ಇಂಡೋ-ಪಾಕ್ ಸರಣಿಗೆ ಅಡ್ಡಿಯಾದ ಮೋದಿ, ಮತ್ತೆ ನಾಲಗೆ ಹರಿಬಿಟ್ಟ ಶಾಹಿದ್ ಆಫ್ರಿದಿ!
ಭಾರತದಿಂದ ಪಾಕಿಸ್ತಾನ ಇಬ್ಬಾಗಾದ ಸಮಯದಿಂದಲೂ ಉಭಯ ದೇಶಗಳ ನಡುವಿನ ಸಂಬಂಧ ನೆಟ್ಟಗಿಲ್ಲ. 2008ರ ಮುಂಬೈ ಮೇಲಿನ ಭಯೋತ್ಪಾದಕ ದಾಳಿ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವಿನ ಎಲ್ಲಾ ವ್ಯವಹಾರಗಳು ಬಂದ್ ಆಗಿದೆ. ಇದರಲ್ಲಿ ಪ್ರಮುಖವಾಗಿ ಕ್ರಿಕೆಟ್. ಇದೀಗ ಶಾಹಿದ್ ಆಫ್ರಿದಿ ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಕ್ರಿಕೆಟ್ ಪುನರ್ ಆರಂಭಕ್ಕೆ ನರೇಂದ್ರ ಮೋದಿ ಸರ್ಕಾರ ಅಡ್ಡಿಯಾಗಿದೆ ಎಂದಿದ್ದಾರೆ. ಇಷ್ಟೇ ಅಲ್ಲ ಭಾರತೀಯರಿಗೆ ಪರೋಕ್ಷವಾಗಿ ಸೂಚನೆಯನ್ನು ನೀಡಿದ್ದಾರೆ.
2008ರ ಮುಂಬೈ ಮೇಲಿನ ಭಯೋತ್ಪಾದಕ ದಾಳಿ ಬಳಿಕ ಪಾಕಿಸ್ತಾನ ಜೊತೆಗಿ ಎಲ್ಲಾ ಸಂಬಂದ ಕಟ್
2012ರಲ್ಲಿ ಇಂಡೋ-ಪಾಕ್ ದ್ವಿಪಕ್ಷೀಯ ಸರಣಿ ಆಯೋಜಿಸಿದ್ದ ಬಿಸಿಸಿಐ
2019, ಫೆಬ್ರವರಿಯಲ್ಲಿನ ಪುಲ್ವಾಮಾ ದಾಳಿ ಬಳಿಕ ಇಂಡೋ-ಪಾಕ್ ಕ್ರಿಕೆಟ್ ಸರಣಿ ಅಸಾಧ್ಯವಾಗಿದೆ
ಮೋದಿ ಸರ್ಕಾರದಿಂದ ಭಾರತ-ಪಾಕಿಸ್ತಾನ ಸರಣಿ ಆಯೋಜನೆಗೆ ಅಡ್ಡಿಯಾಗುತ್ತಿದೆ ಎಂದ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಅಫ್ರಿದಿ
ಪಾಕಿಸ್ತಾನ ಸದಾ ಭಾರತದೊಂದಿಗೆ ಉತ್ತಮ ಸಂಬಂಧ ಬೆಳೆಸಲು ಯತ್ನಿಸುತ್ತಿದೆ
ಮೋದಿ ಸರ್ಕಾರದಿಂದ ಇದು ಸಾಧ್ಯವಾಗುತ್ತಿಲ್ಲ, ಭವಿಷ್ಯದಲ್ಲಿ ಭಾರತ ತನ್ನ ನಿಲುವು ಬದಲಿಸಬಹುದು ಎಂದ ಅಫ್ರಿದಿ
ಪರೋಕ್ಷವಾಗಿ ಭಾರತೀಯರು ಹೊಸ ಸರ್ಕಾರ ಆಯ್ಕೆ ಮಾಡಿದ ಮೇಲೆ ಸರಣಿ ಸಾಧ್ಯ ಎಂದ ಹೇಳಿದ ಆಫ್ರಿದಿ
ಕಾಶ್ಮೀರ ಕುರಿತು ಹಲವು ಭಾರಿ ವಿವಾದಾತ್ಮಕ ಹೇಳಿಕೆ ನೀಡಿರುವ ಆಫ್ರಿದಿ
ಪ್ರತಿ ಭಾರಿ ಆಫ್ರಿದಿ ಹೇಳಿಕೆಗೆ ತಿರುಗೇಟು ನೀಡಿರುವ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್