Asianet Suvarna News

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್; ಒಂದು ಎಸೆತ ಕಾಣದೆ ಮೊದಲ ದಿನ ರದ್ದು!

  • ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ಮೊದಲ ದಿನಕ್ಕೆ ಮಳೆ ಅಡ್ಡಿ
  • ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಫೈನಲ್ ಪಂದ್ಯ
  • ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ ಮೊದಲ ದಿನ 
WTCfinal test team India vs New zealand play abandoned on the first day without a ball bowled due to rain ckm
Author
Bengaluru, First Published Jun 18, 2021, 8:05 PM IST
  • Facebook
  • Twitter
  • Whatsapp

ಸೌಥಾಂಪ್ಟನ್(ಜೂ.18):  ವಿಶ್ವದ ಅತೀ ದೊಡ್ಡ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಹಾಗೂ ನ್ಯೂಜಿಲೆಂಡ್ ತಂಡ ಸಜ್ಜಾಗಿತ್ತು. ಇಂಗ್ಲೆಂಡ್‌ನ ಸೌಥಾಂಪ್ಟನ್ ಕ್ರೀಡಾಗಣ ಸಕಲ ರೀತಿಯಲ್ಲಿ ರೆಡಿಯಾಗಿತ್ತು. ಐತಿಹಾಸಿಕ ಪಂದ್ಯಕ್ಕೆ ಅಭಿಮಾನಿಗಳು ಕಾತರರಾಗಿದ್ದರು. ರೋಚಕ ಹೋರಾಟ ವೀಕ್ಷಿಸಲು ಕಾದು ಕುಳಿತಿದ್ದ ಅಭಿಮಾನಿಗಳಿಗೆ ಮಳೆರಾಯನ ಆಟ ನೋಡಬೇಕಾಯಿತು. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ಮೊದಲ ದಿನ ರದ್ದಾಗಿದೆ.

ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್: ಮೊದಲ ದಿನದ ಮೊದಲ ಸೆಷನ್ ಬಲಿ ಪಡೆದ ಮಳೆರಾಯ..!

ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ಮೊದಲ ದಿನ ಸುರಿದ ನಿರಂತ ಮಳೆಯಿಂದ ಎಲ್ಲವೂ ಬುಡಮೇಲಾಗಿದೆ. ಮಳೆಯಿಂದಾಗಿ ಟಾಸ್ ವಿಳಂಬವಾಗಿತ್ತು. ಬಳಿಕ ಮಳೆ ನಿಂತರೂ ಸಂಪೂರ್ಣ ಮೈದಾನ ಒದ್ದೆಯಾಗಿತ್ತು. ಹೀಗಾಗಿ ಮೈದಾನ ಪರಿಶೀಲನೆ ನಡೆಸಿದ ಮ್ಯಾಚ್ ರೆಫ್ರಿ ಮೊದಲ ದಿನದಾಟವನ್ನು ರದ್ದು ಮಾಡಿದರು.

ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಗೆಲ್ಲಲು ಕೊಹ್ಲಿ ಪಡೆ ಏನು ಮಾಡಬೇಕು?.

ಒಂದು ಎಸೆತ ಕಾಣದೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಂದ್ಯದ ಮೊದಲ ದಿನ ರದ್ದಾಗಿದೆ. ಮಳೆ ವಾತಾವರಣ ಮುಂದುವರಿದ್ದು, 2ನೇ ದಿನದಾಟದಲ್ಲಿ ಅಬ್ಬರಿಸುವ ಸಾಧ್ಯತೆ ಇದೆ. ಇದೀಗ ಅಭಿಮಾನಿಗಳು 2ನೇ ದಿನದಾಟ ನೋಡಲು ಕಾತರರಾಗಿದ್ದಾರೆ. ಮಳೆ ಅನುವು ಮಾಡಿದರೆ 2ನೇ ದಿನದಾಟದಲ್ಲಿ ಟಾಸ್ ಪ್ರಕ್ರಿಯೆ ನಡೆಯಲಿದೆ. 

Follow Us:
Download App:
  • android
  • ios