Asianet Suvarna News Asianet Suvarna News

ಅಂಡರ್‌ 19: ಯಶಸ್ವಿ ಜೈಸ್ವಾಲ್ ಅಬ್ಬರ, ಭಾರತಕ್ಕೆ ಸರಣಿ ಜಯ

ಮುಂಬೈನ ಯಶಸ್ವಿ ಜೈಸ್ವಾಲ್ ಆಲ್ರೌಂಡ್ ಆಟದ ನೆರವಿನಿಂದ ಇನ್ನೊಂದು ಪಂದ್ಯ ಬಾಕಿ ಇರುವಾಗಲೇ ಭಾರತ ಕಿರಿಯರ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿ ಕೈವಶ ಮಾಡಿಕೊಂಡಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

Yashasvi Jaiswal All Round Performance Helps India U 19 Thrash South Africa In Second Youth ODI and Clinch series
Author
East London, First Published Dec 29, 2019, 7:18 AM IST
  • Facebook
  • Twitter
  • Whatsapp

ಈಸ್ಟ್‌ ಲಂಡನ್‌(ಡಿ.29): ಮುಂದಿನ ತಿಂಗಳು ನಡೆಯಲಿರುವ ಐಸಿಸಿ ಅಂಡರ್‌ 19 ವಿಶ್ವಕಪ್‌ಗೆ ಪೂರ್ವಭಾವಿ ತಯಾರಿ ಸಲುವಾಗಿ ದಕ್ಷಿಣ ಆಫ್ರಿಕಾಕ್ಕೆ ಒಂದು ತಿಂಗಳು ಮೊದಲೇ ತೆರಳಿರುವ ಭಾರತ ತಂಡ, ಆತಿಥೇಯರ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯನ್ನು ವಶಪಡಿಸಿಕೊಂಡಿದೆ. 

ಶನಿವಾರ ಇಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಭಾರತ 8 ವಿಕೆಟ್‌ಗಳ ಗೆಲುವು ಸಾಧಿಸಿತು. ಮೊದಲ ಪಂದ್ಯದಲ್ಲಿ ಭಾರತ 9 ವಿಕೆಟ್‌ಗಳಿಂದ ಗೆದ್ದಿತ್ತು. 2-0 ಮುನ್ನಡೆ ಹೊಂದಿರುವ ಟೀಂ ಇಂಡಿಯಾ ಸರಣಿ ಕ್ಲೀನ್‌ ಸ್ವೀಪ್‌ ಮೇಲೆ ಕಣ್ಣಿಟ್ಟಿದೆ. ಶನಿವಾರದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ದ.ಆಫ್ರಿಕಾ 29.5 ಓವರಲ್ಲಿ 119 ರನ್‌ಗೆ ಆಲೌಟ್‌ ಆಯಿತು. 120 ರನ್‌ ಗುರಿಯನ್ನು ಭಾರತ 16.2 ಓವರಲ್ಲಿ ತಲುಪಿತು. 4 ವಿಕೆಟ್‌ ಕಬಳಿಸಿದ್ದ ಯಶಸ್ವಿ ಜೈಸ್ವಾಲ್‌ 56 ಎಸೆತಗಳಲ್ಲಿ ಅಜೇಯ 89 ರನ್‌ ಸಿಡಿಸಿ ಗಮನ ಸೆಳೆದರು.

ಯಶಸ್ವಿ ಜೈಸ್ವಾಲ್‌ ಅಪೂರ್ವ ದಾಖಲೆ: 18ನೇ ವಸಂತಕ್ಕೆ ಕಾಲಿರಿಸಿದ ಮುಂಬೈನ ಯಶಸ್ವಿ ಜೈಸ್ವಾಲ್, ತಮ್ಮ ಆಲ್ರೌಂಡ್ ಪ್ರದರ್ಶನದ ಮೂಲಕ ಗಮನ ಸೆಳೆದರು. ಮೊದಲು ಬೌಲಿಂಗ್’ನಲ್ಲಿ 4[13/4] ವಿಕೆಟ್ ಕಬಳಿಸಿದ್ದ ಯಶಸ್ವಿ, ಆ ಬಳಿಕ ಬ್ಯಾಟಿಂಗ್’ನಲ್ಲೂ ಅಜೇಯ 89 ರನ್ ಸಿಡಿಸಿ ಭಾರತಕ್ಕೆ ಸುಲಭ ಗೆಲುವು ತಂದಿತ್ತರು. 
ದಾಖಲೆಗಳು: 

* ಕಿರಿಯರ ಏಕದಿನ ಪಂದ್ಯದಲ್ಲಿ 50+ ರನ್ ಹಾಗೂ 4+ ವಿಕೆಟ್ ಪಡೆದ ವಿಶ್ವದ ನಾಲ್ಕನೇ ಆರಂಭಿಕ ಬ್ಯಾಟ್ಸ್’ಮನ್

* ಕಿರಿಯರ ಏಕದಿನ ಪಂದ್ಯದಲ್ಲಿ 50+ ರನ್ ಹಾಗೂ 4+ ವಿಕೆಟ್ ಪಡೆದ ಮೂರನೇ ಭಾರತೀಯ ಕ್ರಿಕೆಟಿಗ

* ಕಿರಿಯರ ಏಕದಿನ ಪಂದ್ಯದಲ್ಲಿ ಹುಟ್ಟುಹಬ್ಬದ ದಿನದಂದು ಅತ್ಯುತ್ತಮ ಬೌಲಿಂಗ್ ಪ್ರದರ್ಶನ[13/4]

* ಕಿರಿಯರ ಏಕದಿನ ಪಂದ್ಯದಲ್ಲಿ ಹುಟ್ಟುಹಬ್ಬದ ದಿನದಂದು ಗರಿಷ್ಠ ಸ್ಕೋರರ್[89*]

ಇತ್ತೀಚೆಗಷ್ಟೇ ನಡೆದ ಐಪಿಎಲ್ ಆಟಗಾರರ ಹರಾಜಿನಲ್ಲಿ ರಾಜಸ್ಥಾನ ರಾಯಲ್ಸ್ ತಂಡವು 2.4 ಕೋಟಿ ರುಪಾಯಿ ನೀಡಿ ಯಶಸ್ವಿ ಜೈಸ್ವಾಲ್ ಅವರನ್ನು ಖರೀದಿಸಿತ್ತು.

Follow Us:
Download App:
  • android
  • ios