ಬ್ರಿಡ್ಜ್‌ಟೌನ್‌(ಜು.03): ವೆಸ್ಟ್‌ಇಂಡೀಸ್‌ನ ಮಾಜಿ ಕ್ರಿಕೆ​ಟಿಗ ಸರ್‌.ಎ​ವ​ರ್ಟನ್‌ ವೀಕ್ಸ್‌ ಬುಧ​ವಾರ ನಿಧ​ನ​ರಾ​ಗಿ​ದ್ದಾರೆ. ಅವ​ರಿಗೆ 95 ವರ್ಷ ವಯ​ಸ್ಸಾ​ಗಿತ್ತು. 

ವಿಂಡೀಸ್‌ನ ದಿಗ್ಗಜ ಬ್ಯಾಟ್ಸ್‌ಮನ್‌ಗಳ ಸಾಲಿ​ನಲ್ಲಿ ಸ್ಥಾನ ಪಡೆ​ದಿದ್ದ ವೀಕ್ಸ್‌ 1948ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪಾದಾ​ರ್ಪಣೆ ಮಾಡಿ​ದ್ದರು. ಅದೇ ವರ್ಷ ಸತತ 5 ಶತಕಗಳನ್ನು ಬಾರಿಸಿ ವಿಶ್ವದಾಖ​ಲೆ ಬರೆ​ದಿ​ದ್ದರು. ಜಮೈಕಾದಲ್ಲಿ ಇಂಗ್ಲೆಂಡ್ ವಿರುದ್ಧ ಎವರ್ಟನ್(141) ಚೊಚ್ಚಲ ಶತಕ ಬಾರಿಸಿದ್ದರು. ಇದಾದ ಬಳಿಕ ಭಾರತ ವಿರುದ್ಧ ಕ್ರಮವಾಗಿ 128, 194, 162 ಹಾಗೂ 101 ರನ್ ಚಚ್ಚುವ ಮೂಲಕ ವಿಶ್ವದಾಖಲೆ ಬರೆದಿದ್ದರು. 

ಐಸಿಸಿ ಅಧ್ಯಕ್ಷ ಸ್ಥಾನ​ದಿಂದ ಕೆಳ​ಗಿಳಿದ ಶಶಾಂಕ್‌ ಮನೋಹರ್

48 ಟೆಸ್ಟ್‌ಗಳನ್ನು ಆಡಿದ್ದ ವೀಕ್ಸ್‌, 58.61ರ ಸರಾ​ಸ​ರಿ​ಯಲ್ಲಿ 4455 ರನ್‌ ಗಳಿ​ಸಿ​ದ್ದರು. ಗಾಯದ ಸಮಸ್ಯೆಯಿಂದಾಗಿ ಅವರ ವೃತ್ತಿಜೀವನ ಬೇಗ ಅಂತ್ಯವಾಯಿತು.  ದಿಗ್ಗಜ ಆಟಗಾರನ ನಿಧನಕ್ಕೆ ಕ್ರಿಕೆಟ್ ಜಗತ್ತು ಕಂಬನಿ ಮಿಡಿದಿದೆ. ಅನಿಲ್ ಕುಂಬ್ಳೆ, ವಿವಿಎಸ್ ಲಕ್ಷ್ಮಣ್ ಸೇರಿದಂತೆ ಹಲವು ಕ್ರಿಕೆಟಿಗರು ಎವರ್ಟನ್ ನಿಧನಕ್ಕೆ ಸಾಮಾಜಿಕ ಜಾಲತಾಣಗಳ ಮೂಲಕ ಸಂತಾಪ ಸೂಚಿಸಿದ್ದಾರೆ.