Asianet Suvarna News Asianet Suvarna News

ಮಹಿಳಾ ಕ್ರಿಕೆಟ್: ಆಫ್ರಿಕಾ ವಿರುದ್ಧ ಭಾರತಕ್ಕೆ ಸೋಲು

ಲಾಕ್‌ಡೌನ್‌ ಬಳಿಕ ಭಾರತ ಮಹಿಳಾ ತಂಡ ಆಡಿದ ಮೊದಲ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು ಆಘಾತಕಾರಿ ಸೋಲು ಕಂಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Womens ODI Cricket South Africa Thrashed India by 8 Wickets in Lucknow kvn
Author
Lucknow, First Published Mar 8, 2021, 10:16 AM IST

ಲಖನೌ(ಮಾ.08): ಕೋವಿಡ್‌ ಬಳಿಕ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ಭಾರತ ಮಹಿಳಾ ಕ್ರಿಕೆಟ್‌ ತಂಡ, ದಕ್ಷಿಣ ಆಫ್ರಿಕಾ ವಿರುದ್ಧ ಭಾನುವಾರ ಇಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ 8 ವಿಕೆಟ್‌ಗಳ ಸೋಲು ಅನುಭವಿಸಿತು. 

ಮೊದಲು ಬ್ಯಾಟ್‌ ಮಾಡಿದ ಭಾರತ ಮಹಿಳಾ ತಂಡ ಆರಂಭದಲ್ಲೇ ಜೆಮಿಯಾ ರೋಡ್ರಿಗಸ್‌, ಸ್ಮೃತಿ ಮಂಧನಾ ಹಾಗೂ ಪೂನಂ ರಾವತ್ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು; ಆದರೆ ಮಧ್ಯಮ ಕ್ರಮಾಂಕಲ್ಲಿ ನಾಯಕಿ ಮಿಥಾಲಿ ರಾಜ್‌(50) ಹಾಗೂ ಹರ್ಮನ್‌ಪ್ರೀತ್‌ (40) ಆಕರ್ಷಕ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾದರು. ಇವರಿಬ್ಬರ ಹೋರಾಟದ ಹೊರತಾಗಿಯೂ ಭಾರತ ಮಹಿಳಾ ಕ್ರಿಕೆಟ್‌ ತಂಡ 9 ವಿಕೆಟ್‌ಗೆ 177 ರನ್‌ ಗಳಿಸಿತು. 

6 ನಗರ, ಬೆಂಗಳೂರಲ್ಲಿ 10 ಪಂದ್ಯ; IPL 2021 ಟೂರ್ನಿಯಲ್ಲಿದೆ ಕೆಲ ಬದಲಾವಣೆ!

ಇನ್ನು ಸಾಧಾರಣ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ 40.1 ಓವರಲ್ಲಿ 2 ವಿಕೆಟ್‌ ಕಳೆದುಕೊಂಡು ಗುರಿ ತಲುಪಿತು. ಲೀ (83*) ಹಾಗೂ ವೂಲ್ವಾರ್ಟ್‌ (80) ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು. ಭಾರತ ಪರ ಜೂಲನ್ ಗೋಸ್ವಾಮಿ 2 ವಿಕೆಟ್‌ ಕಬಳಿಸಿದರು. ಉಳಿದ ಬೌಲರ್‌ಗಳು ಪರಿಣಾಮಕಾರಿ ದಾಳಿ ನಡೆಸಲು ವಿಫಲರಾದರು.

ಸ್ಕೋರ್‌: 
ಭಾರತ 177/9
ದ.ಆಫ್ರಿಕಾ 178/2

Follow Us:
Download App:
  • android
  • ios