ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಿಂದ ವಿಶ್ರಾಂತಿ ಪಡೆದಿದ್ದ ಟೀಂ ಇಂಡಿಯಾ ಪ್ರಮುಖ ಆಟಗಾರರು ಟಿ20 ಪಂದ್ಯಕ್ಕೆ ಕಮ್‌ಬ್ಯಾಕ್ ಖಚಿತವಾಗಿದೆ. ಆದರೆ ಯಾರು ಹೊಗುಳಿಯಲಿದ್ದಾರೆ ಅನ್ನೋ ಕುತೂಹಲಕ್ಕೆ ಇಲ್ಲಿದೆ ಉತ್ತರ.
ಟ್ರಿನಿಡ್ಯಾಡ್(ಜು.29): ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿರುವ ಟೀಂ ಇಂಡಿಯಾ ಇದೀಗ ಟಿ20 ಸರಣಿ ಮೇಲೆ ಕಣ್ಣಿಟ್ಟಿದೆ. ಇಂದಿನಿಂದ 5 ಪಂದ್ಯಗಳ ಟಿ20 ಸರಣಿ ಆರಂಭಗೊಳ್ಳುತ್ತಿದೆ. ಮೊದಲ ಪಂದ್ಯಕ್ಕೆ ಪ್ರಮುಖ ಆಟಗಾರರ ಕಮ್‌ಬ್ಯಾಕ್ ಖಚಿತಗೊಂಡಿದೆ. ಮೊದಲ ಟಿ20 ಪಂದ್ಯಕ್ಕೆ ರೋಹಿತ್ ಶರ್ಮಾ, ದಿನೇಶ್ ಕಾರ್ತಿಕ್, ರಿಷಬ್ ಪಂತ್ ಕಮ್‌ಬ್ಯಾಕ್ ಮಾಡುವುದು ಖಚಿತವಾಗಿದೆ. ಹೀಗಾದಲ್ಲಿ ಯಾರು ತಂಡದಿಂದ ಹೊರಗುಳಿಯಲಿದ್ದಾರೆ ಅನ್ನೋ ಕುತೂಹಲ ಹೆಚ್ಚಾಗಿದೆ. ಟಿ20 ವಿಶ್ವಕಪ್ ದೃಷ್ಟಿಯಿಂದ ವಿಂಡೀಸ್ ವಿರುದ್ದದ 5 ಪಂದ್ಯಗಳ ಟಿ20 ಸರಣಿ ಭಾರತಕ್ಕೆ ಮಹತ್ವದ್ದಾಗಿದೆ. ಸರಣಿಯಿಂದ ಹೊರಬಿದ್ದಿರುವ ಕೆಎಲ್ ರಾಹುಲ್ ಬದಲು ಸಂಜು ಸ್ಯಾಮ್ಸನ್ ತಂಡ ಸೇರಿಕೊಂಡಿದ್ದಾರೆ.
ಟೀಂ ಇಂಡಿಯಾ ಸಂಭವನೀಯ ಪ್ಲೇಯಿಂಗ್ 11
ರೋಹಿತ್ ಶರ್ಮಾ(ನಾಯಕ), ರಿಷಬ್ ಪಂತ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ಕುಲ್ದೀಪ್ ಯಾದವ್, ಹರ್ಷಲ್ ಪಟೇಲ್, ಆವೇಶ್ ಖಾನ್, ಭುವನೇಶ್ವರ್ ಕುಮಾರ್, ಆರ್ ಅಶ್ವಿನ್
Ind vs WI: ಕೆ ಎಲ್ ರಾಹುಲ್ ಔಟ್, ಟೀಂ ಇಂಡಿಯಾಗೆ ಬಲಿಷ್ಠ ಆಟಗಾರ ಸೇರ್ಪಡೆ..!
ವಿಂಡೀಸ್ ವಿರುದ್ದದ ಟಿ20 ಸರಣಿಗೆ ಕಮ್‌ಬ್ಯಾಕ್ ಮಾಡಿರುವ ಆರ್ ಅಶ್ವಿನ್ ತಂಡದಲ್ಲಿ ಸ್ಥಾನ ಪಡೆಯುತ್ತಾರಾ? ಇಲ್ಲಾ ಟೆಸ್ಟ್ ಸರಣಿ ವೇಳೆ ಬೆಂಚ್ ಕಾದಂತೆ ಇರಬೇಕಾ ಅನ್ನೋದು ಸದ್ಯದ ಕುತೂಹಲ. ಇತ್ತ ಇಶಾನ್ ಕಿಶನ್, ದೀಪಕ್ ಹೂಡ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಅರ್ಶದೀಪ್, ರವಿ ಬಿಶ್ನೋಯ್ ಕೂಡ ಪ್ಲೇಯಿಂಗ್ 11ನಲ್ಲಿ ಕಾಣಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.
ಏಕದಿನದ ಸರಣಿಯಲ್ಲಿ ಟೀಂ ಇಂಡಿಯಾಗೆ ಪ್ರಬಲ ಪೈಪೋಟಿ ಎದುರಾಗಿರಲಿಲ್ಲ. ಆದರೆ ಟಿ20 ಸರಣಿಯಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಟೀಂ ಇಂಡಿಯಾ ಲಘುವಾಗಿ ಪರಿಗಣಿಸುವಂತಿಲ್ಲ. ಕಾರಣ ಚುಟುಕು ಕ್ರಿಕೆಟ್‌ನಲ್ಲಿ ವೆಸ್ಟ್ ಇಂಡೀಸ್ ಬಲಿಷ್ಠವಾಗಿದೆ.
