ICC T20 World Cup: ಮೊದಲ ಗೆಲುವಿಗಾಗಿ ಬಾಂಗ್ಲಾ-ವಿಂಡೀಸ್‌ ಫೈಟ್‌!

*ಮೊದಲು ಎರಡು ಪಂದ್ಯಗಳಲ್ಲಿ ಸೋಲನುಭವಿಸಿರುವ ವೆಸ್ಟ್‌ಇಂಡೀಸ್‌ ಹಾಗೂ ಬಾಂಗ್ಲಾದೇಶ
*ಶಾರ್ಜಾದಲ್ಲಿ ಇಂದು ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ!
*ಯುಎಇನಲ್ಲಿ ಆಡಿದ ಕಳೆದ 5 ಪಂದ್ಯಗಳಲ್ಲಿ 2ರಲ್ಲಿ ಗೆದ್ದಿರುವ ಬಾಂಗ್ಲಾ

West indies to face Bangladesh in 23rd Match of ICC T20 World Cup

ಶಾರ್ಜಾ(ಅ. 29): ಟಿ20 ವಿಶ್ವಕಪ್‌ನ (T20 World Cup) ಸೂಪರ್‌-12ರ ಹಂತದಲ್ಲಿ ಆಡಿರುವ ಎರಡೂ ಪಂದ್ಯಗಳಲ್ಲಿ ಸೋಲನುಭವಿಸಿರುವ ಹಾಲಿ ಚಾಂಪಿಯನ್‌ ವೆಸ್ಟ್‌ಇಂಡೀಸ್‌ (West Indies) ಹಾಗೂ ಬಾಂಗ್ಲಾದೇಶ (Bangladesh) ಶುಕ್ರವಾರ ‘ಮಾಡು ಇಲ್ಲವೇ ಮಡಿ’ ಪಂದ್ಯದಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. ಸೆಮಿಫೈನಲ್‌ ರೇಸ್‌ನಲ್ಲಿ ಉಳಿಯಬೇಕಾದರೆ ಉಭಯ ತಂಡಗಳಿಗೂ ಗೆಲುವು ಅನಿವಾರ್ಯವಾಗಿದ್ದು, ಸೋಲುವ ತಂಡದ ಸೆಮೀಸ್‌ ಆಸೆ ಬಹುತೇಕ ಭಗ್ನಗೊಳ್ಳಲಿದೆ.

ICC T20 World Cup: ಪಾಕಿಸ್ತಾನದ ಜಯದ ಓಟಕ್ಕೆ ಬ್ರೇಕ್‌ ಹಾಕುತ್ತಾ ಆಫ್ಘನ್‌?

ಆರಂಭಿಕ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ಕೇವಲ 55 ರನ್‌ಗೆ ಆಲೌಟಾಗಿದ್ದ ಕೀರನ್‌ ಪೊಲ್ಲಾರ್ಡ್‌ ಪಡೆ, 2ನೇ ಪಂದ್ಯದಲ್ಲಿ ದ.ಆಫ್ರಿಕಾ ವಿರುದ್ಧ 8 ವಿಕೆಟ್‌ ಸೋಲನುಭವಿಸಿತ್ತು. ಹಲವು ಸ್ಫೋಟಕ ಬ್ಯಾಟರ್‌ಗಳನ್ನು ಹೊಂದಿರುವ ತಂಡದಲ್ಲಿ ಇದುವರೆಗೂ ಯಾವ ಆಟಗಾರನಿಂದಲೂ ಸ್ಥಿರ ಪ್ರದರ್ಶನ ಕಂಡುಬಂದಿಲ್ಲ. ಯುಎಇ ಪಿಚ್‌ಗಳು ವಿಂಡೀಸ್‌ನ ಆಟದ ಶೈಲಿಗೆ ಸರಿಹೊಂದುತ್ತಿಲ್ಲ. ತಂಡ ಇಲ್ಲಿ 2 ಅಭ್ಯಾಸ ಪಂದ್ಯ ಸೇರಿ ಆಡಿರುವ ಒಟ್ಟು 7 ಪಂದ್ಯಗಳಲ್ಲಿ ಗೆಲುವನ್ನೇ ಕಂಡಿಲ್ಲ.

T20 World Cup 2021: ವಾರ್ನರ್ ಅಬ್ಬರಕ್ಕೆ ಸೋಲಿಗೆ ಶರಣಾದ ಶ್ರೀಲಂಕಾ, 2ನೇ ಸ್ಥಾನಕ್ಕೆ ಆಸ್ಟ್ರೇಲಿಯಾ!

