* ಭಾರತ-ಇಂಗ್ಲೆಂಡ್ ನಡುವಿನ ಮಹಿಳಾ ಟೆಸ್ಟ್ ಕ್ರಿಕೆಟ್ ಭರ್ಜರಿ ಆರಂಭ* ಮೊದಲ ದಿನವೇ 269 ರನ್‌ ಬಾರಿಸಿದ ಇಂಗ್ಲೆಂಡ್ ಮಹಿಳಾ ತಂಡ* ಕೇವಲ 5 ರನ್ ಅಂತರದಲ್ಲಿ ಶತಕವಂಚಿತರಾದ ಹೀಥರ್ ನೈಟ್

ಬ್ರಿಸ್ಟಾಲ್‌(ಜೂ.17): ನಾಯಕಿ ಹೀಥರ್ ನೈಟ್‌(95) ಶತಕ ವಂಚಿತ ಬ್ಯಾಟಿಂಗ್ ಹಾಗೂ ಆರಂಭಿಕ ಬ್ಯಾಟರ್ ಟಾಮಿ ಬಿಯುಮೌಂಟ್(66) ಸಮಯೋಚಿತ ಅರ್ಧಶತಕದ ನೆರವಿನಿಂದ ಇಂಗ್ಲೆಂಡ್ ಮಹಿಳಾ ಟೆಸ್ಟ್ ತಂಡವು ಮೊದಲ ದಿನಾದಾಟದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 269 ರನ್‌ ಬಾರಿಸಿದೆ. ಈ ಮೂಲಕ ಏಕೈಕ ಟೆಸ್ಟ್‌ನಲ್ಲಿ ಮಿಥಾಲಿ ರಾಜ್ ನೇತೃತ್ವದ ಭಾರತ ತಂಡದೆದುರು ದಿಟ್ಟ ಆರಂಭ ಪಡೆದಿದೆ.

ಹೌದು, ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್ ಮಹಿಳಾ ತಂಡವು ಉತ್ತಮ ಆರಂಭ ಪಡೆಯಿತು. ಮೊದಲ ವಿಕೆಟ್‌ಗೆ ವಿನ್‌ಫಿಲ್ಡ್ ಹಿಲ್ ಹಾಗೂ ಬಿಯುಮೌಂಟ್ ಜೋಡಿ 69 ರನ್‌ಗಳ ಜತೆಯಾಟವಾಡುವ ಮೂಲಕ ಉತ್ತಮ ಆರಂಭ ಒದಗಿಸಿಕೊಟ್ಟರು. ಈ ಜೋಡಿಯನ್ನು ಬೇರ್ಪಡಿಸುಲ್ಲಿ ಪೂಜಾ ವಸ್ತ್ರಾಕರ್ ಯಶಸ್ವಿಯಾದರು. ಬಳಿಕ ಹೀಥರ್ ನೈಟ್ ಹಾಗೂ ಬಿಯುಮೌಂಟ್ ಕೂಡಾ ಉತ್ತಮ ಜತೆಯಾಟದ ಮೂಲಕ ತಂಡದ ಮೊತ್ತವನ್ನು 150ರ ಸಮೀಪ ಕೊಂಡೊಯ್ಯದರು. ಹೀಥರ್ ನೈಟ್ 95, ಬಿಯುಮೌಂಟ್ 66 ಹಾಗೂ ಸ್ಕೀವರ್ 42 ರನ್‌ ಬಾರಿಸುವ ಮೂಲಕ ತಂಡ ಬೃಹತ್ ಮೊತ್ತದತ್ತ ದಾಪುಗಾಲು ಹಾಕಲು ನೆರವಾದರು.

Scroll to load tweet…

ಮಹಿಳಾ ಟೆಸ್ಟ್‌ ಕ್ರಿಕೆಟ್: ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ

ಮಿಂಚಿದ ಸ್ನೆಹ್ ರಾಣಾ, ದೀಪ್ತಿ ಶರ್ಮಾ: ಟಾಸ್ ಗೆದ್ದು ಬೃಹತ್ ಮೊತ್ತದತ್ತ ದಾಪುಗಾಲಿಡುತ್ತಿದ್ದ ಇಂಗ್ಲೆಂಡ್ ತಂಡಕ್ಕೆ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡುತ್ತಿರುವ ಸ್ನೆಹ್ ರಾಣಾ ಹಾಗೂ ದೀಪ್ತಿ ಶರ್ಮಾ ಶಾಕ್ ನೀಡಿದರು. ಸ್ನೆಹ್ ರಾಣಾ 3 ವಿಕೆಟ್ ಪಡೆದರೆ, ದೀಪ್ತಿ ಶರ್ಮಾ 2 ವಿಕೆಟ್ ಕಬಳಿಸಿ ಮಿಂಚಿದರು.