ಮ್ಯಾಂಚೆಸ್ಟರ್(ಜು.24): ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ನಡುವಿನ ಅಂತಿಮ ಹಾಗೂ ನಿರ್ಣಾಯಕ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ಫೀಲ್ಡಿಂಗ್ ಆಯ್ದುಕೊಂಡಿದೆ. ಉಭಯ ತಂಡಗಳು ಕೆಲ ಬದಲಾವಣೆಗಳೊಂದಿಗೆ ಕಣಕ್ಕಿಳಿದಿವೆ.

ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ವೆಸ್ಟ್ ಇಂಡೀಸ್ ಗೆದ್ದುಕೊಂಡಿತ್ತು. ಈ ಮೂಲಕ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿತ್ತು. ಇದಾದ ಬಳಿಕ ಮ್ಯಾಂಚೆಸ್ಟರ್‌ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ರೋಚಕ ಗೆಲುವು ದಾಖಲಿಸುವ ಮೂಲಕ ಸರಣಿ ಸಮ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇದೀಗ ಮೂರನೇ ಟೆಸ್ಟ್ ಪಂದ್ಯ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ. ಅದರಲ್ಲೂ ಕಳೆದ ಮೂರು ದಶಕಗಳಿಂದ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲಲು ವಿಫಲವಾಗಿರುವ ಕೆರಿಬಿಯನ್ ಪಡೆಗೆ ಈ ಬಾರಿ ಗೆಲ್ಲುವ ಸದಾವಕಾಶ ಒದಗಿ ಬಂದಿದೆ. ಆದರೆ ಸದಾ ಅಸ್ಥಿರ ಪ್ರದರ್ಶನಕ್ಕೆ ಕುಖ್ಯಾತವಾಗಿರುವ ವಿಂಡೀಸ್ ಪಡೆ ಈ ಬಾರಿ ಯಾವ ರೀತಿ ಪ್ರದರ್ಶನ ತೋರುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.

ಪ್ರಮುಖ ಬದಲಾವಣೆ: ಇಂಗ್ಲೆಂಡ್ ಪರ ಎರಡು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಜಾಕ್ ಕ್ರಾವ್ಲಿ ಹಾಗೂ ಸ್ಯಾಮ್ ಕರನ್‌ಗೆ ವಿಶ್ರಾಂತಿ ನೀಡಲಾಗಿದ್ದು, ಜೇಮ್ಸ್ ಆಂಡರ್‌ಸನ್ ಹಾಗೂ ಜೋಫ್ರಾ ಆರ್ಚರ್ ತಂಡ ಕೂಡಿಕೊಂಡಿದ್ದಾರೆ. ಇನ್ನು ವೆಸ್ಟ್ ಇಂಡೀಸ್ ಪರ ವೇಗಿ ಅಲ್ಜೇರಿ ಜೋಸೆಫ್ ಅವರ ಬದಲಿಗೆ ದೈತ್ಯ ಆಟಗಾರ ರಾಕೀಂ ಕಾರ್ನವೆಲ್ ತಂಡ ಕೂಡಿಕೊಂಡಿದ್ದಾರೆ.

ತಂಡಗಳು ಹೀಗಿವೆ:

ವೆಸ್ಟ್ ಇಂಡೀಸ್: