ಶ್ರೀಲಂಕಾ 2023ರಲ್ಲಿ ಆಡಿರುವ 22 ಪಂದ್ಯಗಳಲ್ಲಿ 14ರಲ್ಲಿ ಗೆದ್ದಿದೆ. ಬಹುತೇಕ ಎಲ್ಲಾ ಪಂದ್ಯಗಳಲ್ಲೂ ಎದುರಾಳಿ ತಂಡಗಳನ್ನು ಆಲೌಟ್ ಮಾಡಿದೆ. ಮೆಂಡಿಸ್, ಪತಿರನ, ಅಸಲಂಕ, ವೆಲ್ಲಲಗೆ ತಂಡದ ಟ್ರಂಪ್‌ಕಾರ್ಡ್. ಮಧುಶನಕ, ಶಾನಕ, ಲಹಿರು ಕುಮಾರ ಮೇಲೂ ಹೆಚ್ಚಿನ ನಿರೀಕ್ಷೆ ಇದೆ.

ನವದೆಹಲಿ(ಅ.07): ಗಾಯಾಳುಗಳ ಸಮಸ್ಯೆ ನಡುವೆಯೇ ಈ ಬಾರಿ ವಿಶ್ವಕಪ್‌ನಲ್ಲಿ ಕಣಕ್ಕಿಳಿಯಲಿರುವ ಶ್ರೀಲಂಕಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಶನಿವಾರ ಪರಸ್ಪರ ಮುಖಾಮುಖಿಯಾಗಲಿವೆ. ಈ ಪಂದ್ಯ ದ.ಆಫ್ರಿಕಾದ ಬ್ಯಾಟರ್‌ಗಳು ಹಾಗೂ ಶ್ರೀಲಂಕಾದ ಬೌಲರ್‌ಗಳ ನಡುವಿನ ಹಣಾಹಣಿ ಎಂದೇ ಕರೆಸಿಕೊಳ್ಳುತ್ತಿದೆ. 

ಆಕ್ರಮಣಕಾರಿ ಬ್ಯಾಟರ್‌ಗಳಾದ ಡೇವಿಡ್ ಮಿಲ್ಲರ್, ಹೆನ್ರಿಚ್ ಕ್ಲಾಸೆನ್, ಕ್ವಿಂಟನ್ ಡಿ ಕಾಕ್, ಏಯ್ಡನ್ ಮಾರ್ಕ್‌ರಮ್‌ರನ್ನು ಲಂಕಾ ಬೌಲರ್ ಗಳು ಎಷ್ಟರ ಮಟ್ಟಿಗೆ ಕಟ್ಟಿಹಾಕಲಿದ್ದಾರೆ ಎಂಬುದರ ಮೇಲೆ ಫಲಿತಾಂಶ ನಿರ್ಧಾರವಾಗುವ ಸಾಧ್ಯತೆ ಹೆಚ್ಚು. ದ.ಆಫ್ರಿಕಾ ಪ್ರಮುಖ ವೇಗಿಗಳಾದ ನೋಕಿಯಾ, ಮಗಾಲ ಅನುಪಸ್ಥಿತಿಯಲ್ಲಿ ಕಣಕ್ಕಿಳಿಯಲಿದೆ. ದಕ್ಷಿಣ ಆಫ್ರಿಕಾದ ಬ್ಯಾಟರ್‌ಗಳು ಏಕಾಂಗಿಯಾಗಿ ಪಂದ್ಯದ ದಿಕ್ಕನ್ನೇ ಬದಲಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ.

