ವುಮೆನ್ಸ್ ಪ್ರೀಮಿಯರ್ ಲೀಗ್‌ನಲ್ಲಿ ಗುಜರಾತ್ ಜೈಂಟ್ಸ್ ಪ್ಲೇ ಆಫ್ ಕನಸು ಜೀವಂತಡೆಲ್ಲಿ ಕ್ಯಾಪಿಟಲ್ಸ್ ಎದುರು 11 ರನ್ ಜಯ ಸಾಧಿಸಿದ ಗುಜರಾತ್ ಜೈಂಟ್ಸ್‌ಸೂಪರ್ ಸಂಡೆಯಲ್ಲಿಂದು ಡಬಲ್ ಹೆಡ್ಡರ್ ಪಂದ್ಯಗಳು
ಮುಂಬೈ(ಮಾ.17): ಚೊಚ್ಚಲ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್(ಡಬ್ಲ್ಯಪಿಎಲ್)ನಲ್ಲಿ ಗುಜರಾತ್ ಜೈಂಟ್ಸ್ 2ನೇ ಜಯದೊಂದಿಗೆ ಪ್ಲೇ-ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಗುರುವಾರ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗುಜರಾತ್ 11 ರನ್ ಗೆಲುವು ಸಾಧಿಸಿತು. ಮೊದಲ ಮುಖಾಮುಖಿಯಲ್ಲಿ ಡೆಲ್ಲಿ ವಿರುದ್ಧ 10 ವಿಕೆಟ್ ಹೀನಾಯ ಸೋಲುಂಡಿದ್ದ ಗುಜರಾತ್ ಈ ಪಂದ್ಯದಲ್ಲಿ ಸೇಡು ತೀರಿಸಿಕೊಂಡಿತು. ಗುಜರಾತ್ನ ಈ ಗೆಲುವಿನಿಂದ ಆರ್ಸಿಬಿಯ ಪ್ಲೇ-ಆಫ್ ಆಸೆಗೆ ಮತ್ತಷ್ಟು ಹಿನ್ನಡೆಯುಂಟಾಗಿದ್ದು, ಉಳಿದೆರಡೂ ಪಂದ್ಯ ಗೆದ್ದು ಇತರ ಕೆಲ ಫಲಿತಾಂಶಗಳು ತನ್ನ ಪರವಾಗಿ ಬಂದರಷ್ಟೇ ಪ್ಲೇ-ಆಫ್ಗೇರಬಹುದಾದ ಸಾಧ್ಯತೆ ಇದೆ.
ಗುರುವಾರದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ 4 ವಿಕೆಟ್ಗೆ 147 ರನ್ ಕಲೆಹಾಕಿತು. ಲಾರಾ ವೂಲ್ವಾರ್ಚ್(45 ಎಸೆತಗಳಲ್ಲಿ 57), ಆಶ್ಲೆ ಗಾಡ್ರ್ನರ್(33 ಎಸೆತಗಳಲ್ಲಿ ಔಟಾಗದೆ 51) ತಲಾ ಅರ್ಧಶತಕ ಬಾರಿಸಿ ತಂಡ ಕಡಿಮೆ ಮೊತ್ತಕ್ಕೆ ಕುಸಿಯದಂತೆ ಕಾಪಾಡಿದರು. ಹರ್ಲಿನ್ ಡಿಯೋಲ್ 31 ರನ್ ಕೊಡುಗೆ ನೀಡಿದರು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಡೆಲ್ಲಿ 18.4 ಓವರಲ್ಲಿ 136 ರನ್‌ಗೆ ಆಲೌಟಾಗಿ ಸೋಲೊಪ್ಪಿಕೊಂಡಿತು. ಮೆಗ್ ಲ್ಯಾನಿಂಗ್(18), ಶಫಾಲಿ ವರ್ಮಾ(08), ಜೆಮಿಮಾ ರೋಡ್ರಿಗ್್ಸ(01) ವಿಫಲರಾದರೂ ಮಾರಿಝಾನ್ ಕಾಪ್(36)ರ ಹೋರಾಟ ತಂಡಕ್ಕೆ ಗೆಲುವಿನ ಆಸೆ ಹುಟ್ಟಿಸಿತು. ಕೊನೆಯಲ್ಲಿ ಅರುಂಧತಿ(25) ಹೋರಾಡಿದರೂ ತಂಡಕ್ಕೆ ಗೆಲುವು ದಕ್ಕಲಿಲ್ಲ. ಗಾಡ್ರ್ನರ್, ತನುಜಾ, ಕಿಮ್ ಗಾರ್ಥ್ ತಲಾ 2 ವಿಕೆಟ್ ಕಿತ್ತರು.
