ಸ್ಮೃತಿ ಮಂಧನಾ ಸ್ಫೋಟಕ ಬ್ಯಾಟಿಂಗ್‌ನಿಂದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಭಾರತ 156 ರನ್ ಸಿಡಿಸಿದೆ. ಈ ಮೂಲಕ ಗೆಲುವಿನ ವಿಶ್ವಾಸದಲ್ಲಿದೆ. ಈ ಟಾರ್ಗೆಟ್‌ನ್ನು ಐರ್ಲೆಂಡ್ ಚೇಸ್ ಮಾಡುತ್ತಾ? 

ಜಾರ್ಜ್ ಪಾರ್ಕ್(ಫೆ.20): ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತಕ್ಕೆ ಇಂದು ಮಹತ್ವದ ಪಂದ್ಯ. ಕಳೆದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಮುಗ್ಗರಿಸಿದ ಕಾರಣ ಇಂದಿನ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಗೆಲ್ಲಲೇಬೇಕು. ಈ ಮಹತ್ವದ ಪಂದ್ಯದಲ್ಲಿ ಸ್ಮೃತಿ ಮಂಧಾನ ದಿಟ್ಟ ಹೋರಾಟ ನೀಡಿ 87 ರನ್ ಸಿಡಿಸಿದ್ದಾರೆ. ಇದರೊಂದಿಗೆ ಐರ್ಲೆಂಡ್‌ಗೆ 6 ವಿಕೆಟ್ ನಷ್ಟಕ್ಕೆ 155 ರನ್ ಸಿಡಿಸಿದೆ. 

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಭಾರತ ಮಹಿಳಾ ತಂಡ ಉತ್ತಮ ಆರಂಭ ಪಡೆಯಿತು. ಶೆಫಾಲಿ ವರ್ಮಾ ಹಾಗೂ ಸ್ಮೃತಿ ಮಂಧನಾ ಮೊದಲ ವಿಕೆಟ್‌ಗೆ 62 ರನ್ ಜೊತೆಯಾಟ ನೀಡಿದರು. ಶೆಫಾಲಿ ವರ್ಮಾ 24 ರನ್ ಸಿಡಿಸಿ ಔಟಾದರು. ಆದರೆ ಮಂಧನಾ ಹೋರಾಟ ಮುಂದುವರಿಸಿದರು. ಇತ್ತ ನಾಯಕಿ ಹರ್ಮನ್‌ಪ್ರೀತ್ ಕೌರ್ 13 ರನ್ ಸಿಡಿಸಿ ಮತ್ತೆ ನಿರಾಸೆ ಅನುಭವಿಸಿದರು.

ಸ್ಮೃತಿ ಮಂಧನಾಗೆ ಆರ್‌ಸಿಬಿ ಮಹಿಳಾ ತಂಡದ ನಾಯಕಿ ಪಟ್ಟ; ಶುಭ ಕೋರಿದ ಕೊಹ್ಲಿ, ಫಾಫ್ ಡು ಪ್ಲೆಸಿಸ್

ಕಳೆದ ಪಂದ್ಯದಲ್ಲಿ ಅಬ್ಬರಿಸಿದ ರಿಚಾ ಘೋಷ್ ಶೂನ್ಯಕ್ಕೆ ಔಟಾದರು. ಜೇಮಿ ರೋಡ್ರಿಗೆಸ್ 19 ರನ್ ಕಾಣಿಕೆ ನೀಡಿದರು. ದೀಪ್ತಿ ಶರ್ಮಾ ಡಕೌಟ್ ಆದರು. ಇತ್ತ ಮಂಧಾನ 56 ಎಸೆತದಲ್ಲಿ 9 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 87 ರನ್ ಸಿಡಿಸಿ ಅಬ್ಬರಿಸಿದರು. ಈ ಮೂಲಕ ಭಾರತ ಮಹಿಳಾ ತಂಡ 155 ರನ್ ಸಿಡಿಸಿತು.

ಕಳೆದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ದ ಸೋಲು
ಸ್ಮೃತಿ ಮಂಧನಾ, ರಿಚಾ ಘೋಷ್‌ ಹೋರಾ​ಟದ ಹೊರ​ತಾ​ಗಿ​ಯೂ ಐಸಿಸಿ ಮಹಿಳಾ ಟಿ20 ವಿಶ್ವ​ಕ​ಪ್‌​ನಲ್ಲಿ ಕಳೆದ ಬಾರಿ ರನ್ನ​ರ್‌-ಅಪ್‌ ಭಾರತ ತಂಡ ಇಂಗ್ಲೆಂಡ್‌ ವಿರುದ್ಧ 11 ರನ್‌ ಸೋಲ​ನು​ಭ​ವಿ​ಸಿದ್ದು, ಸೆಮಿ​ಫೈನಲ್‌ ಹಾದಿ​ಯನ್ನು ಕಠಿ​ಣ​ಗೊ​ಳಿ​ಸಿದೆ. ತಂಡ ಸದ್ಯ 3 ಪಂದ್ಯ​ಗ​ಳಲ್ಲಿ 4 ಅಂಕ​ಗ​ಳೊಂದಿಗೆ 2ನೇ ಸ್ಥಾನ​ದ​ಲ್ಲಿದ್ದು, ಕೊನೆ ಪಂದ್ಯ​ದಲ್ಲಿ ಐರ್ಲೆ​ಂಡ್‌ ವಿರು​ದ್ಧ ಗೆಲ್ಲ​ಲೇ​ಬೇ​ಕಾದ ಒತ್ತ​ಡಕ್ಕೆ ಒಳ​ಗಾ​ಗಿದೆ. ಇಂಗ್ಲೆಂಡ್‌ ಹ್ಯಾಟ್ರಿಕ್‌ ಜಯ​ದೊಂದಿಗೆ ಸೆಮೀ​ಸ್‌​ನಲ್ಲಿ ಬಹು​ತೇಕ ಸ್ಥಾನ ಖಚಿ​ತ​ಪ​ಡಿ​ಸಿ​ಕೊಂಡಿ​ದೆ.

Women's T20 World cup ಭಾರತ ವಿರುದ್ದ ಗೆದ್ದ ಇಂಗ್ಲೆಂಡ್ ಸೆಮಿಫೈನಲ್ ಪ್ರವೇಶ, ಐರ್ಲೆಂಡ್ ಪಂದ್ಯದತ್ತ ಎಲ್ಲರ ಚಿತ್ತ

ಮೊದಲು ಬ್ಯಾಟ್‌ ಮಾಡಿದ ಇಂಗ್ಲೆಂಡ್‌ ರೇಣುಕಾ ಸಿಂಗ್‌ ಮಾರಕ ದಾಳಿ ಹೊರ​ತಾ​ಗಿಯೂ 7 ವಿಕೆ​ಟ್‌ಗೆ 151 ರನ್‌ ಗಳಿ​ಸಿತು. ಭಾರತ 5 ವಿಕೆ​ಟ್‌ಗೆ 140 ರನ್‌ ಗಳಿಸಿ ಸೋಲೊ​ಪ್ಪಿ​ಕೊಂಡಿತು. ಶಫಾಲಿ ವರ್ಮಾ​(08), ಜೆಮಿಮಾ ರೋಡ್ರಿ​ಗ್‌್ಸ​(13), ಹರ್ಮ​ನ್‌​ಪ್ರೀ​ತ್‌​(04) ವೈಫಲ್ಯ ತಂಡಕ್ಕೆ ಮುಳು​ವಾ​ಯಿತು. ಸ್ಮೃತಿ 41 ಎಸೆ​ತ​ಗ​ಳಲ್ಲಿ 52 ರನ್‌ ಸಿಡಿ​ಸಿ​ದರೆ, ಕೊನೆ​ಯಲ್ಲಿ ಅಬ್ಬ​ರಿ​ಸಿದ ರಿಚಾ 34 ಎಸೆ​ತ​ಗ​ಳಲ್ಲಿ 47 ರನ್‌ ಸಿಡಿ​ಸಿ​ದರೂ ತಂಡಕ್ಕೆ ಗೆಲುವು ತಂದು​ಕೊ​ಡಲು ಆಗ​ಲಿ​ಲ್ಲ.