ಇನ್ನೊಂದೆಡೆ, ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಸೋತಿದ್ದ ಬಾಂಗ್ಲಾ, 2ನೇ ಪಂದ್ಯದಲ್ಲಿ ಇಂಗ್ಲೆಂಡ್‌ಗೆ ಶರಣಾಗಿತ್ತು. ಬಾಂಗ್ಲಾ ಕೂಡಾ ವಿಂಡೀಸ್‌ ನಂತೆಯೇ ಸೋಲಿನ ಸರಪಳಿ ಕಳಚುವ ಕಾತರದಲ್ಲಿದೆ. ಯುಎಇನಲ್ಲಿ ಆಡಿದ ಕಳೆದ 5 ಪಂದ್ಯಗಳಲ್ಲಿ ಕೇವಲ 2ರಲ್ಲಿ ಗೆದ್ದಿರುವ ಬಾಂಗ್ಲಾ ಈ ಪಂದ್ಯದಲ್ಲಿ ಗೆಲ್ಲುವ ಗುರಿ ಇಟ್ಟುಕೊಂಡಿದೆ.

2ನೇ ಸ್ಥಾನಕ್ಕೆ ಜಿಗಿದ ಆಸ್ಟ್ರೇಲಿಯಾ!

ಡೇವಿಡ್ ವಾರ್ನರ್(David Warner) ಸ್ಫೋಟಕ ಬ್ಯಾಟಿಂಗ್ ಹಾಗೂ ಆಸೀಸ್(Australia) ತಂಡದ ಮಿಂಚಿನ ಬೌಲಿಂಗ್ ದಾಳಿಯಿಂದ ಶ್ರೀಲಂಕಾ(Srilanka) ವಿರುದ್ಧ ಆಸ್ಟ್ರೇಲಿಯಾ 7 ವಿಕೆಟ್ ಗೆಲುುವು ಸಾಧಿಸಿದೆ. ಈ ಮೂಲಕ T20 World Cup 2021 ಟೂರ್ನಿಯಲ್ಲಿ ಸತತ 2ನೇ ಗೆಲುವು ದಾಖಲಿಸಿದೆ. ಇಷ್ಟೇ ಅಲ್ಲ ಅಂಕಪಟ್ಟಿಯಲ್ಲಿ(Points Table) 3ನೇ ಸ್ಥಾನದಿಂದ 2ನೇ ಸ್ಥಾನಕ್ಕೆ ಜಿಗಿದಿದೆ. ಇತ್ತ ಗೆಲುವಿನ ವಿಶ್ವಾಸದಲ್ಲಿದ್ದ ಶ್ರೀಲಂಕಾ ನಿರಾಸೆ ಅನುಭವಿಸಿದೆ.

ಪಾಕಿಸ್ತಾನದ ಜಯದ ಓಟಕ್ಕೆ ಬ್ರೇಕ್‌ ಹಾಕುತ್ತಾ ಆಫ್ಘನ್‌?

T20 ವಿಶ್ವಕಪ್‌ ಗೆಲ್ಲುವ ಫೇವರಿಟ್‌ ಎನಿಸಿಕೊಂಡಿದ್ದ ಎರಡು ತಂಡಗಳಿಗೆ ಸೋಲಿನ ರುಚಿ ತೋರಿಸಿರುವ ಪಾಕಿಸ್ತಾನ (Pakistan), ಸೂಪರ್‌-12ರ ಹಂತದ 3ನೇ ಪಂದ್ಯದಲ್ಲಿ ಇಂದು(‌ಅ. 29) ಅಫ್ಘಾನಿಸ್ತಾನ (Afghanistan) ವಿರುದ್ಧ ಸೆಣಸಾಡಲಿದೆ. ಮಾಜಿ ಚಾಂಪಿಯನ್‌ ಪಾಕಿಸ್ತಾನ ಈ ಬಾರಿ ವಿಶ್ವಕಪ್‌ ಗೆಲ್ಲಲು ಸಾಧ್ಯತೆ ಇರುವ ಪ್ರಮುಖ ತಂಡವಾಗಿದ್ದು, ಯುಎಇ ಪಿಚ್‌ಗಳಲ್ಲಿ ಹೊಂದಿರುವ ಉತ್ತಮ ದಾಖಲೆಯನ್ನು ಮುಂದುವರಿಸುವ ಯೋಚನೆಯಲ್ಲಿದೆ.

