ ಎಂದು ಅಫ್ರಿದಿ ಹೇಳಿದ್ದರು.
ಅಫ್ರಿದಿ ಹೇಳಿಕೆ ವೈರಲ್ ಆಗುತ್ತಿದ್ದಂತೆ ಗೌತಮ್ ಗಂಭೀರ್ ತಿರುಗೇಟು ನೀಡಿದ್ದರು. ಪಾಕಿಸ್ತಾನದ 7 ಲಕ್ಷ ಸೇನೆ 22 ಕೋಟಿ ಪಾಕಿಸ್ತಾನಿಯ ಬೆಂಬಲವಿದೆ ಎನ್ನುತ್ತಿರುವ 16 ವರ್ಷದ ಆಫ್ರಿದಿ, ಕಳೆದ 70 ವರ್ಷಗಳಿಂದ ಪಾಕಿಸ್ತಾನ ಕಾಶ್ಮೀರಕ್ಕ ಭಿಕ್ಷೆ ಬೇಡುತ್ತಿರುವುದೇಕೆ? ಅಫ್ರಿದಿ, ಇಮ್ರಾನ್ ಹಾಗೂ ಬಾಜ್ವರಂತಹ ಹಲವು ಜೋಕರ್‌ಗಳು ಪಾಕಿಸ್ತಾನದ ಜನರನ್ನು ಮೂರ್ಖರನ್ನಾಗಿಸಬಹುದು. ಮೋದಿ ವಿರುದ್ಧ ವಿಷ ಕಾರುತ್ತಲೇ ಇರಬುಹುದು. ಆದರೆ ಕೊನೆಯವರೆಗೂ ಕಾಶ್ಮೀರ ಸಿಗುವುದಿಲ್ಲ. ಬಾಂಗ್ಲಾದೇಶ ನೆನಪಿದೆ ತಾನೆ ಎಂದು ಗಂಭೀರ್ ಟ್ವೀಟ್ ಮಾಡಿದ್ದರು,