ಇಂಡೋ-ಆಂಗ್ಲೋ ಟೆಸ್ಟ್: ಮೂವರು ವಿಕೆಟ್ ಕೀಪರ್‌ಗಳಲ್ಲಿ ಕೀಪಿಂಗ್ ಮಾಡೋರ್ಯಾರು..?
ಜನವರಿ 25ರಿಂದ ಇಂಗ್ಲೆಂಡ್ ಆರಂಭವಾಗುವ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಆನೌನ್ಸ್ ಆಗಿದೆ. ಆದ್ರೆ ಈ ಟೆಸ್ಟ್ ಸರಣಿಯಲ್ಲಿ ಭಾರತ ಪರ ವಿಕೆಟ್ ಕೀಪರ್ ಕಮ್ ಬ್ಯಾಟರ್ ಆಗಿ ಕಣಕ್ಕಿಳಿಯುವವರು ಯಾರು ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ.
ಬೆಂಗಳೂರು(ಜ.15): ಭಾರತ-ಅಫ್ಘನ್ ಟಿ20 ಸಿರೀಸ್ ನಡೆಯುತ್ತಿದ್ದರೂ ಎಲ್ಲರ ಚಿತ್ತ ಮಾತ್ರ ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯತ್ತ ನೆಟ್ಟಿದೆ. ಯಾಕೆ ಗೊತ್ತಾ..? ತವರಿನಲ್ಲಿ ಟೆಸ್ಟ್ ಸಿರೀಸ್ ನಡೆಯುತ್ತಿದೆ. ಜೊತೆಗೆ ಎಲ್ಲಾ ಸೀನಿಯರ್ಸ್ ಪ್ಲೇಯರ್ಸ್ ಈ ಸರಣಿ ಆಡ್ತಿದ್ದಾರೆ. ಇದರ ಜೊತೆ ಮೂವರು ಕೀಪರ್ಸ್ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ವಿಕೆಟ್ ಹಿಂದೆ ಮುಂದೆ ಕೈಚಳಕ ತೋರಿಸೋರು ಯಾರು..?
ಜನವರಿ 25ರಿಂದ ಇಂಗ್ಲೆಂಡ್ ಆರಂಭವಾಗುವ ಟೆಸ್ಟ್ ಸರಣಿಗೆ ಟೀಂ ಇಂಡಿಯಾ ಆನೌನ್ಸ್ ಆಗಿದೆ. ಆದ್ರೆ ಈ ಟೆಸ್ಟ್ ಸರಣಿಯಲ್ಲಿ ಭಾರತ ಪರ ವಿಕೆಟ್ ಕೀಪರ್ ಕಮ್ ಬ್ಯಾಟರ್ ಆಗಿ ಕಣಕ್ಕಿಳಿಯುವವರು ಯಾರು ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಇದಕ್ಕೆ ಮುಖ್ಯ ಕಾರಣ ಟೆಸ್ಟ್ ತಂಡದಲ್ಲಿ ಮೂವರು ವಿಕೆಟ್ ಕೀಪರ್‌ಗಳು ಸ್ಥಾನ ಪಡೆದಿರೋದು. ಹೌದು, ಮೊದಲೆರಡು ಟೆಸ್ಟ್‌ಗೆ ಆನೌನ್ಸ್ ಆಗಿರೋ ಟೀಮ್ ಇಂಡಿಯಾದಲ್ಲಿ ವಿಕೆಟ್ ಕೀಪರ್ಗಳಾದ ಕೆಎಲ್ ರಾಹುಲ್, ಕೆಎಸ್ ಭರತ್ ಮತ್ತು ಧ್ರುವ್ ಜುರೇಲ್ ಸ್ಥಾನ ಪಡೆದಿದ್ದಾರೆ.
ಆಫ್ರಿಕಾದಲ್ಲಿ ಕೀಪರ್, ಭಾರತದಲ್ಲಿ ಕೇವಲ ಬ್ಯಾಟರ್..!
ಸೌತ್ ಆಫ್ರಿಕಾ ವಿರುದ್ದದ ಎರಡು ಟೆಸ್ಟ್ಗಳ ಸರಣಿಯಲ್ಲಿ ಕನ್ನಡಿಗ ಕೆಎಲ್ ರಾಹುಲ್, ವಿಕೆಟ್ ಕೀಪಿಂಗ್ ಮಾಡಿದ್ದರು. ಟೆಸ್ಟ್ ಕ್ರಿಕೆಟ್ನಲ್ಲಿ ಫಸ್ಟ್ ಟೈಮ್ ಕೀಪಿಂಗ್ ಮಾಡಿದ್ದ ರಾಹುಲ್, ಉತ್ತಮ ಪ್ರದರ್ಶನವನ್ನೇ ನೀಡಿದ್ದರು. ಆದ್ರೂ ಇಂಗ್ಲೆಂಡ್ ಸರಣಿಯಲ್ಲಿ ಅವರನ್ನ ಕೇವಲ ಬ್ಯಾಟರ್ ಆಗಿ ಕಣಕ್ಕಿಳಿಸಲು ಟೀಮ್ ಮ್ಯಾನೇಜ್ಮೆಂಟ್ ನಿರ್ಧರಿಸಿದೆ. ಹಾಗಾಗಿ ರಾಹುಲ್ ಕೈಗೆ ಗ್ಲೌಸ್ ಹಾಕೋದಿಲ್ಲ. ಶ್ರೇಯಸ್ ಅಯ್ಯರ್ ರನ್ ಗಳಿಸಲು ಪರದಾಡುತ್ತಿರುವುದರಿಂದ ರಾಹುಲ್, ನಂಬರ್ 5 ಪ್ಲೇಸ್ನಲ್ಲಿ ಬ್ಯಾಟರ್ ಆಗಿ ಕಣಕ್ಕಿಳಿಯಲಿದ್ದಾರೆ.
