Asianet Suvarna News Asianet Suvarna News

ಐಸಿಸಿ ಅಧ್ಯಕ್ಷ ಸ್ಥಾನ​ದಿಂದ ಕೆಳ​ಗಿಳಿದ ಶಶಾಂಕ್‌ ಮನೋಹರ್

ಬಿಸಿಸಿಐ ಮಾಜಿ ಅಧ್ಯಕ್ಷ ಶಶಾಂಕ್ ಮನೋಹರ್ ಐಸಿಸಿ ಮುಖ್ಯಸ್ಥರ ಸ್ಥಾನದಿಂದ ಕೆಳಗಿಳಿದಿದ್ದಾರೆ. ಇದೀಗ ಇದೀಗ ಹಾಂಕಾಂಗ್‌ನ ಇಮ್ರಾನ್ ಖವಾಜ ಹಂಗಾಮಿ  ಐಸಿಸಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Former BCCI president Shashank Manohar steps down from ICC chairman post
Author
Dubai - United Arab Emirates, First Published Jul 2, 2020, 8:39 AM IST | Last Updated Jul 2, 2020, 8:39 AM IST

ದುಬೈ(ಜು.02): ಅಂತಾ​ರಾ​ಷ್ಟ್ರೀಯ ಕ್ರಿಕೆಟ್‌ ಸಮಿತಿ (ಐ​ಸಿ​ಸಿ) ಅಧ್ಯಕ್ಷ ಸ್ಥಾನ​ದಿಂದ ಶಶಾಂಕ್‌ ಮನೋ​ಹರ್‌ ಬುಧ​ವಾರ ಕೆಳ​ಗಿ​ಳಿ​ದಿ​ದ್ದಾರೆ. ಚುನಾ​ವಣೆ ಪ್ರಕ್ರಿಯೆ ಮುಕ್ತಾ​ಯ​ಗೊ​ಳ್ಳುವ ವರೆ​ಗೂ ಉಪಾ​ಧ್ಯಕ್ಷ ಇಮ್ರಾನ್‌ ಖವಾ​ಜ, ಹಂಗಾಮಿ ಅಧ್ಯಕ್ಷರಾಗಿ ಕಾರ್ಯನಿ​ರ್ವ​ಹಿ​ಸ​ಲಿ​ದ್ದಾರೆ ಎಂದು ಐಸಿಸಿ ತನ್ನ ಪ್ರಕ​ಟಣೆಯಲ್ಲಿ ತಿಳಿ​ಸಿದೆ. 

ಶಶಾಂಕ್‌ 2 ಬಾರಿ 2 ವರ್ಷಗಳ ಕಾರ್ಯಾ​ವಧಿಯನ್ನು ಪೂರೈ​ಸಿ​ದ್ದರು. ಐಸಿಸಿ ನಿಯ​ಮದ ಪ್ರಕಾ​ರ, ಶಶಾಂಕ್‌ ಮತ್ತೊಂದು ಅವ​ಧಿಗೆ ಅಧ್ಯಕ್ಷರಾಗಿ ಮುಂದು​ವ​ರಿ​ಯ​ಬ​ಹು​ದಿತ್ತು. ಆದರೆ ಶಶಾಂಕ್‌ ಅಧ್ಯಕ್ಷ ಸ್ಥಾನ ತ್ಯಜಿ​ಸಲು ನಿರ್ಧ​ರಿ​ಸಿ​ದರು ಎಂದು ಐಸಿಸಿ ತಿಳಿ​ಸಿದೆ. 

ಶಶಾಂಕ್ ಮನೋಹರ್ ನವೆಂಬರ್ 2015ರಲ್ಲಿ ಐಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು. ಇದೀಗ ಹಾಂಕಾಂಗ್‌ನ ಇಮ್ರಾನ್ ಖವಾಜ ಹಂಗಾಮಿ  ಐಸಿಸಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ಮುಂದಿನ ಅಧ್ಯಕ್ಷರ ಆಯ್ಕೆಗೆ ಸದ್ಯ​ದಲ್ಲೇ ಚುನಾ​ವಣೆ ಪ್ರಕ್ರಿಯೆ ಆರಂಭ​ಗೊ​ಳ್ಳ​ಲಿದೆ.

ಸಾರ್ವಕಾಲಿಕ ಶ್ರೇಷ್ಠ IPL ತಂಡ ಪ್ರಕಟಿಸಿದ ಎಬಿ ಡಿವಿಲಿಯರ್ಸ್..!

ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ಮಾಜಿ ಅಧ್ಯಕ್ಷ ಕಾಲಿನ್ ಗ್ರೇವ್ಸ್ ಹಾಗೂ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಐಸಿಸಿ ಅಧ್ಯಕ್ಷ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಸುಪ್ರೀಂ ಕೋರ್ಟ್‌ ಗಂಗೂಲಿಗೆ ಬಿಸಿಸಿಐ ಅಧ್ಯಕ್ಷರಾಗಿ ಮುಂದುವರೆಯಲು ಅವಕಾಶ ನೀಡುತ್ತದೆಯೋ ಇಲ್ಲವೋ ಎನ್ನುವುದರ ಆಧಾರದಲ್ಲಿ ದಾದಾ ಸ್ಪರ್ಧೆ ನಿರ್ಧಾರವಾಗಲಿದೆ.
 

Latest Videos
Follow Us:
Download App:
  • android
  • ios