ಐಪಿಎಲ್ ಆರಂಭಕ್ಕೆ 10 ತಿಂಗಳು ಮಾತ್ರ, ಟೆಸ್ಟ್ ಫೈನಲ್ ಸೋತ ಬೆನ್ನಲ್ಲೇ ಅಭಿಮಾನಿಗಳ ಆಕ್ರೋಶ!
ಐಸಿಸಿ ಟ್ರೋಫಿ ಗೆಲ್ಲಲ್ಲ, ನಾವು ಆಸೆ ಪಟ್ಟಿದ್ದೇ ಬಂತು. ಅಭಿಮಾನಿಗಳೇ ಟೆಸ್ಟ್ ಫೈನಲ್ ಮರೆತು ಬಿಡಿ, ಜಿದ್ದಾಜಿದ್ದಿನಿಂದ ಹೋರಾಡುವ ಐಪಿಎಲ್ ಆರಂಭಕ್ಕೆ ಇನ್ನೂ 10 ತಿಂಗಳು ಮಾತ್ರ, ಶೇಮ್‌ಲೆಸ್ ಇಂಡಿಯಾ ಎಂದು ಅಭಿಮಾನಿಗಳು ಆಕ್ರೋಶ ಹೊರಹಾಕಿದ್ದಾರೆ.
ಓವಲ್(ಜೂ.11): ಸತತ 2ನೇ ಬಾರಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಮುಗ್ಗರಿಸಿದೆ. ಈ ಮೂಲಕ ಐಸಿಸಿ ಟ್ರೋಫಿ ಬರಕ್ಕೆ 10 ವರ್ಷಗಳೇ ಸಂದಿದೆ. 20213ರ ಚಾಂಪಿಯನ್ಸ್ ಟ್ರೋಫಿ ಬಳಿಕ ಭಾರತ ಒಂದೇ ಒಂದು ಐಸಿಸಿ ಟ್ರೋಫಿ ಗೆದ್ದಿಲ್ಲ. ಅದರಲ್ಲೂ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಚಾಂಪಿಯನ್‌ಶಿಫ್ ಫೈನಲ್ ಗೆಲ್ಲುವ ಸುವರ್ಣ ಅವಕಾಶ ಭಾರತದ ಕೈಯಲ್ಲಿತ್ತು. ಆದರೆ ಕಳಪೆ ಪ್ರದರ್ಶನ ನೀಡುವ ಮೂಲಕ ಟ್ರೋಫಿ ಕೈಚೆಲ್ಲಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣಾಗಿದೆ. ಟೆಸ್ಟ್ ಚಾಂಪಿಯನ್‌ಶಿಫ್ ಫೈನಲ್, ಐಸಿಸಿ ವಿಶ್ವಕಪ್, ಟಿ20, ಏಷ್ಯಾಕಪ್, ಚಾಂಪಿಯನ್ ಟ್ರೋಫಿ ಸೇರದಂತೆ ಯಾವುದೇ ಐಸಿಸಿ ಟೂರ್ನಿಯಲ್ಲಿ ಹೋರಾಟ ನೀಡಲು ಟೀಂ ಇಂಡಿಯಾ ಆಟಗಾರರು ಮರೆತುಬಿಡುತ್ತಾರೆ. ಅದೇ ಐಪಿಎಲ್ ಟೂರ್ನಿಯಲ್ಲಿ ಜಿದ್ದಾಜಿದ್ದಿನಿಂದ ಹೋರಾಡುತ್ತಾರೆ. ಹೀಗಾಗಿ ಅಭಿಮಾನಿಗಳೇ ನೀವು ಟೆಸ್ಟ್ ಫೈನಲ್ ಮರೆತು ಬಿಡಿ. ಐಪಿಎಲ್ 2024ರ ಟೂರ್ನಿ ಆರಂಭಕ್ಕೆ ಇನ್ನು 10 ತಿಂಗಳು ಮಾತ್ರ ಎಂದು ಟೀಂ ಇಂಡಿಯಾವನ್ನು ಟ್ರೋಲ್ ಮಾಡಲಾಗಿದೆ.
ಟೀಂ ಇಂಡಿಯಾ ಆಟಗಾರರಿಗೆ ಐಪಿಎಲ್ ಒಂದು ಬಿಟ್ಟರೇ ಇನ್ನೇನು ಚಿಂತೆ ಇಲ್ಲ. ಎಲ್ಲರೂ ಶಕ್ತಿಮೀರಿ ಐಪಿಎಲ್ ಟೂರ್ನಿಯಲ್ಲಿ ಆಡುತ್ತಾರೆ. ಐಪಿಎಲ್ ಟೂರ್ನಿ ವೇಳೆ ಎಲ್ಲರೂ ಫಿಟ್ ಆಗುತ್ತಾರೆ. ಈ ಬಾರಿ ಟ್ರೋಫಿ ಗೆಲ್ಲುವ ಅತ್ಯುತ್ತಮ ಅವಕಾಶವನ್ನೇ ಟೀಂ ಇಂಡಿಯಾ ಕೈಯಾರೆ ದೂರ ಮಾಡಿದೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ.
