Asianet Suvarna News Asianet Suvarna News

ಜಾತಿ ನಿಂದನೆ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಕ್ಷಮೆ ಕೇಳಿದ ಯುವರಾಜ್ ಸಿಂಗ್!

ಸಾಮಾಜಿಕ ಜಾಲತಾಣದ ಲೈವ್ ಕಾರ್ಯಕ್ರಮದಲ್ಲಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್, ಯಜುವೇಂದ್ರ ಚಹಾಲ್ ವಿರುದ್ಧ ನಿಷೇದಿತ ಜಾತಿ ನಿಂದನೆ ಪದ ಬಳಕೆ ಮಾಡಿದ್ದರು. ಯುವಿ ವಿರುದ್ಧ ದೇಶದೆಲ್ಲೆಡೆ ಆಕ್ರೋಶ ಕೇಳಿಬಂದಿತ್ತು ಇಷ್ಟೇ ಅಲ್ಲ ದಲಿತ ಪರ ಹೋರಾಟಗಾರರು ಯುವಿ ವಿರುದ್ಧ ದೂರು ದಾಖಲಿಸಿದ್ದರು. ಇದೀಗ ಯುವಿ ಕ್ಷಮೆ ಕೇಳಿದ್ದಾರೆ.
 

Yuvraj singh apologies yuzvendra chahal on cast comment
Author
Bengaluru, First Published Jun 5, 2020, 10:48 PM IST

ಮುಂಬೈ(ಜೂ.05): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಮೇಲೆ ಅಭಿಮಾನಿಗಳಿಗೆ ಹಾಗೂ ಭಾರತೀಯರಿಗೆ ವಿಶೇಷ ಗೌರವವಿದೆ. ಭಾರತದ ಟಿ20 ಹಾಗೂ ಏಕದಿನ ವಿಶ್ವಕಪ್ ಗೆಲ್ಲಿಸಿಕೊಟ್ಟ ಹೀರೋ ಮಾತ್ರವಲ್ಲ, ಕ್ಯಾನ್ಸರ್ ಗೆದ್ದು ಮತ್ತೆ ಸಾಧನೆ ಮಾಡಬಹುದು ಎಂದು ಎಲ್ಲರಲ್ಲಿ ಆತ್ಮವಿಶ್ವಾಸ ಮೂಡಿಸಿದ ಕ್ರಿಕೆಟಿಗ. ಆದರೆ ಮೊನ್ನೆ ಮೊನ್ನೆ ಯುವಿ, ಸ್ಪಿನ್ನರ್ ಯಜವೇಂದ್ರ ಚಹಾಲ್ ಹಾಗೂ ಕುಲ್ದೀಪ್ ಯಾದವ್ ವಿರುದ್ಧ ಜಾನಿನಿಂದನೆ ಪದ ಬಳಕೆ ಮಾಡಿದ್ದರು. ಇದರ ವಿರುದ್ಧ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಯುವಿ ಕ್ಷಮೆ ಯಾಚಿಸಿದ್ದಾರೆ.

ಮೋದಿ ವಿರುದ್ಧ ಅಫ್ರಿದಿ ಹೇಳಿಕೆಗೆ ಯುವರಾಜ್ ಗರಂ; ಇನ್ನೆಂದು ಸಹಾಯ ಮಾಡುವುದಿಲ್ಲ!.

ರೋಹಿತ್ ಶರ್ಮ ಜೊತೆ ಸಾಮಾಜಿಕ ಜಾಲತಾಣದಲ್ಲಿನ ಮಾತುಕತೆಯಲ್ಲಿ ಯುವರಾಜ್ ಸಿಂಗ್ ಜಾತಿ ನಿಂದನೆ ಪದ ಬಳಕೆ ಮಾಡಿದ್ದರು. ಯಜುವೇಂದ್ರ ಚಹಾಲ್ ಹಾಗೂ ಕುಲ್ದೀಪ್ ಯಾದವ್ ಕುರಿತು ಮಾತನಾಡುತ್ತಿರುವಾಗ ಯುವಿ ಭಂಗಿ ಅನ್ನೋ ಪದಕ ಬಳಕೆ ಮಾಡಿದ್ದಾರೆ. ಈ ಪದ ಉತ್ತರ ಭಾರತದಲ್ಲಿ ದಲಿತರನ್ನು ಮೇಲ್ಜಾತಿಯವರು ಕರೆಯುತ್ತಿದ್ದ ಪದವಾಗಿದೆ. ಆದರೆ ಈ ಪದ ನಿಷೇದಿಸಲಾಗಿದೆ. ಇದೇ ಪದವನ್ನು ಬಳಸಿದಿ ಯುವಿ ವಿರುದ್ಧ ದಲಿತ ಹೋರಾಟಗಾರರು ಕೆಂಡಾಮಂಡಲರಾಗಿದ್ದರು.

ಹಲವರು ಯುವಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಹರ್ಯಾಣದ ದಲಿತ ಹೋರಾಟ ಸಮಿತಿ ಯುವರಾಜ್ ಸಿಂಗ್ ವಿರುದ್ಧ ದೂರು ನೀಡಿತ್ತು. ಇತ್ತ ಯುವರಾಜ್ ಸಿಂಗ್ ತಕ್ಷಣವೇ ಕ್ಷಮೆ ಕೇಳಿದ್ದಾರೆ. 

 

ಜಾತಿ, ಬಣ್ಣ, ಧರ್ಮದ ಆಧಾರದಲ್ಲಿ ಜನರ ತಾರತಮ್ಯ ನಾನು ಮಾಡುವುದಿಲ್ಲ. ಜನರ ಸಂಕಷ್ಟಕ್ಕೆ ನಾನು ನೆರವಾಗುತ್ತಿದ್ದೇನೆ. ಅದಕ್ಕಾಗಿ ನನ್ನ ವಿದಾಯದ ಜೀವನವನ್ನು ಮುಡಿಪಾಗಿಟ್ಟಿದ್ದೇನೆ. ಪ್ರತಿಯೊಬ್ಬರನ್ನು ಗೌರವದಿಂದ ಕಾಣುವುದು ಹಾಗೂ ಪ್ರತಿಯೊಬ್ಬರಿಗೂ ಗೌರವದಿಂದ ಬದಕಲು ಅನವು ಮಾಡಿಕೊಡುವುದರಲ್ಲಿ ನಂಬಿಕೆ ಹೊಂದಿದ್ದೇನೆ. 

ಗೆಳೆಯನೊಂದಿಗೆ ಮಾತುಕತೆಯಲ್ಲಿ ತಪ್ಪಾಗಿ ಅರ್ಥೈಸಿಕೊಂಡು ಹಾಗೂ ಅನಗತ್ಯವಾಗಿ ಮಾತುಗಳನ್ನು ಆಡಿದ್ದೇನೆ. ಜವಾಬ್ದಾರಿಯುತ ನಾಗರೀಕರನಾಗಿರುವ ನಾನು ಈ ಮೂಲಕ ಕ್ಷಮೆ ಕೇಳುತ್ತೇನೆ. ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದಿಸುತ್ತೇನೆ. ಭಾರತವನ್ನು ಹಾಗೂ ಭಾರತೀಯರನ್ನು ಪ್ರೀತಿಯಿಂದ ಕಾಣುತ್ತೇನೆ ಎಂದು ಯುವರಾಜ್ ಸಿಂಗ್ ಟ್ವಿಟರ್ ಮೂಲಕ ವಿಷಾದ ವ್ಯಕ್ತಪಡಿಸಿದ್ದಾರೆ.
 

Follow Us:
Download App:
  • android
  • ios