Asian Games 2023: ಫೈನಲ್‌ನಲ್ಲಿ ಆಫ್ಘಾನ್ ಎದುರು ಟಾಸ್ ಗೆದ್ದ ಟೀಂ ಇಂಡಿಯಾ ಬೌಲಿಂಗ್ ಆಯ್ಕೆ

ಅತ್ತ ಶ್ರೀಲಂಕಾ 2023ರಲ್ಲಿ ಆಡಿರುವ 22 ಪಂದ್ಯಗಳಲ್ಲಿ 14ರಲ್ಲಿ ಗೆದ್ದಿದೆ. ಬಹುತೇಕ ಎಲ್ಲಾ ಪಂದ್ಯಗಳಲ್ಲೂ ಎದುರಾಳಿ ತಂಡಗಳನ್ನು ಆಲೌಟ್ ಮಾಡಿದೆ. ಮೆಂಡಿಸ್, ಪತಿರನ, ಅಸಲಂಕ, ವೆಲ್ಲಲಗೆ ತಂಡದ ಟ್ರಂಪ್‌ಕಾರ್ಡ್. ಮಧುಶನಕ, ಶಾನಕ, ಲಹಿರು ಕುಮಾರ ಮೇಲೂ ಹೆಚ್ಚಿನ ನಿರೀಕ್ಷೆ ಇದೆ. ಇತ್ತೀಚೆಗಷ್ಟೇ ಮುಕ್ತಾಯವಾದ ಏಷ್ಯಾಕಪ್ ಟೂರ್ನಿಯಲ್ಲಿ ಲಂಕಾ ತಂಡವು ಫೈನಲ್ ಪ್ರವೇಶಿಸಿತ್ತು. 2023ರ ಏಕದಿನ ವಿಶ್ವಕಪ್‌ಗೆ ನೇರ ಅರ್ಹತೆ ಪಡೆಯಲು ವಿಫಲವಾಗಿದ್ದ ಲಂಕಾ ತಂಡವು ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಅದ್ಭುತ ಪ್ರದರ್ಶನ ತೋರಿ ಪ್ರಧಾನ ಸುತ್ತಿಗೆ ಲಗ್ಗೆಯಿಟ್ಟಿದೆ. ಇದೀಗ ಭಾರತದಲ್ಲಿ ಹರಿಣಗಳನ್ನು ಕಟ್ಟಿಹಾಕಲು ಲಂಕಾ ಪಡೆ ಸಜ್ಜಾಗಿದೆ.

Asian Games 2023: ಫೈನಲ್‌ನಲ್ಲಿ ಆಫ್ಘಾನ್ ಎದುರು ಟಾಸ್ ಗೆದ್ದ ಟೀಂ ಇಂಡಿಯಾ ಬೌಲಿಂಗ್ ಆಯ್ಕೆ

ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ದಕ್ಷಿಣ ಆಫ್ರಿಕಾ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಿದ್ದು, ಈ ಪೈಕಿ ದಕ್ಷಿಣ ಆಫ್ರಿಕಾ ತಂಡವು ಕೊಂಚ ಮೇಲುಗೈ ಸಾಧಿಸಿದೆ. 80 ಪಂದ್ಯಗಳ ಪೈಕಿ 45 ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಗೆಲುವಿನ ನಗೆ ಬೀರಿದ್ದರೆ, ಶ್ರೀಲಂಕಾ ತಂಡವು 33 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ. ಇನ್ನು ಒಂದು ಪಂದ್ಯ ಟೈ ಆಗಿದ್ದರೆ, ಇನ್ನೊಂದು ಪಂದ್ಯದಲ್ಲಿ ಯಾವುದೇ ಫಲಿತಾಂಶವಿಲ್ಲದೇ ರದ್ದಾಗಿತ್ತು.

ಸಂಭವನೀಯ ಆಟಗಾರರ ಪಟ್ಟಿ ಹೀಗಿದೆ:

ದಕ್ಷಿಣ ಆಫ್ರಿಕಾ:

ತೆಂಬ ಬವುಮಾ(ನಾಯಕ), ಕ್ವಿಂಟನ್ ಡಿ ಕಾಕ್,ವ್ಯಾನ್ ಡರ್ ಡುಸ್ಸೆನ್, ಏಯ್ಡನ್ ಮಾರ್ಕ್‌ರಮ್, ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಯಾನ್ಸನ್, ಗೋಟ್ಜೀ, ಆಂಡಿಲೇ ಫೆಲುಕ್ವಾಯೊ/ ತಬ್ರೀಜ್ ಶಮ್ಸಿ, ಕೇಶವ್ ಮಹರಾಜ್, ಕಗಿಸೋ ರಬಾಡ

ಶ್ರೀಲಂಕಾ:
ಕುಸಾಲ್ ಪೆರೆರಾ, ಪಥುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್, ಸಮರವಿಕ್ರಮ, ಚರಿತ್ ಅಸಲಂಕ, ಧನಂಜಯ ಡಿ ಸಿಲ್ವಾ, ದಶುನ್ ಶಾನಕ(ನಾಯಕ), ವೆಲ್ಲಲಗೆ, ಹೇಮಂತ, ಮಧುಶನಕ, ಲಹಿರು ಕುಮಾರ.