WPL 2023 ನಾಯಕಿ ಹರ್ಮನ್‌ಪ್ರೀತ್ ಅಬ್ಬರ, ಗುಜರಾತ್‌ಗೆ 208 ರನ್ ಟಾರ್ಗೆಟ್!
ನಾಯಕಿ ಹರ್ಮನ್‌ಪ್ರೀತ್ ಕೌರ್ ಸ್ಫೋಟಕ ಬ್ಯಾಟಿಂಗ್, ಹೈಲಿ ಮ್ಯಾಥ್ಯೂಸ್ ಇನ್ನಿಂಗ್ಸ್‌ನಿಂದ ಮೊದಲ ಉದ್ಘಾಟನಾ ಪಂದ್ಯದಲ್ಲಿ ರನ್ ಮಳೆ ಸುರಿದಿದೆ. ಮುಂಬೈ ಇಂಡಿಯನ್ಸ್ ಅಬ್ಬರದ ಮೂಲಕ ಗುಜರಾಟ್ ಜೈಂಟ್ಸ್‌ಗೆ 208 ರನ್ ಟಾರ್ಗೆಟ್ ನೀಡಿದೆ.
ಮುಂಬೈ(ಮಾ.04): ಮಹಿಳಾ ಪ್ರಿಮಿಯರ್ ಲೀಗ್ ಟೂರ್ನಿಯ ಮೊದಲ ಪಂದ್ಯದವೇ ಕುತೂಹಲ ಕೆರಳಿಸಿದೆ. ಮುಂಬೈ ನಾಯಕಿ ಸ್ಮೃತಿ ಮಂಧನಾ ಹೊಡಿಬಡಿ ಆಟ, ಹೀಲೇ ಮಾಥ್ಯೂಸ್ ಅಬ್ಬರ, ಅಮೆಲಿಯಾ ಕೇರ್ ಜೊತೆಯಾಟದಿಂದ ಗುಜರಾತ್ ಜೈಂಟ್ಸ್ ವಿರುದ್ಧ ವಿಕೆಟ್ 5 ನಷ್ಟಕ್ಕೆ 207 ರನ್ ಸಿಡಿಸಿದೆ. ಮಹಿಳಾ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಬೃಹತ್ ಮೊತ್ತ ಪೇರಿಸಿದೆ. ಇದೀಗ ಗುಜರಾತ್ ಜೈಂಟ್ಸ್ ತಂಡ ಚೇಸಿಂಗ್ ವೇಳೆ ಕಠಿಣ ಸವಾಲು ಎದುರಾಗಲಿದೆ.
ಟಾಸ್ ಸೋತು ಬ್ಯಾಟಿಂಗ್ ಇಳಿದ ಮುಂಬೈ ಇಂಡಿಯನ್ಸ್ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಯಾಸ್ತಿಕ ಭಾಟಿಯಾ ಕೇವಲ 1 ರನ್ ಸಿಡಿಸಿ ನಿರ್ಗಮಿಸಿದರು. ಗುಜರಾತ್‌ನ ತನುಜಾ ಕನ್ವರ್ ಮಹಿಳಾ ಐಪಿಎಲ್ ಟೂರ್ನಿಯಲ್ಲಿ ಚೊಚ್ಚಲ ವಿಕೆಟ್ ಪಡೆದ ಸಾಧನೆ ಮಾಡಿದರು. 15 ರನ್‌ಗೆ ಮೊದಲ ವಿಕೆಟ್ ಕಳೆದುಕೊಂಡ ಮುಂಬೈ ಇಂಡಿಯನ್ಸ್ ತಂಡಕ್ಕೆ ಹೀಲೆ ಮ್ಯಾಥ್ಯೂಸ್ ಹಾಗೂ ನ್ಯಾಟ್ ಸ್ಕಿವಿಯರ್ ಬ್ರಂಟ್ ಜೊತೆಯಾಟ ನೆರವಾಯಿತು.
ನ್ಯಾಟ್ ಸ್ಕಿವಿಯರ್ ಬ್ರಂಟ್ 18 ಎಸೆತದಲ್ಲಿ 23 ರನ್ ಸಿಡಿಸಿ ನಿರ್ಗಮಿಸಿದರು. ಹೀಲೆ ಮ್ಯಾಥ್ಯೂಸ್ 31 ಎಸೆತದಲ್ಲಿ 3 ಬೌಂಡರಿ ಹಾಗೂ 4 ಸಿಕ್ಸರ್ ಮೂಲಕ 47 ರನ್ ಸಿಡಿಸಿ ಔಟಾದರು. ಕೇವಲ 3 ರನ್‌ಗಳಿಂದ ಅರ್ಧಶತಕ ಮಿಸ್ ಮಾಡಿಕೊಂಡಿಡರು. ಅಷ್ಟರಲ್ಲೇ ನಾಯಕಿ ಹರ್ಮನ್‌ಪ್ರೀತ್ ಕೌರ್ ಅಬ್ಬರ ಆರಂಭಗೊಂಡಿತು. ಸ್ಫೋಟಕ ಬ್ಯಾಟಿಂಗ್ ಮೂಲಕ ಕೌರ್ ಮಿಂಚಿದರು.
ಕೌರ್ ಕೇವಲ 30 ಎಸೆತದಲ್ಲಿ 14 ಬೌಂಡರಿ ಮೂಲಕ 65 ರನ್ ಸಿಡಿಸಿದರು. ಕೌರ್ ಇನ್ನಿಂಗ್ಸ್ ಮುಂಬೈ ತಂಡವನ್ನು ಸುಸ್ಥಿಯಲ್ಲಿಟ್ಟಿತು. ಇಷ್ಟೇ ಅಲ್ಲ ಮುಂಬೈ ತಂಡ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿತು. ಕೌರ್ ಬಳಿಕ ಅಮೆಲಿಯಾ ಕೇರ್ ಹಾಗೂ ಪೂಜಾ ವಸ್ತ್ರಾಕರ್ ಜೊತೆಯಾಟ ನೆರವಾಯಿತು. ಪೂಜಾ 15 ರನ್ ಸಿಡಿಸಿ ಔಟಾದರು. ಅಮೆಲಿಯಾ ಕೇರ್ ಅಜೇಯ 45 ರನ್ ಸಿಡಿಸಿದರು. ಇಸ್ಸಿ ವೊಂಗ್ ಸಿಕ್ಸರ್ ಮೂಲಕ 6 ರನ್ ಸಿಡಿಸಿದರು. ಇದರೊಂದಿಗೆ ಮುಂಬೈ ಇಂಡಿಯನ್ಸ್ ಮಹಿಳಾ ತಂಡ 5 ವಿಕೆಟ್ ನಷ್ಟಕ್ಕೆ 207 ರನ್ ಸಿಡಿಸಿತು.