Asianet Suvarna News Asianet Suvarna News

WPL Auction: ಆರಂಭದಲ್ಲೇ 3 ಸ್ಟಾರ್ ಆಟಗಾರ್ತಿಯರನ್ನು ಖರೀದಿಸಿದ RCB: 1.3 ಕೋಟಿ ಜೇಬಿಗಿಳಿಸಿಕೊಂಡ ಕನ್ನಡತಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಆರಂಭದಲ್ಲಿ ಆಸ್ಟ್ರೇಲಿಯಾ ಮೂಲದ ಆಲ್ರೌಂಡರ್ ಜಾರ್ಜಿಯಾ ವಾರೆಮ್ ಅವರನ್ನು 40 ಲಕ್ಷ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಇದಾದ ಬಳಿಕ ಇಂಗ್ಲೆಂಡ್ ತಂಡದ ವೇಗದ ಬೌಲರ್ ಕೇಟ್ ಕ್ರಾಸ್ ಅವರನ್ನು ಮೂಲ ಬೆಲೆ 30 ಲಕ್ಷ ರುಪಾಯಿಗೆ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಯಿತು.

WPL Auction 2024 Live Updates Ekta Bisht  Kate Cross sold to RCB kvn
Author
First Published Dec 9, 2023, 4:58 PM IST

ಮುಂಬೈ(ಡಿ.09): ಎರಡನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಆಟಗಾರ್ತಿಯರ ಹರಾಜು ಭರ್ಜರಿಯಾಗಿಯೇ ಸಾಗುತ್ತಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಆರಂಭದಲ್ಲೇ ಮೂವರು ತಾರಾ ಆಟಗಾರ್ತಿಯರನ್ನು ಖರೀದಿಸುವಲ್ಲಿ ಯಶಸ್ವಿಯಾಗಿದೆ. 

ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಆರಂಭದಲ್ಲಿ ಆಸ್ಟ್ರೇಲಿಯಾ ಮೂಲದ ಆಲ್ರೌಂಡರ್ ಜಾರ್ಜಿಯಾ ವಾರೆಮ್ ಅವರನ್ನು 40 ಲಕ್ಷ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಇದಾದ ಬಳಿಕ ಇಂಗ್ಲೆಂಡ್ ತಂಡದ ವೇಗದ ಬೌಲರ್ ಕೇಟ್ ಕ್ರಾಸ್ ಅವರನ್ನು ಮೂಲ ಬೆಲೆ 30 ಲಕ್ಷ ರುಪಾಯಿಗೆ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಯಿತು. ಇದಾದ ಬಳಿಕ ಆರ್‌ಸಿಬಿ ಫ್ರಾಂಚೈಸಿಯು ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ಏಕ್ತಾ ಬಿಶ್ತ್ ಅವರನ್ನು 60 ಲಕ್ಷ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಯಿತು.

ಕನ್ನಡತಿ ವ್ರಿಂದ ದಿನೇಶ್‌ಗೆ ಜಾಕ್‌ಪಾಟ್:

ಕೇವಲ 10 ಲಕ್ಷ ಮೂಲಬೆಲೆ ಹೊಂದಿದ್ದ ಕರ್ನಾಟಕದ ಆಲ್ರೌಂಡರ್ ವ್ರಿಂದ ದಿನೇಶ್‌ ಅವರಿಗೆ ಈ ಬಾರಿಯ ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಜಾಕ್‌ಪಾಟ್ ಹೊಡೆದಿದ್ದು ಹಲವು ಪೈಪೋಟಿ ಬಳಿಕ 1.30 ಕೋಟಿ ರುಪಾಯಿಗೆ ಯುಪಿ ವಾರಿಯರ್ಸ್ ತಂಡದ ಪಾಲಾಗಿದ್ದಾರೆ. ಇದು ಈ ಆವೃತ್ತಿಯ WPL ಹರಾಜಿನಲ್ಲಿ ಗಮನ ಸೆಳೆದ ಅಚ್ಚರಿಯ ಬಿಡ್ಡಿಂಗ್ ಎನಿಸಿಕೊಂಡಿತು.

ಹರಾಜಿನ ಮತ್ತಷ್ಟು ಅಪ್‌ಡೇಟ್ ಇಲ್ಲಿದೆ ನೋಡಿ:

ಆಸ್ಟ್ರೇಲಿಯಾದ ಆಲ್ರೌಂಡರ್ ಲಿಚ್‌ಫೀಲ್ಡ್ ಫೋಬೆ ಅವರ ಮೂಲಬೆಲೆ 30 ಲಕ್ಷ ರುಪಾಯಿ ಆಗಿತ್ತು. ಗುಜರಾತ್ ಟೈಟಾನ್ಸ್ ಹಾಗೂ ಯುಪಿ ವಾರಿಯರ್ಸ್ ಹೋರಾಟದ ಬಳಿಕ ಕೊನೆಗೂ 1 ಕೋಟಿ ರುಪಾಯಿಗೆ ಗುಜರಾತ್ ಪಾಲಾದರು.

ಇಂಗ್ಲೆಂಡ್ ಬ್ಯಾಟರ್ ಡೇನಿಯಲ್ ವ್ಯಾಟ್ 30 ಲಕ್ಷ ರುಪಾಯಿ ಮೂಲಬೆಲೆಗೆ ಯುಪಿ ವಾರಿಯರ್ಸ್‌ ಪಾಲಾದರು. ಕಳೆದ ಬಾರಿ ಡೇನಿಯಲ್ ವ್ಯಾಟ್ ಅನ್‌ಸೋಲ್ಡ್ ಆಗಿದ್ದರು. 

ಆಸ್ಟ್ರೇಲಿಯಾದ ಆಲ್ರೌಂಡರ್ ಅನ್ನಾಬೆಲ್ ಸದರ್‌ಲೆಂಡ್‌ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು 2 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಂಡಿತು. ಅನ್ನಾಬೆಲ್ ಅವರ ಮೂಲಬೆಲೆ 30 ಲಕ್ಷ ರುಪಾಯಿಗಳಾಗಿತ್ತು.

T20 ವಿಶ್ವಕಪ್‌ಗೆ ಕೊಹ್ಲಿಗಿಲ್ವಾ ಟೀಂ ಇಂಡಿಯಾದಲ್ಲಿ ಸ್ಥಾನ? ವಿರಾಟ್​ ಟಿ20 ಕೆರಿಯರ್ ಕ್ಲೋಸ್ ಆಯ್ತಾ..?

ದಕ್ಷಿಣ ಆಫ್ರಿಕಾದ ವೇಗಿ ಶಭ್‌ನಿಮ್ ಇಸ್ಮಾಯಿಲ್ ಅವರನ್ನು ಸಾಕಷ್ಟು ಪೈಪೋಟಿ ಬಳಿಕ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು 1.2 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಯಿತು.

ಇನ್ನೂ ಅಂತಾರಾಷ್ಟ್ರೀಯ ಪಂದ್ಯವನ್ನಾಡದ ಭಾರತೀಯ ಮೂಲದ ವಿಕೆಟ್ ಕೀಪರ್ ಬ್ಯಾಟರ್ ಅಪರ್ಣ ಮೊಂಡಲ್ ಅವರು ಮೂಲ ಬೆಲೆ 10 ಲಕ್ಷ ರುಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾದರು. 

ಮೊದಲ ಸುತ್ತಿನಲ್ಲೇ ಹಲವು ತಾರೆಯರು ಅನ್‌ಸೋಲ್ಡ್‌:

ವುಮೆನ್ಸ್ ಪ್ರೀಮಿಯರ್ ಲೀಗ್ ಮೊದಲ ಸುತ್ತಿನ ಹರಾಜಿನಲ್ಲಿ ಶ್ರೀಲಂಕಾದ ಚಮಾರಿ ಅಟಪಟ್ಟು, ವೆಸ್ಟ್‌ ಇಂಡೀಸ್‌ನ ಡಿಯೋಂದ್ರಾ ಡಾಟಿನ್, ದೇವಿಕಾ ವೈದ್ಯ, ಪ್ರಿಯಾ ಪೂನಿಯಾ, ಕನ್ನಡತಿ ವೇದಾ ಕೃಷ್ಣಮೂರ್ತಿ, ಪೂನಂ ರಾವತ್ ಸೇರಿದಂತೆ ಹಲವು ಆಟಗಾರ್ತಿಯರು ಅನ್‌ಸೋಲ್ಡ್ ಆಗಿ ಅಚ್ಚರಿ ಮೂಡಿಸಿದರು.
 

Follow Us:
Download App:
  • android
  • ios