ನವದೆಹಲಿ(ಜ.30): ಭಾರತ ಮಹಿಳಾ ಏಕದಿನ ಕ್ರಿಕೆಟ್‌ ತಂಡದ ನಾಯಕಿ ಮಿಥಾಲಿ ರಾಜ್‌ ಜೀವನಾಧಾರಿತ ಸಿನಿಮಾ ಫೆ.5, 2021ಕ್ಕೆ ತೆರೆಗೆ ಬರಲಿದೆ ಎಂದು ಚಿತ್ರತಂಡ ಘೋಷಿಸಿದೆ. ಬುಧವಾರ ಚಿತ್ರದ ಮೊದಲ ಪೋಸ್ಟರ್‌ ಬಿಡುಗಡೆಯಾಯಿತು. ಮಿಥಾಲಿ ಪಾತ್ರದಲ್ಲಿ ನಟಿ ತಾಪ್ಸಿ ಪನ್ನು ಕಾಣಿಸಿಕೊಳ್ಳಲಿದ್ದಾರೆ. ಪೋಸ್ಟರ್‌ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ: ಬರ​ಲಿದೆ ಮಿಥಾಲಿ ರಾಜ್‌ ಜೀವ​ನಾ​ಧಾ​ರಿತ ಸಿನಿ​ಮಾ!

ಮಿಥಾಲಿ ರಾಜ್ 1999ರಲ್ಲಿ ಭಾರತ ಏಕದಿನ ತಂಡಕ್ಕೆ ಪದಾರ್ಪಣೆ ಮಾಡಿದರು. 2002ರಲ್ಲಿ ಟೆಸ್ಟ್ ಹಾಗೂ 2006ರಲ್ಲಿ ಟಿ20 ಕ್ರಿಕೆಟ್‌ಗೆ  ಪದಾರ್ಪಣೆ ಮಾಡಿದರು. ಭಾರತ ಮಹಿಳಾ ತಂಡದ ಯಶಸ್ವಿ ನಾಯಕಿ ಅನ್ನೋ ಬಿರುದು ಪಡೆದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 6888 ರನ್ ಸಿಡಿಸಿದ ಏಕೈಕ ಮಹಿಳಾ ಬ್ಯಾಟ್ಸ್‌ಮನ್ ಅನ್ನೋ ದಾಖಲೆ ಬರದಿದ್ದಾರೆ.

ಇದನ್ನೂ ಓದಿ: ದಕ್ಷಿಣ ಆಫ್ರಿಕಾ ವಿರುದ್ಧ ಮಿಥಾಲಿ ಪಡೆಗೆ 2-0 ಸರಣಿ ಜಯ

ಮಿಥಾಲಿ ನಾಯಕತ್ವದಲ್ಲಿ ಭಾರತ ಮಹಿಳಾ ತಂಡ ವಿಶ್ವಕಪ್ ಟೂರ್ನಿಯಲ್ಲಿ 2 ಬಾರಿ ಫೈನಲ್ ಪ್ರವೇಶಿಸಿ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿ ಪಟ್ಟುಕೊಂಡಿದೆ. ಭಾರತ ಕಂಡ ಪ್ರತಿಭಾನ್ವಿತ ಕ್ರಿಕೆಟ್ ಆಟಗಾರ್ತಿಯ ಜೀವನ ಚರಿತ್ರೆ ಇದೀಗ ಬಾರಿ ಕುತೂಹಲ ಮೂಡಿಸಿದೆ.