WTC FINAL: ಟೆಸ್ಟ್ ವಿಶ್ವಕಪ್ ಗೆಲ್ಲುವ ಭಾರತದ ಕನಸು ಭಗ್ನ, ಆಸ್ಟ್ರೇಲಿಯಾ ಟೆಸ್ಟ್ ಕ್ರಿಕೆಟ್‌ಗೆ ಒಡೆಯ
ಐಸಿಸಿ ಪ್ರಮುಖ ಟೂರ್ನಿ, ಫೈನಲ್ ಪಂದ್ಯ, ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ದಿಟ್ಟ ಹೋರಾಟ ನೀಡಿ ಭಾರತ ತಂಡವನ್ನು ಆಪತ್ತಿನಿಂದ ಪಾರು ಮಾಡಲು ಗೌತಮ್ ಗಂಭೀರ್ ರೀತಿಯ ಬ್ಯಾಟ್ಸ್‌ಮನ್ ಅವಶ್ಯಕತೆ ಇದೆ. ಆದರೆ ತಂಡದಲ್ಲಿ ಸದ್ಯ ಘಟಾನುಘಟಿ ಬ್ಯಾಟ್ಸ್‌ಮನ್ ಇದ್ದಾರೆ. ಆದರೆ ಯಾರೂ ಫೈನಲ್ ಪಂದ್ಯ ಆಡಲ್ಲ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
ಭಾರತ ಚೋಕರ್ಸ್ ಅಲ್ಲ ಚೋಕ್ಲಿ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ. ವಿರಾಟ್ ಕೊಹ್ಲಿ ಮಹತ್ವದ ಪಂದ್ಯದಲ್ಲಿ ಆಡುತ್ತಿಲ್ಲ. ವಿರಾಟ್ ಚೋಕ್ಲಿ ಹಾಗೂ ಟೀಂ ಇಂಡಿಯಾ ಚೋಕ್ಲಿ ಎಂದು ಟ್ವಿಟರ್‌ನಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಈ ಬಾರಿ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯ ವಹಿಸುತ್ತಿದೆ. ಆದರೆ ಟೀಂ ಇಂಡಿಯಾ ಪ್ರದರ್ಶನ ನೋಡಿದರೆ ನಮ್ಮ ಕಣ್ಣೆದುರೆ, ತವರು ನೆಲದಲ್ಲಿ ಟ್ರೋಫಿ ಗೆಲ್ಲದೆ ನಿರಾಶೆಗೊಳ್ಳುವುದಕ್ಕಿಂತ, ಟೂರ್ನಿ ಬೇರೇಡೆ ಸ್ಥಳಾಂತರ ಮಾಡುವುದು ಒಳಿತು ಎಂದು ಕೆಲ ಅಭಿಮಾನಿಗಳು ಸಲಹೆ ನೀಡಿದ್ದಾರೆ.
ವಿಂಡೀಸ್, ಅಮೆರಿಕದಲ್ಲೇ ಟಿ20 ವಿಶ್ವಕಪ್: ಐಸಿಸಿ ಸ್ಪಷ್ಟನೆ
ವಿಶ್ವ ಟೆಸ್ಟ್ ಚಾಂಪಿಯನ್‌ಶಿಫ್ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಕಳಪೆ ಪ್ರದರ್ಶನ ನೀಡಿದೆ. ಟಾಸ್ ಸೋತು ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳುವ ಮೂಲಕ ಎಡವಟ್ಟು ಮಾಡಿತು. ಇತ್ತ ಆಸ್ಟ್ರೇಲಿಯಾ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತು. ಟ್ರಾವಿಸ್ ಹೆಡ್ ಹಾಗೂ ಸ್ಟೀವನ್ ಸ್ಮಿತ್ ಸೆಂಚುರಿ ಸಿಡಿಸಿ ಮಿಂಚಿದರು. ಟ್ರಾವಿಸ್ ಹೆಡ್ 163 ರನ್ ಸಿಡಿಸಿದರೆ, ಸ್ಮಿತ್ 121 ರನ್ ಕಾಣಿಕೆ ನೀಡಿದರು. ಅಲೆಕ್ಸ್ ಕ್ಯಾರಿ 48 ಹಾಗೂ ಡೇವಿಡ್ ವಾರ್ನರ್ 43 ರನ್ ಸಿಡಿಸಿದರು. ಈ ಮೂಲಕ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 469 ರನ್ ಬೃಹತ್ ಮೊತ್ತ ಸಿಡಿಸಿತು. ಇದಕ್ಕುತ್ತರವಾಗಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಕಳಪೆ ಆಟವಾಡಿತು. ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ ಹಾಗೂ ಶಾರ್ದೂಲ್ ಠಾಕೂರ್ ಹೊರತುಪಡಿಸಿದರೆ ಇನ್ನುಳಿದವರು ಅಬ್ಬರಿಸಲಿಲ್ಲ. ರಹಾನೆ 89, ಜಡೇಜಾ 48 ಹಾಗೂ ಠಾಕೂರ್ 51 ರನ್ ಕಾಣಿಕೆ ನೀಡಿದರು. ಭಾರತ 296 ರನ್‌ಗೆ ಆಲೌಟ್ ಆಯಿತು.
ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ 270 ರನ್ ಸಿಡಿಸಿತು. ಈ ಮೂಲಕ ಟೀಂ ಇಂಡಿಯಾ ಗೆಲುವಿಗೆ 444 ರನ್ ಟಾರ್ಗೆಟ್ ನೀಡಲಾಗಿತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ 234 ರನ್‌ಗೆ ಆಲೌಟ್ ಆಯಿತು. ಈ ಮೂಲಕ ಆಸ್ಟ್ರೇಲಿಯಾ 209 ರನ್ ಗೆಲುವು ದಾಖಲಿಸಿತು.