ವಿಂಡೀಸ್ ಎದುರು ಜಯಭೇರಿ, ICC ODI Rankings ಭಾರತಕ್ಕೆ ಜಾಕ್‌ಪಾಟ್
ವೆಸ್ಟ್ ಇಂಡೀಸ್ ಸಂಭವನೀಯ ಪ್ಲೇಯಿಂಗ್ 11
ಬ್ರ್ಯಾಂಡನ್ ಕಿಂಗ್, ಕೈಲ್ ಮೇಯರ್ಸ್, ನಿಕೋಲಸ್ ಪೂರನ್(ನಾಯಕ), ಶಿಮ್ರೋನ್ ಹೆಟ್ಮೆಯರ್, ರೊವ್ಮನ್ ಪೊವೆಲ್, ಒಡೆನ್ ಸ್ಮಿತ್, ಜೇಸನ್ ಹೋಲ್ಡರ್, ಅಕೀಲ್ ಹುಸೈನ್, ರೊಮಾರಿಯೋ ಶೆಫರ್ಡ್, ಒಬೆಡ್ ಮೆಕೋಯ್, ಹೈಡೆನ್ ವಾರ್ಶನ್
ಭಾರತ 3-0 ಕ್ಲೀನ್‌ಸ್ವೀಪ್!
ವೆಸ್ಟ್‌ಇಂಡೀಸ್ ವಿರುದ್ಧ ಭಾರತ 3ನೇ ಏಕದಿನ ಪಂದ್ಯದಲ್ಲಿ ಡಕ್ವತ್‌ರ್ ಲೂಯಿಸ್ ನಿಯಮದನ್ವಯ 119 ರನ್‌ಗಳ ಗೆಲುವು ಸಾಧಿಸಿ, ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದೆ. ಮಳೆ ಬಾಧಿತ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟ್ ಮಾಡಿ 36 ಓವರಲ್ಲಿ 3 ವಿಕೆಟ್‌ಗೆ 225 ರನ್ ಕಲೆಹಾಕಿತು. ವಿಂಡೀಸ್‌ಗೆ ಡಕ್ವತ್‌ರ್ ನಿಯಮದ ಪ್ರಕಾರ 35 ಓವರಲ್ಲಿ 257 ರನ್ ಗುರಿ ನಿಗದಿಪಡಿಸಲಾಗಿತ್ತು. ಆತಿಥೇಯ ತಂಡ 26 ಓವರಲ್ಲಿ 137 ರನ್‌ಗೆ ಆಲೌಟ್ ಆಯಿತು. ಭಾರತ ಭರ್ಜರಿ ಗೆಲುವಿನ ಮೂಲಕ 3-0 ಅಂತರದಲ್ಲಿ ಸರಣಿ ಗೆದ್ದುಕೊಂಡಿತು.
3ನೇ ಸ್ಥಾನದಲ್ಲೇ ಭಾರತ
ವೆಸ್ಟ್‌ಇಂಡೀಸ್ ವಿರುದ್ಧ 3-0ಯಲ್ಲಿ ಸರಣಿ ಕ್ಲೀನ್ ಸ್ವೀಪ್ ಮಾಡಿದ ಭಾರತ ಐಸಿಸಿ ಏಕದಿನ ರಾರಯಂಕಿಂಗ್ ಪಟ್ಟಿಯಲ್ಲಿ 3ನೇ ಸ್ಥಾನ ಕಾಯ್ದುಕೊಂಡಿದೆ. 110 ರೇಟಿಂಗ್ ಅಂಕಗಳನ್ನು ಹೊಂದಿರುವ ಭಾರತ, 4ನೇ ಸ್ಥಾನದಲ್ಲಿರುವ ಪಾಕಿಸ್ತಾನಕ್ಕಿಂತ 4 ಅಂಕ ಮುಂದಿದೆ. ದಕ್ಷಿಣ ಆಫ್ರಿಕಾ ವಿರುದ್ಧ ವರ್ಷದ ಆರಂಭದಲ್ಲಿ ಸರಣಿ ಸೋತು ಹಿನ್ನಡೆ ಅನುಭವಿಸಿದ್ದ ಭಾರತ, ಇದೀಗ ಕಳೆದ 9 ಏಕದಿನ ಪಂದ್ಯಗಳಲ್ಲಿ 8ರಲ್ಲಿ ಜಯ ಸಾಧಿಸಿದೆ. ರಾರಯಂಕಿಂಗ್ ಪಟ್ಟಿಯಲ್ಲಿ 128 ಅಂಕಗಳೊಂದಿಗೆ ನ್ಯೂಜಿಲೆಂಡ್ ಮೊದಲ ಸ್ಥಾನದಲ್ಲಿದ್ದು, 119 ಅಂಕ ಹೊಂದಿರುವ ಇಂಗ್ಲೆಂಡ್ 2ನೇ ಸ್ಥಾನ ಪಡೆದಿದೆ.