T20 World Cup: ಟೀಂ ಇಂಡಿಯಾ ವಿಶ್ವಕಪ್‌ ಗೆಲ್ಲಲಿದೆ ಎಂದು ಭವಿಷ್ಯ ನುಡಿದ ಸೆಹ್ವಾಗ್

ಈ ಪಂದ್ಯದಲ್ಲೂ ಗೆದ್ದರೆ ಸೆಮಿಫೈನಲ್‌ (Semi-Final) ಸ್ಥಾನ ಬಹುತೇಕ ಖಚಿತವಾಗಲಿದೆ. ಉಭಯ ತಂಡಗಳು ಟಿ20ಯಲ್ಲಿ ಕೇವಲ 2ನೇ ಬಾರಿ ಮುಖಾಮುಖಿಯಾಗುತ್ತಿವೆ. 2013ರಲ್ಲಿ ನಡೆದಿದ್ದ ಮೊದಲ ಮುಖಾಮುಖಿಯಲ್ಲಿ ಪಾಕ್‌ ತಂಡ ಜಯಗಳಿಸಿತ್ತು. ಪಾಕಿಸ್ತಾನ ತಂಡದಲ್ಲಿ ಅನುಭವಿಗಳೇ ದಂಡೇ ಇದೆ. ಇನ್ನು ಪಾಕಿಸ್ತಾನ, ಯುಎಇನಲ್ಲಿ ಆಡಿರುವ ಕಳೆದ 13 ಪಂದ್ಯಗಳಲ್ಲೂ ಗೆದ್ದಿರುವುದು ತಂಡದ ಲಯವನ್ನು ತೋರಿಸುತ್ತದೆ.

ಅಂಕಪಟ್ಟಿ:

ಶ್ರೀಲಂಕಾ (Sri Lanka) ವಿರುದ್ಧದ ಗೆಲುವಿನ ಬಳಿಕ ಆಸ್ಟ್ರೇಲಿಯಾ (Australia) ಮೊದಲ ಗುಂಪಿನ ಅಂಕಪಟ್ಟಿಯಲ್ಲಿ 3ನೇ ಸ್ಥಾನದಿಂದ 2ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಮೊದಲ ಸ್ಥಾನದಲ್ಲಿರುವ ಇಂಗ್ಲೆಂಡ್ (England) ಕೂಡ 2 ಪಂದ್ಯದಿಂದ 2 ಗೆಲುವು ಸಾಧಿಸಿ 4 ಅಂಕ ಸಂಪಾದಿಸಿದೆ. ಆದರೆ ಆಸ್ಟ್ರೇಲಿಯಾಗಿಂತ ಉತ್ತಮ ರನ್‌ರೇಟ್ ಹೊಂದಿರುವ ಕಾರಣ ಮೊದಲ ಸ್ಥಾನದಲ್ಲಿದೆ. ಇತ್ತ ಶ್ರೀಲಂಕಾ 2ನೇ ಸ್ಥಾನದಿಂದ 3ನೇ ಸ್ಥಾನಕ್ಕೆ ಜಾರಿದೆ.

ಎರಡನೇ ಗುಂಪಿನ ಅಂಕಪಟ್ಟಿಯಲ್ಲಿ ಪಾಕಿಸ್ತಾನ 2 ಪಂದ್ಯ ಗೆದ್ದು ಮೊದಲ ಸ್ಥಾನದಲ್ಲಿದೆ. ಇನ್ನು ತಲಾ ಒಂದೊಂದು ಪಂದ್ಯ ಗೆದ್ದಿರುವ ಆಫ್ಘಾನಿಸ್ತಾನ ಹಾಗೂ ನಮಿಬಿಯಾ ಅಂಕಪಟ್ಟಿಯಲ್ಲಿ 2 ಮತ್ತು 3ನೇ ಸ್ಥಾನದಲ್ಲಿದೆ. ಒಂದೊಂದು ಸೋಲು ಕಂಡಿರುವ ನ್ಯೂಜಿಲೆಂಡ್ ಹಾಗೂ ಭಾರತ 4 ಮತ್ತು 5ನೇ ಸ್ಥಾನದಲ್ಲಿದೆ. ಇತ್ತ 2 ಸೋಲು ಅನುಭವಿಸಿರುವ ಸ್ಕಾಟ್‌ಲೆಂಡ್ ಅಂತಿಮ ಸ್ಥಾನದಲ್ಲಿದೆ.

Latest Videos
Follow Us:
Download App:
  • android
  • ios