Asianet Suvarna News Asianet Suvarna News

Ind vs WI 1st T20I: ವಿಂಡೀಸ್‌ಗೆ ಶರಣಾದ ಐಪಿ​ಎಲ್‌ ಸ್ಟಾ​ರ್ಸ್‌!

ಮೊದಲ ಟಿ20: ಭಾರತ ವಿರುದ್ಧ ವಿಂಡೀಸ್‌ಗೆ 4 ರನ್‌ ಜಯ
ತಂಡ ಆಯ್ಕೆ ಎಡ​ವಟ್ಟು, ಬ್ಯಾಟಿಂಗ್‌ ವೈಫಲ್ಯಕ್ಕೆ ಬೆಲೆ​ತೆತ್ತ ಭಾರ​ತ
ವಿಂಡೀಸ್‌ 149/6, ಪೋವೆಲ್‌ 48 ರನ್‌
ಸುಲಭ ಗುರಿ ಬೆನ್ನ​ತ್ತಲು ಪರ​ದಾ​ಡಿದ ಭಾರತ 145/9
ವಿಂಡೀಸ್‌ಗೆ 1-0 ಮುನ್ನ​ಡೆ

West Indies Holder McCoy and Shepherd take two wickets each to hand India 4 run loss kvn
Author
First Published Aug 4, 2023, 9:37 AM IST

ತರೌಬ(ಆ.04): ವಿಂಡೀಸ್‌ ವಿರುದ್ಧ ಮೊದಲ ಟಿ20 ಪಂದ್ಯ​ದಲ್ಲಿ ‘ಐಪಿ​ಎಲ್‌ ಸ್ಟಾರ್‌’ಗಳನ್ನು ಒಳ​ಗೊಂಡ ಭಾರತ ತಂಡ 4 ರನ್‌ ಸೋಲು ಕಂಡಿದೆ. ತಂಡದ ಆಯ್ಕೆಯಲ್ಲಿ ಎಡ​ವ​ಟ್ಟು ಹಾಗೂ ಬ್ಯಾಟಿಂಗ್‌​ ವೈಫಲ್ಯ ಸೋಲಿಗೆ ಪ್ರಮು​ಖ ಕಾರ​ಣ​ವಾ​ಗಿ ಕಂಡು​ಬಂತು. 5 ಪಂದ್ಯ​ಗಳ ಸರ​ಣಿ​ಯಲ್ಲಿ ವಿಂಡೀಸ್‌ 1-0 ಮುನ್ನಡೆ ಪಡೆ​ಯಿತು.

ಮೊದಲು ಬ್ಯಾಟ್‌ ಮಾಡಲು ಇಳಿದ ವಿಂಡೀಸ್‌ ಪವರ್‌-ಪ್ಲೇ ಮುಕ್ತಾಯಕ್ಕೆ 2 ವಿಕೆಟ್‌ಗೆ 54 ರನ್‌ ಸಿಡಿ​ಸಿ​ದರೂ, 10 ಓವರ್‌ ಮುಕ್ತಾ​ಯಕ್ಕೆ 3 ವಿಕೆಟ್‌ಗೆ 69 ರನ್‌ ಗಳಿ​ಸಿತು. ನಾಯಕ ರೋವ್ಮನ್‌ ಪೋವೆಲ್‌(48)ರ ಹೋರಾ​ಟದ ನೆರ​ವಿ​ನಿಂದ ಕೊನೆಯ 10 ಓವ​ರಲ್ಲಿ 80 ರನ್‌ ಕಲೆಹಾಕಿದ ವಿಂಡೀಸ್‌ 20 ಓವ​ರಲ್ಲಿ 6 ವಿಕೆಟ್‌ಗೆ 149 ರನ್‌ಗಳ ಸ್ಪರ್ಧಾ​ತ್ಮಕ ಮೊತ್ತ ದಾಖ​ಲಿ​ಸಿತು.

ಆರಂಭಿ​ಕ​ರಾದ ಶುಭ್‌ಮನ್‌ ಗಿಲ್‌(03), ಇಶಾನ್‌ ಕಿಶನ್‌(06) ತಂಡಕ್ಕೆ ಉತ್ತಮ ಆರಂಭ ಒದ​ಗಿ​ಸಲು ವಿಫ​ಲ​ರಾ​ದರು. ಸೂರ್ಯ​ಕು​ಮಾರ್‌(21) ನಿರೀ​ಕ್ಷಿತ ಪ್ರದ​ರ್ಶ​ನ ತೋರ​ಲಿಲ್ಲ. ಪದಾ​ರ್ಪಣಾ ಪಂದ್ಯ​ದಲ್ಲೇ ಆಕ​ರ್ಷಕ ಆಟ​ವಾ​ಡಿದ ತಿಲಕ್‌ ವರ್ಮಾ 22 ಎಸೆ​ತ​ದಲ್ಲಿ 39 ರನ್‌ ಸಿಡಿ​ಸಿ​ದರು. ಆದರೆ 16ನೇ ಓವ​ರಲ್ಲಿ ಹಾರ್ದಿಕ್‌, ಸ್ಯಾಮ್ಸನ್‌ ಇಬ್ಬರೂ ಔಟಾ​ಗಿದ್ದು ಪಂದ್ಯ ವಿಂಡೀಸ್‌ನತ್ತ ವಾಲು​ವಂತೆ ಮಾಡಿತು. ಕೊನೆ​ಯಲ್ಲಿ ಅಶ್‌ರ್‍ದೀಪ್‌ 2 ಬೌಂಡರಿ ಬಾರಿಸಿ ಸಾಹಸ ಮೆರೆ​ಯುವ ಯತ್ನ ನಡೆ​ಸಿ​ದ​ರೂ, ಗೆಲು​ವಿಗೆ ಸಾಕಾ​ಗ​ಲಿಲ್ಲ. ಭಾರತ 9 ವಿಕೆಟ್‌ ಕಳೆ​ದು​ಕೊಂಡು 145 ರನ್‌ ಗಳಿ​ಸ​ಲಷ್ಟೇ ಶಕ್ತ​ವಾ​ಯಿತು.