ಸದ್ಯ ಮುಂಬೈ ಇಂಡಿಯನ್ಸ್ ತಂಡವು ಆಡಿದ 5 ಪಂದ್ಯಗಳಲ್ಲಿ 10 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲೇ ಭದ್ರವಾಗಿದ್ದು, ಮೊದಲ ತಂಡವಾಗಿ ಪ್ಲೇ ಆಫ್ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡವು ಆಡಿದ 6 ಪಂದ್ಯಗಳಲ್ಲಿ 4 ಗೆಲುವು ಹಾಗೂ 2 ಸೋಲು ಸಹಿತ 8 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲೇ ಉಳಿದುಕೊಂಡಿದೆ. ಇನ್ನು ಯುಪಿ ವಾರಿಯರ್ಸ್ ಹಾಗೂ ಗುಜರಾತ್ ಜೈಂಟ್ಸ್ ತಂಡಗಳು ತಲಾ ಅಂಕಗಳೊಂದಿಗೆ ಮೂರು ಹಾಗೂ ನಾಲ್ಕನೇ ಸ್ಥಾನ ಪಡೆದಿವೆ. ಇನ್ನು ಸ್ಮೃತಿ ಮಂಧನಾ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಆಡಿದ 6 ಪಂದ್ಯಗಳಲ್ಲಿ ಕೇವಲ ಒಂದು ಗೆಲುವಿನೊಂದಿಗೆ 2 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ಉಳಿದುಕೊಂಡಿದೆ.
WPL 2023: RCB ತಂಡಕ್ಕೆ ಧೈರ್ಯ ತುಂಬಿದ ವಿರಾಟ್ ಕೊಹ್ಲಿ..! ಗೆಲುವಿನ ಖಾತೆ ತೆರೆದ ಬೆಂಗಳೂರು
ಸೂಪರ್ ಶನಿವಾರ ಡಬಲ್ ಫೈಟ್:
ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯ ಡಬಲ್ ಹೆಡ್ಡರ್ ಪಂದ್ಯಗಳ ಪೈಕಿ ಶನಿವಾರ ಮೊದಲ ಪಂದ್ಯದಲ್ಲಿಂದು ಮುಂಬೈ ಇಂಡಿಯನ್ಸ್ ತಂಡವು ಯುಪಿ ವಾರಿಯರ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕೆ ನವಿ ಮುಂಬೈನ ಡಿವೈ ಪಾಟೀಲ್ ಮೈದಾನ ಆತಿಥ್ಯವನ್ನು ವಹಿಸಿದೆ. ಇನ್ನು ಮತ್ತೊಂದು ಪಂದ್ಯದಲ್ಲಿ ಸ್ಮೃತಿ ಮಂಧನಾ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗುಜರಾತ್ ಜೈಂಟ್ಸ್ ತಂಡವನ್ನು ಎದುರಿಸಲಿದ್ದು, ಈ ಪಂದ್ಯಕ್ಕೆ ಇಲ್ಲಿನ ಬ್ರೆಬೋರ್ನ್ ಮೈದಾನ ಆತಿಥ್ಯವನ್ನು ವಹಿಸಲಿದೆ.
ಸ್ಕೋರ್:
ಗುಜರಾತ್ 20 ಓವರಲ್ಲಿ 147/4(ವೂಲ್ವಾರ್ಚ್ 57, ಗಾಡ್ರ್ನರ್ 51, ಜೊನಾಸೆನ್ 2-38)
ಡೆಲ್ಲಿ 18.4 ಓವರಲ್ಲಿ 136/10(ಕಾಪ್ 36, ಅರುಂಧತಿ 25, ಗಾರ್ಥ್ 2-18, ಗಾಡ್ರ್ನರ್ 2-19)