ಭರತ್‌ಗೆ ಸಿಗುತ್ತಾ ಮೊದಲೆರಡು ಟೆಸ್ಟ್‌ನಲ್ಲಿ ಸ್ಥಾನ..?
ಕೆ ಎಸ್ ಭರತ್ ಭಾರತ ಪರ ಐದು ಟೆಸ್ಟ್ಗಳನ್ನಾಡಿದ್ದು, 8 ಇನ್ನಿಂಗ್ಸ್‌ಗಳಿಂದ 129 ರನ್ ಹೊಡೆದಿದ್ದಾರೆ. 12 ಕ್ಯಾಚ್ ಹಿಡಿದು, ಒಂದು ಸ್ಟಂಪೌಟ್ ಮಾಡಿದ್ದಾರೆ. ವಿಕೆಟ್ ಹಿಂದೆ ಉತ್ತಮ ಪ್ರದರ್ಶನ ನೀಡಿದ್ರೂ ವಿಕೆಟ್ ಮುಂದೆ ಅಂದ್ರೆ ಬ್ಯಾಟರ್ ಆಗಿ ಅವರ ಪರ್ಫಾಮೆನ್ಸ್ ಅಷ್ಟಕಷ್ಟೆ. ಆದ್ರೂ ಉತ್ತಮ ಕೀಪರ್ ಅನ್ನೋ ಉದ್ದೇಶದಿಂದ ಅವರಿಗೆ ಮೊದಲೆರಡು ಟೆಸ್ಟ್ಗಳಲ್ಲಿ ಆಡಿಸೋ ಸಾಧ್ಯತೆ ಇದೆ. ಈ ಎರಡು ಟೆಸ್ಟ್ನಲ್ಲೂ ವಿಕೆಟ್ ಹಿಂದೆ ಮುಂದೆ ಉತ್ತಮ ಪ್ರದರ್ಶನ ನೀಡಿದ್ರೆ ಉಳಿದ ಮೂರು ಟೆಸ್ಟ್ಗಳಲ್ಲಿ ಪ್ಲೇಯಿಂಗ್-11ನಲ್ಲಿ ಇರಲಿದ್ದಾರೆ. ಆಕಸ್ಮಾತ್ ಎರಡು ಟೆಸ್ಟ್‌ನಲ್ಲಿ ವಿಫಲವಾದ್ರೆ ಟೀಮ್‌ನಿಂದಲೇ ಕಿಕೌಟ್ ಆಗಲಿದ್ದಾರೆ.
ಟೆಸ್ಟ್ ಡೆಬ್ಯುಗೆ ಕಾಯಬೇಕಿದೆ ಜುರೆಲ್
22 ವರ್ಷದ ಉತ್ತರ ಪ್ರದೇಶದ ಧೃವ್ ಜುರೆಲ್, ವಿಕೆಟ್ ಕೀಪರ್ಗ ಕಮ್ ಬ್ಯಾಟರ್ ಆಗಿ ಭಾರತ ಟೆಸ್ಟ್ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಫಸ್ಟ್ ಟೈಮ್ ಟೀಂ ಇಂಟಿಯಾದಲ್ಲಿ ಸ್ಥಾನ ಪಡೆದಿರುವ ಜುರೆಲ್, ಟೆಸ್ಟ್ ಕ್ರಿಕೆಟ್ಗೆ ಪದಾರ್ಪಣೆ ಮಾಡಲು ಕಾಯಬೇಕಾಗಬಹುದು. ಡೊಮೆಸ್ಟಿಕ್ ಕ್ರಿಕೆಟ್ನಲ್ಲಿ ವಿಕೆಟ್ ಹಿಂದೆ ಮುಂದೆ ಅದ್ಭುತ ಪ್ರದರ್ಶನ ನೀಡಿರುವ ಜುರೆಲ್ಗೆ ಅನುಭವ ಕಡಿಮೆ. ಹಾಗಾಗಿ ಮೊದಲೆರಡು ಟೆಸ್ಟ್ಗಳಲ್ಲಿ ಬೆಂಚ್ ಕಾಯಿಸಿ ಆನಂತರ ಅವರಿಗೆ ಅವಕಾಶ ಕೊಡುವ ಸಾಧ್ಯತೆ ಇದೆ. ಒಟ್ನಲ್ಲಿ ಮೂವರು ವಿಕೆಟ್ ಕೀಪರ್ಸ್ ಸ್ಥಾನ ಪಡೆದಿರುವುದು ಉತ್ತಮ ಬೆಳವಣಿಗೆ.
ಸ್ಪೋರ್ಟ್ಸ್ ಬ್ಯುರೋ, ಏಷ್ಯಾನೆಟ್ ಸುವರ್ಣ ನ್ಯೂಸ್