West Indies vs India: ಭಾರತದ ಬೌಲಿಂಗ್‌ಗೆ ಪರದಾಡಿದ ವಿಂಡೀಸ್‌ ಬ್ಯಾಟಿಂಗ್‌!

ಆಯ್ಕೆ ಎಡ​ವ​ಟ್ಟು: 3ನೇ ಏಕ​ದಿನ ಪಂದ್ಯಕ್ಕೆ ಉಪ​ಯೋ​ಗಿ​ಸಿದ್ದ ಪಿಚ್‌ ಈ ಪಂದ್ಯಕ್ಕೂ ಬಳಕೆಯಾಯಿತು. ನಿಧಾ​ನ​ಗ​ತಿಯ ಪಿಚ್‌ನಲ್ಲಿ ಭಾರತ ಕೇವಲ 7 ತಜ್ಞ ಬ್ಯಾಟರ್‌ಗಳೊಂದಿಗೆ ಕಣ​ಕ್ಕಿ​ಳಿ​ಯಲು ನಿರ್ಧ​ರಿ​ಸಿದ್ದು, ಅಚ್ಚರಿ ಮೂಡಿ​ಸಿತು. ಹೆಚ್ಚು​ವರಿ ಸ್ಪಿನ್ನರ್‌ ಆಡಿ​ಸುವ ಪ್ರಯೋ​ಗವೂ ಕೈಹಿ​ಡಿ​ಯ​ಲಿ​ಲ್ಲ.

ಸ್ಕೋರ್‌: ವಿಂಡೀಸ್‌ 20 ಓವ​ರಲ್ಲಿ 149/6 (ಪೋ​ವೆಲ್‌ 48, ಪೂರನ್‌ 41, ಅಶ್‌ರ್‍ದೀಪ್‌ 2-31) 
ಭಾರತ 20 ಓವ​ರಲ್ಲಿ 145/9 (ತಿಲಕ್‌ 39, ಸೂರ್ಯ 21, ಹೋಲ್ಡರ್‌ 2-19) 
ಪಂದ್ಯ​ಶ್ರೇ​ಷ್ಠ: ಜೇಸನ್‌ ಹೋಲ್ಡರ್‌

ಟರ್ನಿಂಗ್‌ ಪಾಯಿಂಟ್‌

ಭಾರ​ತಕ್ಕೆ 30 ಎಸೆ​ತ​ದಲ್ಲಿ ಗೆಲ್ಲಲು ಕೇವಲ 37 ರನ್‌ ಬೇಕಿತ್ತು. ಆದರೆ 16ನೇ ಓವರ್‌ ಪಂದ್ಯದ ಗತಿ ಬದ​ಲಿ​ಸಿತು. ಹಾರ್ದಿಕ್‌ ಹಾಗೂ ಸ್ಯಾಮ್ಸನ್‌ ಇಬ್ಬರೂ ಔಟಾ​ದರು. ಇದು ತಂಡದ ಸೋಲಿಗೆ ಪ್ರಮುಖ ಕಾರ​ಣ​ವೆ​ನಿ​ಸಿ​ತು.

ಇಂಟ್ರೆಸ್ಟಿಂಗ್ ಅಂಕಿ-ಅಂಶ:

200 ಪಂದ್ಯ: ಭಾರತ 200 ಟಿ20 ಪಂದ್ಯ​ಗ​ಳ​ನ್ನಾ​ಡಿದ 2ನೇ ತಂಡ ಎನಿ​ಸಿತು. ಪಾಕಿ​ಸ್ತಾ​ನ​(223 ಪಂದ್ಯ) ಈ ಮೈಲಿ​ಗಲ್ಲು ತಲು​ಪಿದ ಮೊದಲ ತಂಡ.

02ನೇ ಬೌಲರ್‌: ಒಂದೇ ಪ್ರವಾಸದಲ್ಲಿ ಮೂರೂ ಮಾದ​ರಿಯ ಕ್ರಿಕೆಟ್‌ಗೆ ಪಾದಾ​ರ್ಪಣೆ ಮಾಡಿದ 2ನೇ ಭಾರತೀಯ ಮುಕೇಶ್‌. ನಟ​ರಾಜನ್‌ ಮೊದ​ಲಿಗ.

Follow Us:
Download App:
  • android
  • ios