Asianet Suvarna News

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್: ಭಾರತ ವಿರುದ್ಧ ಟಾಸ್ ಗೆದ್ದ ನ್ಯೂಜಿಲೆಂಡ್

  • ಬಹುನಿರೀಕ್ಷಿತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಆರಂಭ
  • ಮೊದಲ ದಿನ ಮಳೆಗೆ ಆಹುತಿ, 2ನೇ ದಿನದಾಟದಲ್ಲಿ ಟಾಸ್
  • ಟಾಸ್ ಗೆದ್ದ ನ್ಯೂಜಿಲೆಂಡ್ 
WTCfinal test Teamindia won toss and elected to field first against Newszealand ckm
Author
Bengaluru, First Published Jun 19, 2021, 2:36 PM IST
  • Facebook
  • Twitter
  • Whatsapp

ಸೌಥಾಂಪ್ಟನ್(ಜೂ.19);  ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯಕ್ಕೆ ಕೊನೆಗೂ ಮುಹೂರ್ತ ಫಿಕ್ಸ್ ಆಗಿದೆ. ಮೊದಲ ದಿನ ಮಳೆರಾಯನ ಆರ್ಭಟದಿಂದ ಅಭಿಮಾನಿಗಳು ನಿರಾಸೆ ಅನುಭವಿಸಿದ್ದರು. ಇದೀಗ ಎರಡನೆ ದಿನದಲ್ಲಿ ಮಳೆ ಕೊಂಚ ವಿಶ್ರಾಂತಿಗೆ ಜಾರಿರುವ ಕಾರಣ ಪಂದ್ಯ ಆರಂಭಗೊಂಡಿದೆ. ಐತಿಹಾಸಿಕ ಫೈನಲ್ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.

ಮೊದಲ ದಿನ ರದ್ದಾದ ಕಾರಣ ಮದ್ಯಾಹ್ನ ಹಾಗೂ ಸಂಜೆ ಎರಡು ಸೆಶನ್ ಅವಧಿಯನ್ನು 15 ನಿಮಿಷ ಹೆಚ್ಚಿಸಲಾಗಿದೆ. 5ನೇ ದಿನ ಫಲಿತಾಂಶ ಬರದಿದ್ದರೆ, ರಿಸರ್ವ್ ಡೇ ಆಗಿ 6 ದಿನದಲ್ಲಿ ಅಂತಿಮ ದಿನದಾಟ ನಡೆಯಲಿದೆ. 

ಪಂದ್ಯಕ್ಕೂ ಮೊದಲ ದಿನವೇ ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಪ್ರಕಟಿಸಿತ್ತು. ವಿಶೇಷ ಅಂದರೆ ಆಲ್ರೌಂಡರ್ ಕೋಟಾ ಹಾಗೂ ಸ್ಪಿನ್ ಕೋಟಾದಡಿ ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಸ್ಥಾನ ಪಡೆದಿದ್ದಾರೆ. ಮೂವರು ವೇಗಿಗಳನ್ನು ಭಾರತ ತಂಡ ಕಣಕ್ಕಿಳಿಸಿದೆ. ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ ಹಾಗೂ ಮೊಹಮ್ಮದ್ ಶಮಿ ವೇಗದ ಸಾರಥ್ಯ ನಿರ್ವಹಿಸಲಿದ್ದಾರೆ.

ಟೀಂ ಇಂಡಿಯಾ ಪ್ಲೇಯಿಂಗ್ 11:
ವಿರಾಟ್ ಕೊಹ್ಲಿ(ನಾಯಕ), ರೋಹಿತ್ ಶರ್ಮಾ ಶುಭ್‌ಮನ್ ಗಿಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ರಿಷಬ್ ಪಂತ್, ರವೀಂದ್ರ ಜಡೇಜಾ, ಆರ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಜಸ್ಪ್ರೀತ್ ಬುಮ್ರಾ, ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ

Follow Us:
Download App:
  • android
  • ios