ವುಮೆನ್ಸ್ ಪ್ರೀಮಿಯರ್‌ ಲೀಗ್ ಟೂರ್ನಿಯಲ್ಲಿ ಆರ್‌ಸಿಬಿಗೆ ಮೊದಲ ಗೆಲುವುಯುಪಿ ವಾರಿಯರ್ಸ್‌ ಎದುರು 5 ವಿಕೆಟ್‌ ಜಯ ಸಾಧಿಸಿದ ಆರ್‌ಸಿಬಿಆರ್‌ಸಿಬಿ ಮಹಿಳಾ ಕ್ರಿಕೆಟ್‌ ತಂಡಕ್ಕೆ ಸ್ಪೂರ್ತಿ ತುಂಬಿದ ವಿರಾಟ್ ಕೊಹ್ಲಿ

ಮುಂಬೈ(ಮಾ.16): ಸ್ಮೃತಿ ಮಂಧನಾ ನೇತೃತ್ವದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಸತತ 5 ಸೋಲಿನ ಬಳಿಕ ಗೆಲುವಿನ ಖಾತೆ ತೆರೆಯುವಲ್ಲಿ ಯಶಸ್ವಿಯಾಗಿದೆ. ಇಲ್ಲಿನ ಡಿವೈ ಪಾಟೀಲ್ ಮೈದಾನದಲ್ಲಿ ಯುಪಿ ವಾರಿಯರ್ಸ್‌ ಎದುರಿನ ಪಂದ್ಯದಲ್ಲಿ ಸ್ಮೃತಿ ಮಂಧನಾ ಪಡೆ ಭರ್ಜರಿ ಗೆಲುವು ದಾಖಲಿಸುವ ಮೂಲಕ ಪ್ಲೇ ಆಪ್‌ಗೇರುವ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಆರ್‌ಸಿಬಿ ತಂಡವು ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆಯಲು ವಿಫಲವಾಗಿದ್ದರೂ ಮೂರನೇ ಸ್ಥಾನ ಪಡೆಯುವ ಅವಕಾಶ ಸಿಕ್ಕಿದೆ.

ಭಾರತ ಕ್ರಿಕೆಟ್‌ ದಿಗ್ಗಜ ಕ್ರಿಕೆಟಿಗ, ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ, ಆರ್‌ಸಿಬಿ ಮಹಿಳಾ ತಂಡವನ್ನು ಭೇಟಿಮಾಡಿ ಸ್ಪೂರ್ತಿಯ ಮಾತುಗಳನ್ನಾಡಿ ಹುರಿದುಂಬಿಸಿದ್ದರು. ಆರ್‌ಸಿಬಿ ಜತೆಗೆ 15 ವರ್ಷಗಳ ನಿಕಟ ಬಾಂಧವ್ಯ ಹೊಂದಿರುವ ವಿರಾಟ್ ಕೊಹ್ಲಿ, ಇದೀಗ ಮಹಿಳಾ ತಂಡವನ್ನು ಹುರಿದುಂಬಿಸಿದ್ದರು. ಇದರ ಪರಿಣಾಮವೇ ಸತತ 5 ಸೋಲುಗಳ ಬಳಿಕ ಆರ್‌ಸಿಬಿ ಮಹಿಳಾ ತಂಡವು ಯುಪಿ ವಾರಿಯರ್ಸ್ ಎದುರು ಇನ್ನು 12 ಎಸೆತ ಬಾಕಿ ಇರುವಂತೆಯೇ 5 ವಿಕೆಟ್‌ ಭರ್ಜರಿ ಜಯ ಸಾಧಿಸುವುದರ ಜತೆಗೆ ಗೆಲುವಿನ ಖಾತೆ ತೆರೆದಿದೆ.

ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಆರ್‌ಸಿಬಿ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಸ್ಮೃತಿ ಮಂಧನಾ, " ವಿರಾಟ್ ಕೊಹ್ಲಿಯವರು ನೀಡಿದ ಸಲಹೆ ನಮಗೆ ಪ್ರಯೋಜನವಾಯಿತು. ಅವರನ್ನು ನಮ್ಮೆಲ್ಲರಲ್ಲೂ ಉತ್ತಮ ರೀತಿಯಲ್ಲಿ ಸ್ಪೂರ್ತಿ ತುಂಬಿದರು. ಇದಷ್ಟೇ ಅಲ್ಲದೇ ನಮ್ಮ ತಂಡದ ಜತೆ ಸಾಕಷ್ಟು ಹೊತ್ತು ಮಾತನಾಡಿದರು" ಎಂದು ಹೇಳಿದರು.

Scroll to load tweet…

ಡಬ್ಲ್ಯುಪಿಎಲ್‌: ಮೊದಲ ಜಯ ಕಂಡ ಆರ್‌ಸಿಬಿ

ನವಿ ಮುಂಬೈ: ಚೊಚ್ಚಲ ಆವೃತ್ತಿಯ ವುಮೆನ್ಸ್‌ ಪ್ರೀಮಿಯರ್‌ ಲೀಗ್‌(ಡಬ್ಲ್ಯುಪಿಎಲ್‌)ನಲ್ಲಿ ಆರ್‌ಸಿಬಿ ಮೊದಲ ಗೆಲುವು ಸಾಧಿಸಿದೆ. ಸತತ 5 ಸೋಲು ಕಂಡಿದ್ದ ತಂಡ ಬುಧವಾರ ಯು.ಪಿ.ವಾರಿಯ​ರ್‍ಸ್ ವಿರುದ್ಧದ ಪಂದ್ಯದಲ್ಲಿ 5 ವಿಕೆಟ್‌ ಜಯ ಸಾಧಿಸಿತು. ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ ಆರ್‌ಸಿಬಿ ತನ್ನ ಪ್ಲೇ-ಆಫ್‌ ಕನಸನ್ನು ಜೀವಂತವಾಗಿರಿಸಿಕೊಂಡಿದೆ. 

WPL 2023 ಸತತ ಸೋಲಿನಿಂದ ಕಂಗೆಟ್ಟಿದ್ದ ಆರ್‌ಸಿಬಿಗೆ ಮೊದಲ ಗೆಲುವು, ಅಂಕಪಟ್ಟಿಯಲ್ಲಿ ಜಿಗಿತ!

ಮೊದಲು ಬ್ಯಾಟ್‌ ಮಾಡಿದ ಯು.ಪಿ. 5 ರನ್‌ಗೆ 3 ವಿಕೆಟ್‌ ಕಳೆದುಕೊಂಡಿತ್ತು. 31ಕ್ಕೆ 5 ವಿಕೆಟ್‌ ಕಳೆದುಕೊಂಡರೂ ಗ್ರೇಸ್‌ ಹ್ಯಾರಿಸ್‌(46) ಹೋರಾಟದಿಂದ 19.3 ಓವರಲ್ಲಿ 135ಕ್ಕೆ ಆಲೌಟ್‌ ಆಯಿತು. ಆರ್‌ಸಿಬಿಗೆ ಕನಿಕಾ ಅಹುಜಾ(46) ಹಾಗೂ ರಿಚಾ ಘೋಷ್‌(31) ಆಸರೆಯಾದರು. 18 ಓವರಲ್ಲಿ ತಂಡ 5 ವಿಕೆಟ್‌ಗೆ 136 ರನ್‌ ಗಳಿಸಿತು.